Viral Video: ನೀರಿಗೆ ಹಾರಿ ಪ್ರಾಣ ಕಳೆದುಕೊಳ್ಳಲು ಹೊರಟ ಮಹಿಳೆಯನ್ನು ಸಮಯಕ್ಕೆ ಸರಿಯಾಗಿ ರಕ್ಷಿಸಿದ ಪೊಲೀಸರು; ವಿಡಿಯೋ ನೋಡಿ
ಮಹಿಳೆಯು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಸೇತುವೆಯ ತುತ್ತ ತುದಿಗೆ ನಿಂತಿರುವ ದೃಶ್ಯ ಪೊಲೀಸರ ಕಣ್ಣಿಗೆ ಬೀಳುತ್ತಿದ್ದಂತೆಯೇ ತಡ ಮಾಡದೇ ಆಕೆಯ ಪ್ರಾಣವನ್ನು ಉಳಿಸಿದ್ದಾರೆ. ಈ ಘಟನೆಯ ವಿಡಿಯೋ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ.
ಮಹಿಳೆಯೋರ್ವಳು ಶ್ರೀನಗರದ ಬೂದಶ ಬ್ರಿಡ್ಜ್ನಲ್ಲಿ ನಿಂತು ನೀರಿಗೆ ಹಾರಿ ಪ್ರಾಣ ಕಳೆದುಕೊಳ್ಳಲು ಸಿದ್ಧಳಾಗಿರುತ್ತಾಳೆ. ಅವಳ ಈ ನಡತೆಯನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್) ಗಮನಿಸಿದ ತಕ್ಷಣವೇ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಇವರ ಸಮಯ ಪ್ರಜ್ಞೆಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.
ಈ ಘಟನೆ ಶ್ರೀನಗರದ ಬೂದಶ ಬ್ರಿಡ್ಜ್ ಬಳಿ ನಡೆದಿದೆ. ಮಹಿಳೆಯು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಸೇತುವೆಯ ತುತ್ತ ತುದಿಗೆ ನಿಂತಿರುವ ದೃಶ್ಯ ಪೊಲೀಸರ ಕಣ್ಣಿಗೆ ಬೀಳುತ್ತಿದ್ದಂತೆಯೇ ತಡ ಮಾಡದೇ ಆಕೆಯ ಪ್ರಾಣವನ್ನು ಉಳಿಸಿದ್ದಾರೆ. ಈ ಘಟನೆಯ ವಿಡಿಯೋ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಬಾರೀ ಸುದ್ದಿಯಲ್ಲಿದೆ.
ಮಹಿಳೆ ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಿರ್ಧರಿಸಿದ ವಿಷಯ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋವನ್ನು ಶ್ರೀನಗರ ಪೊಲೀಸರು ಹಂಚಿಕೊಂಡಿದ್ದು ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿ ಮಹಿಳೆಯ ಜೀವವನ್ನು ರಕ್ಷಿಸಿದ ಪೊಲೀಸರಿಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಅಂದು ನಾನು ನನ್ನ ಕರ್ತವ್ಯದಲ್ಲಿದ್ದೆ. ತತ್ ಕ್ಷಣ ಮಹಿಳೆ ಸೇತುವೆಯ ಅಂಚಿನಲ್ಲಿ ನಿಂತಿರುವುದು ಕಂಡಿತು. ತಡಮಾಡದೇ ಅವಳನ್ನು ರಕ್ಷಿಸುವತ್ತ ನಮ್ಮ ನಡೆ ಸಾಗಿತು. ನನ್ನ ಸಿಬ್ಬಂದಿ ನನಗೆ ಸಹಾಯ ಮಾಡಿದರು ಎಂದು ಪೊಲೀಸ್ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ.
This video is being circulated on social media. It is clarified that the lady attempted to jump into river Jehlum from Budshah Bridge, Srinagar. She was restrained by the @JmuKmrPolice and CRPF jawans deployed there. Lady police couldn’t assist given the urgency of the situation. pic.twitter.com/A8lqD8FAq8
— Srinagar Police (@SrinagarPolice) May 31, 2021
ಮಹಿಳೆಯ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾಗಿರುವುದು ದೊಡ್ಡ ಕೆಲಸ ಎಂದು ನೆಟ್ಟಿಗರೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇನ್ನೋರ್ವರು ತಮ್ಮ ಅನಿಸಿಕೆ ಹೇಳಿದ್ದು, ಕೊರೊನಾ ಲಾಕ್ಡೌನ್ ಮತ್ತು ಕೊರೊನಾ ಸೋಂಕು ಕೌಟುಂಬಗಳ ಮೇಲೆ ಪರಿಣಾಮ ಬೀರುವುದರಿಂದ ಜನರು ತೀವ್ರ ಒತ್ತಡದಲ್ಲಿದ್ದಾರೆ. ತೀವ್ರ ಆರ್ಥಿಕ ತೊಂದರೆಯೂ ಆಗಿದೆ. ಪ್ರತೀ ಸ್ಥಳೀಯ ಪ್ರದೇಶದ ಕೌನ್ಸೆಲಿಂಗ್ ಕೇಂದ್ರಗಳನ್ನು ಸಕ್ರಿಯವಾಗಿ ತೆರೆದಿಡುವ ಅವಶ್ಯಕತೆ ಪ್ರಸ್ತುತ ಸಮಯದಲ್ಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:
ಹರಿತ ಆಯುಧದಿಂದ ಹೊಡೆದು ನಾಯಿಯನ್ನು ಕೊಂದ ವಿಡಿಯೋ ವೈರಲ್; ವ್ಯಕ್ತಿ ಬಂಧನ
ಜೀಪಿನತ್ತ ಪೊಲೀಸರು ಎಳೆದೊಯ್ತಾ ಇದ್ರೂ.. ಚಹಾದ ಕಪ್ ಬಿಡಲಿಲ್ವಲ್ಲಾ ಈ ಯುವಕರು! ವಿಡಿಯೋ ವೈರಲ್
Published On - 5:17 pm, Tue, 1 June 21