ಸುಪ್ರೀಂಕೋರ್ಟ್​ನಲ್ಲಿ ದೇವರಿಗೆ ಮೊರೆ, ಏಕೆ ಗೊತ್ತೆ?

Prayers to God in Supreme Court: 2020ರ ಮಾರ್ಚ್ ತಿಂಗಳಿನಿಂದ ಸುಪ್ರೀಂಕೋರ್ಟ್ ವರ್ಚುವಲ್ ಹಿಯರಿಂಗ್ ನಡೆಸುತ್ತಿದೆ. ಸುಪ್ರೀಂಕೋರ್ಟ್​ನಲ್ಲಿ ಜಾಮೀನು ಪ್ರಕರಣವೊಂದರ ಇಂತಹುದೇ ವರ್ಚುವಲ್ ಹಿಯರಿಂಗ್​ ನಡೆಸುವ ವೇಳೆ ವಕೀಲರು, ‘ಮುಂದಿನ ಬಾರಿ ಈ ಪ್ರಕರಣವನ್ನು ಸಾಮಾನ್ಯ ವಿಚಾರಣೆ, ಅಂದರೆ ಫಿಸಿಕಲ್ ಹಿಯರಿಂಗ್ ನಡೆಸುವಂತಾಗಲಿ’ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು.

ಸುಪ್ರೀಂಕೋರ್ಟ್​ನಲ್ಲಿ ದೇವರಿಗೆ ಮೊರೆ, ಏಕೆ ಗೊತ್ತೆ?
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್
Follow us
guruganesh bhat
|

Updated on:Jun 01, 2021 | 4:15 PM

ದೆಹಲಿ: ಲಸಿಕೆ ವಿತರಣೆಯ ಮೂಲಕ ದೇಶದಲ್ಲಿ ಕೊವಿಡ್ ಪಿಡುಗನ್ನು ನಿಯಂತ್ರಿಸಲು ಪ್ರಯತ್ನಿಸಲಾಗುತ್ತಿದ್ದು ಸುಪ್ರೀಂಕೋರ್ಟ್ ಲಸಿಕೆ ಬಗ್ಗೆ ಸಮರ್ಪಕ ನೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿನ್ನೆ (ಮೇ 31) ಸೂಚಿಸಿದೆ. ಅಲ್ಲದೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿರುವ ಕೋರ್ಟ್ ಈಗಾಗಲೇ ಕೇಂದ್ರ ಸರ್ಕಾರದ ಕಿವಿ ಹಿಂಡುತ್ತಿದೆ. ಈ ಎಲ್ಲ ಘಟನೆಗಳ ಹಿನ್ನೆಲೆಯಲ್ಲಿ ಇಂದು ಜಾಮೀನು ಪ್ರಕರಣವೊಂದರ ವಿಚಾರಣೆ ನಡೆಸುವಾಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ದೇವರಿಗೆ ಪ್ರಾರ್ಥನೆ ಸಲ್ಲಿಸುವ ಕುರಿತು ಉಲ್ಲೇಖಿಸಿದ್ದಾರೆ.

2020ರ ಮಾರ್ಚ್ ತಿಂಗಳಿನಿಂದ ಸುಪ್ರೀಂಕೋರ್ಟ್ ವರ್ಚುವಲ್ ಹಿಯರಿಂಗ್ ನಡೆಸುತ್ತಿದೆ. ಸುಪ್ರೀಂಕೋರ್ಟ್​ನಲ್ಲಿ ಜಾಮೀನು ಪ್ರಕರಣವೊಂದರ ಇಂತಹುದೇ ವರ್ಚುವಲ್ ಹಿಯರಿಂಗ್​ ನಡೆಸುವ ವೇಳೆ ವಕೀಲರು, ‘ಮುಂದಿನ ಬಾರಿ ಈ ಪ್ರಕರಣವನ್ನು ಸಾಮಾನ್ಯ ವಿಚಾರಣೆ, ಅಂದರೆ ಫಿಸಿಕಲ್ ಹಿಯರಿಂಗ್ ನಡೆಸುವಂತಾಗಲಿ’ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದರು. ತಕ್ಷಣವೇ ಪ್ರತ್ಯುತ್ತರಿಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್,  ಆದಷ್ಟು ಬೇಗ ದೇಶದ ಎಲ್ಲರಿಗೂ ಕೊವಿಡ್ ಲಸಿಕೆ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ. ಎಲ್ಲರಿಗೂ ಲಸಿಕೆ ವಿತರಣೆ ಆದಲ್ಲಿ ಮಾತ್ರ ನಾವು ಎಂದಿನಂತೆ ಫಿಸಿಕಲ್ ಹಿಯರಿಂಗ್ ನಡೆಸಬಹುದು’ ಎಂದು ಉತ್ತರಿಸಿದರು.

