AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಸೋನಿಯಾ ಗಾಂಧಿ ಅವರ ಶೆಲ್ಫ್​ನಲ್ಲಿ ಮತಾಂತರದ ಪುಸ್ತಕ? ವೈರಲ್ ಆಗಿದ್ದು ಎಡಿಟ್ ಮಾಡಿದ ಚಿತ್ರ

Sonia Gandhi: ಸೋನಿಯಾ ಗಾಂಧಿಯವರ ಗ್ರಂಥಾಲಯದಲ್ಲಿ“ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ ”ಎಂಬ ಪುಸ್ತಕ? ದಯವಿಟ್ಟು ರಿಟ್ವೀಟ್ ಮಾಡಿ ಮತ್ತು ಬಹಿರಂಗಪಡಿಸಿ ಎಂಬ ಒಕ್ಕಣೆಯೊಂದಿಗೆ ಸೋನಿಯಾ ಗಾಂಧಿ ಅವರ ಫೋಟೊ ವೈರಲ್ ಆಗಿದೆ.

Fact Check: ಸೋನಿಯಾ ಗಾಂಧಿ ಅವರ ಶೆಲ್ಫ್​ನಲ್ಲಿ ಮತಾಂತರದ ಪುಸ್ತಕ? ವೈರಲ್ ಆಗಿದ್ದು ಎಡಿಟ್ ಮಾಡಿದ ಚಿತ್ರ
ಸೋನಿಯಾಗಾಂಧಿಯವರ ವೈರಲ್ ಚಿತ್ರ
ರಶ್ಮಿ ಕಲ್ಲಕಟ್ಟ
|

Updated on:Jun 01, 2021 | 4:42 PM

Share

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಪುಸ್ತಕದ ಕಪಾಟಿನಲ್ಲಿ “ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ” ಎಂಬ ಪುಸ್ತಕವಿದೆ ಎಂದು ತೋರಿಸುವ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದಾಗ್ಯೂ, ವೈರಲ್ ಆಗಿರುವ ಫೋಟೊ ಎಡಿಟ್ ಮಾಡಿದ್ದು. ಸೋನಿಯಾ ಗಾಂಧಿ ಅವರ ಶೆಲ್ಫ್ ನಲ್ಲಿರುವ ಪುಸ್ತಕದ ಹೆಸರನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ. ಸೋನಿಯಾ ಗಾಂಧಿಯವರ ಶೆಲ್ಫ್ ನಲ್ಲಿರುವುದು ಯಾವ ಪುಸ್ತಕ? ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ದಿ ಕ್ವಿಂಟ್, ಸೋನಿಯಾ ಗಾಂಧಿ ಅವರ ಕಪಾಟಿನಲ್ಲಿ How to convert India into Christian nation ಎಂಬ ಪುಸ್ತಕ ಇಲ್ಲ ಎಂದು ಹೇಳಿದೆ. ವೈರಲ್ ಆಗಿರುವ ಫೋಟೊದ ಒರಿಜಿನಲ್ ಫೋಟೊವನ್ನು ಪರಿಶೀಲಿಸಿದರೆ ಕಪಾಟಿನಲ್ಲಿ ಅಂತಹ ಯಾವುದೇ ಪುಸ್ತಕ ಇಲ್ಲ.

ವೈರಲ್ ಚಿತ್ರದ ಜತೆಗಿರುವ ಒಕ್ಕಣೆ ಏನು ಸೋನಿಯಾ ಗಾಂಧಿಯವರ ಗ್ರಂಥಾಲಯದಲ್ಲಿ“ ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ ”ಎಂಬ ಪುಸ್ತಕ? ದಯವಿಟ್ಟು ರಿಟ್ವೀಟ್ ಮಾಡಿ ಮತ್ತು ಬಹಿರಂಗಪಡಿಸಿ ಎಂಬ ಒಕ್ಕಣೆಯೊಂದಿಗೆ ಸೋನಿಯಾ ಗಾಂಧಿ ಅವರ ಫೋಟೊ ವೈರಲ್ ಆಗಿದೆ.

