AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿತ ಆಯುಧದಿಂದ ಹೊಡೆದು ನಾಯಿಯನ್ನು ಕೊಂದ ವಿಡಿಯೋ ವೈರಲ್​; ವ್ಯಕ್ತಿ ಬಂಧನ

ಬಂಧಿತ ವ್ಯಕ್ತಿ ಭುವನೇಶ್ವರದಿಂದ ಕೇವಲ 50ಕಿ.ಮೀಟರ್​ ದೂರದಲ್ಲಿರುವ ಪಟ್ಟಮುಂಡೈ ಎಂಬ ನಗರದ ನಿವಾಸಿ ಬಾಬುಲಾ ಸಿಂಗ್​ ಎಂದು ಗುರುತಿಸಲಾಗಿದೆ.

ಹರಿತ ಆಯುಧದಿಂದ ಹೊಡೆದು ನಾಯಿಯನ್ನು ಕೊಂದ ವಿಡಿಯೋ ವೈರಲ್​; ವ್ಯಕ್ತಿ ಬಂಧನ
ಸಾಂದರ್ಭಿಕ ಚಿತ್ರ
shruti hegde
|

Updated on:May 30, 2021 | 4:20 PM

Share

ಮಲಗಿರುವ ಬೀದಿ ನಾಯಿಯನ್ನು ಹರಿತಾದ ಆಯುಧದಿಂದ ಹೊಡೆದು ಸಾಯಿಸಿದ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಹಲವಾರು ಚರ್ಚೆಗೂ ಕಾರಣವಾಗಿತ್ತು. ವಿಡಿಯೋ ವ್ಯಾಪಕವಾಗಿ ಹರಡುತ್ತಿದ್ದಂತೆಯೇ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಒಡಿಶಾ ಪೊಲೀಸರು ಹೇಳಿದ್ದಾರೆ.

ಬಂಧಿತ ವ್ಯಕ್ತಿ ಭುವನೇಶ್ವರದಿಂದ ಕೇವಲ 50ಕಿ.ಮೀಟರ್​ ದೂರದಲ್ಲಿರುವ ಪಟ್ಟಮುಂಡೈ ಎಂಬ ನಗರದ ನಿವಾಸಿ ಬಾಬುಲಾ ಸಿಂಗ್​ ಎಂದು ಗುರುತಿಸಲಾಗಿದೆ.

15 ಸೆಕೆಂಡುಗಳ ವಿಡಿಯೋದಲ್ಲಿ 50 ವರ್ಷದ ಬಾಬುಲಾ ಸಿಂಗ್​ ನಾಯಿಯ ಬಳಿ ಬರುತ್ತಿರುವುದು ಕಂಡು ಬರುತ್ತದೆ. ಹರಿತಾದ ದೊಡ್ಡ ಆಯುಧದಿಂದ ಜೋರಾಗಿ ಹೊಡೆಯುತ್ತಾನೆ. ಆಯುದ್ಧ ಬಿದ್ದ ರಭಸಕ್ಕೆ ನಾಯಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವ್ಯಕ್ತಿಯ ಈ ನಡತೆಯು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್​ 429, ಕ್ರೌರ್ಯ ತಡೆಗಟ್ಟುವ ಕಾಯ್ದೆ ಸೆಕ್ಷನ್​ 11(1) ಹಾಗೂ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ ಬಾಬುಲಾ ಸಿಂಗ್​ ಅವರನ್ನು ಬಂಧಿಸಿದಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: 

ವೈರಲ್​ ವಿಡಿಯೋ; ಕೊರೊನಾ ಕಂಟಕ.. ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡಿದ ಮೊಹಮ್ಮದ್ ಕೈಫ್

ವೈರಲ್​ ವಿಡಿಯೋ; ಕೊರೊನಾ ವೈರಾಣುವಿಗೆ ವಿದಾಯ ಹೇಳುವುದು ಹೇಗೆ? ಇಲ್ಲಿದೆ ನೋಡಿ ತಮಾಷೆ ದೃಶ್ಯ

Published On - 4:17 pm, Sun, 30 May 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