AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್​ ವಿಡಿಯೋ; ಕೊರೊನಾ ಕಂಟಕ.. ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡಿದ ಮೊಹಮ್ಮದ್ ಕೈಫ್

ತನ್ನ ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೈಫ್, ಈಗ ತನ್ನ ಹೆಂಡತಿಗೆ ಕ್ರಿಕೆಟ್ ಕಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ವೈರಲ್​ ವಿಡಿಯೋ; ಕೊರೊನಾ ಕಂಟಕ.. ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡಿದ ಮೊಹಮ್ಮದ್ ಕೈಫ್
ಪತ್ನಿಯೊಂದಿಗೆ ಮೊಹಮ್ಮದ್ ಕೈಫ್
ಪೃಥ್ವಿಶಂಕರ
|

Updated on: May 27, 2021 | 8:13 PM

Share

ಕೊರೊನಾದಿಂದ ಭಾರತ ಮತ್ತೊಮ್ಮೆ ಲಾಕ್ ಆಗಿದೆ. ಈ ಕಾರಣದಿಂದಾಗಿ, ಕ್ರಿಕೆಟ್ ಪಂದ್ಯಾವಳಿಯನ್ನು ಸಹ ನಿಲ್ಲಿಸಲಾಗಿದೆ. ಕೊರೊನಾದಿಂದಾಗಿ ಐಪಿಎಲ್ 2021 ರ ಪ್ರಯಾಣವೂ ನಿಂತುಹೋಯಿತು. ಐಪಿಎಲ್​ನಲ್ಲಿ ದೆಹಲಿ ತಂಡದ ಕೋಚ್ ಆಗಿದ್ದ ಮೊಹಮ್ಮದ್ ಕೈಫ್ ಸಮಯ ಕಳೆಯಲು ಭರ್ಜರಿ ಪ್ಲಾನ್ ಮಾಡಿದ್ದಾರೆ. ಕೆಲಸವಿಲ್ಲದೆ ಬೋರ್ ಹೊಡೆಯುತ್ತಿರುವ ಲೈಫ್​ಗೆ ಮೊಹಮ್ಮದ್ ಕೈಫ್ ಒಂದು ಟರ್ನಿಂಗ್ ಪಾಯಿಂಟ್ ನೀಡಿದ್ದಾರೆ. ತನ್ನ ಹೆಂಡತಿಯೊಂದಿಗೆ ಮನೆಯೊಳಗೆ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೈಫ್, ಈಗ ತನ್ನ ಹೆಂಡತಿಗೆ ಕ್ರಿಕೆಟ್ ಕಲಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಪತ್ನಿ ಜೊತೆಗೆ ಕೈಫ್ ಕ್ರಿಕೆಟ್ ಮೊಹಮ್ಮದ್ ಕೈಫ್ ಒಬ್ಬ ಅದ್ಭುತ ಫೀಲ್ಡರ್ ಎಂಬುದರಲ್ಲಿ ಎರಡು ಮಾತಿಲ್ಲ. ಇದಲ್ಲದೆ, ಅವರು ಟೀಮ್ ಇಂಡಿಯಾ ಅಥವಾ ಐಪಿಎಲ್ನಲ್ಲಿ ಆಡುತ್ತಿದ್ದಾಗ ಅವರು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲಿಂಗ್‌ನಲ್ಲಿ ಅವರ ಪಾತ್ರವು ಅರೆಕಾಲಿಕ ಸ್ಪಿನ್ನರ್‌ನ ಪಾತ್ರವಾಗಿತ್ತು, ಅದೂ ಒಂದು ಪಂದ್ಯದಲ್ಲಿ ಮಾತ್ರ. ಅಂತಹ ಪರಿಸ್ಥಿತಿಯಲ್ಲಿ, ಅವರು ಮನೆಯಲ್ಲಿ ತಮ್ಮ ಹೆಂಡತಿ ವಿರುದ್ಧ ಆಡಿದ ಪಂದ್ಯದಲ್ಲಿ ಬೌಲಿಂಗ್ ಮಾಡಲು ಆರಂಭಿಸಿದ್ದಾರೆ. ಕೈಫ್ ಕೆಟ್ಟ ಬೌಲಿಂಗ್​ಗೆ, ಅವರ ಪತ್ನಿ ಸರಿಯಾಗಿಯೇ ಉತ್ತರಿಸಿದ್ದಾರೆ. ಕೈಫ್ ಎಸೆದ ಪ್ರತಿಯೊಂದು ಎಸೆತವನ್ನು ಅವರ ಪತ್ನಿ ಸರಿಯಾಗಿ ದಂಡಿಸಿದ್ದಾರೆ.

ಮೊಹಮ್ಮದ್ ಕೈಫ್ 2011 ರಲ್ಲಿ ವಿವಾಹವಾದರು ಮೊಹಮ್ಮದ್ ಕೈಫ್ ಅವರ ಪತ್ನಿ ಪೂಜಾ ನೋಯ್ಡಾ ಮೂಲದ ಪತ್ರಕರ್ತೆ. ಇಬ್ಬರೂ 2011 ರಲ್ಲಿ ವಿವಾಹವಾದರು. ವರದಿಯ ಪ್ರಕಾರ, ಇಬ್ಬರು ಮೊದಲು 2007 ರಲ್ಲಿ ಪರಸ್ಪರ ಭೇಟಿಯಾದರು. ಅವರಿಬ್ಬರಿಗೆ ಇಬ್ಬರು ಮಕ್ಕಳಿದ್ದು, ಒಬ್ಬ ಮಗ ಕಬೀರ್ ಮತ್ತು ಇನ್ನೊಬ್ಬ ಮಗಳು ಇವಾ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!