ಫೇಸ್‌ಬುಕ್‌ನ ಇನ್ನೊಬ್ಬ ಬಳಕೆದಾರರು, “ಜೂಮ್ ಮಾಡಿ ಮತ್ತು ಬಲಭಾಗವನ್ನು ನೋಡಿ. “ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ” ಎಂಬ ಪುಸ್ತಕ. ಯಾವುದೇ ಹೆಚ್ಚಿನ ಪುರಾವೆ ಅಗತ್ಯವಿದೆಯೇ? ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಒಕ್ಕಣೆಯೊಂದಿಗೆ ಸೋನಿಯಾ ಗಾಂಧಿ ಅವರ ಫೋಟೊ ಫೇಸ್‌ಬುಕ್‌ ಮತ್ತು ಟ್ವಿಟರ್ ನಲ್ಲಿ ವೈರಲ್ ಆಗಿದೆ. ಫ್ಯಾಕ್ಟ್ ಚೆಕ್ ವೈರಲ್ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾದ ಸುದ್ದಿ ಸಿಕ್ಕಿದ್ದು , ಅದರಲ್ಲಿ ಇದೇ ಚಿತ್ರ ಸಿಕ್ಕಿದೆ. ಈ ಫೋಟೊ ಪಿಟಿಐ ಸುದ್ದಿಸಂಸ್ಥೆಯದ್ದು ಎಂದು ದಿ ಕ್ವಿಂಟ್ ವರದಿ ಮಾಡಿದೆ. ಪಿಟಿಐ ಆರ್ಕೈವ್​ನಲ್ಲಿ ಈ ಫೋಟೊಗಾಗಿ ಹುಡುಕಾಡಿದಾಗ2020 ರಲ್ಲಿ ಗಾಂಧಿಯವರ ವಿಡಿಯೊ ಸಂವಾದದಿಂದ ಈ ಚಿತ್ರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಯಿತು.

ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾದ ಚಿತ್ರ

ಕಾಂಗ್ರೆಸ್ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹುಡುಕಾಡಿ ವಿಡಿಯೊವನ್ನು ಪರಿಶೀಲಿಸಿ ಮೂಲ ವಿಡಿಯೊವನ್ನು ನೋಡಿದಾಗ, ಬಿಹಾರ ಚುನಾವಣೆಯ ಒಂದು ದಿನ ಮೊದಲು 2020 ಅಕ್ಟೋಬರ್ 27 ರಂದು ಗಾಂಧಿ ಬಿಹಾರದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ವಿಡಿಯೊ ಇದಾಗಿದೆ.

ವೈರಲ್ ಚಿತ್ರದಲ್ಲಿನ ಅಂಶಗಳನ್ನು ಕಾಂಗ್ರೆಸ್ ವಿಡಿಯೊದಲ್ಲಿನ ದೃಶ್ಯಕ್ಕೆಗೆ ಹೋಲಿಸಿ ನೋಡಿದಾಗ ಸೋನಿಯಾ ಗಾಂಧಿಯವರ ಹಿನ್ನೆಲೆಯಲ್ಲಿರುವ ಕಪಾಟಿನಲ್ಲಿದ್ದದ್ದು ಪವಿತ್ರ ಬೈಬಲ್. ಆದರೆ ‘ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ’ ಎಂಬ ಶೀರ್ಷಿಕೆಯ ಪುಸ್ತಕ ಮತ್ತು ಯೇಸುಕ್ರಿಸ್ತನ ಪ್ರತಿಮೆಯನ್ನು ಈ ಚಿತ್ರದಲ್ಲಿ ಎಡಿಟ್ ಮಾಡಲಾಗಿದೆ.

ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು, “ಈ ಎಡಿಟ್ ಮಾಡಿದ ಚಿತ್ರವನ್ನು ಹಂಚಿಕೊಳ್ಳುವ ಎಲ್ಲ ಸೋಷ್ಯಲ್ ಮೀಡಿಯಾ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ನಾವು ನಿರ್ಧರಿಸಿದ್ದೇವೆ. ಅಮಿತ್ ಮಾಲ್ವೇರ್ ಮತ್ತು ಕಂಪನಿಯ ಕೊಳಕು ತಂತ್ರಗಳನ್ನು ಇನ್ನಷ್ಟು ಸಹಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Fact Check: ಕಾಂಗ್ರೆಸ್ ಟೂಲ್​ಕಿಟ್ ಎಂದು ವೈರಲ್ ಆದ ದಾಖಲೆ ಕಾಂಗ್ರೆಸ್ ಪಕ್ಷದ ನಕಲಿ ಲೆಟರ್​ಹೆಡ್ ಬಳಸಿ ಮಾಡಿದ್ದು

Published On - 4:42 pm, Tue, 1 June 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