ಲಸಿಕೆ ನೀತಿ ರೂಪಿಸಲು ಸೂಚನೆ ಕೊವಿಡ್​ ಸೋಂಕಿಗೆ ಲಸಿಕೆ ಪಡೆಯಲು ಕೊವಿನ್ ಪೋರ್ಟಲ್​ನಲ್ಲಿ ಕಡ್ಡಾಯ ನೋಂದಣಿ ಮಾಡಬೇಕಾದ ಪದ್ಧತಿಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ದೇಶದಲ್ಲಿ ಕೊವಿಡ್ ನಿರ್ವಹಣೆಯ ಕುರಿತು ಸ್ವಯಂ ಪ್ರೇರಿತ ದೂರಿನ ವಿಚಾರಣೆ ನಡೆಸಿದ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್​ನ ತ್ರಿಸದಸ್ಯ ಪೀಠ, ಈ ಪದ್ಧತಿಯ ಅನುಸರಣೆಯಿಂದ ದೇಶದ ಗ್ರಾಮೀಣ ಭಾಗದ ಜನರು ಸಮಸ್ಯೆ ಎದುರಿಸುತ್ತಾರೆ. ನೀತಿ ರೂಪಿಸುವವರು ಜನರ ಅಭಿಪ್ರಾಯ ತಿಳಿದಿರಬೇಕು. ದೇಶದ ತಳಮಟ್ಟದ ಜನರ ಅಭಿಪ್ರಾಯ ತಿಳಿದಿರಬೇಕು. ಅವರ ಅಭಿಪ್ರಾಯ ಕುಂದು ಕೊರತೆಗಳನ್ನೂ ಆಲಿಸಿ ನೀತಿಗಳನ್ನು ರೂಪಿಸಬೇಕು. ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ವೇಳೆ ಸುಪ್ರೀಂಕೋರ್ಟ್​ಗೆ ಉತ್ತರಿಸಿದ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟವರು ನೇರವಾಗಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು. 45 ವರ್ಷ ಮೇಲ್ಪಟ್ಟವರಿಗೆ ಕೊವಿನ್ ಪೋರ್ಟಲ್​ನಲ್ಲಿ ರಿಜಿಸ್ಟ್ರೇಷನ್ ಕಡ್ಡಾಯವಲ್ಲ ಎಂದು ತಿಳಿಸಿದೆ. ಜತೆಗೆ ಕೊರೊನಾ ಲಸಿಕಾ ನೀತಿಯ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಭಾರತದ ಸಮಾಜದಲ್ಲಿ ಡಿಜಿಟಲ್ ಡಿವೈಡ್ ಪರಿಸ್ಥಿತಿ ಇದೆ. ಎಲ್ಲರಿಗೂ ಅಂತರ್ಜಾಲ ಸೌಲಭ್ಯ ದೊರೆಯುವ ಮತ್ತು ಬಳಸುವ ಪರಿಸ್ಥಿತಿ ಇನ್ನೂ ನಿರ್ಮಾಣವಾಗಿಲ್ಲ. ದೇಶಾದ್ಯಂತ ಏನಾಗುತ್ತಿದೆ ಎಂದು ಕೇಂದ್ರ ಸರ್ಕಾರ ಗಮನಿಸಬೇಕು. ತನ್ನ ನೀತಿಯನ್ನು ಅದಕ್ಕನುಗುಣವಾಗಿ ಬದಲಾಯಿಸಬೇಕು ಎಂದು ಕೊವಿಡ್ ಲಸಿಕೆ ಪಡೆಯಲು ಇದ್ದ ಕಡ್ಡಾಯ ನೋಂದಣಿ ಪ್ರಕ್ರಿಯೆಯ ವಿರುದ್ಧ ತನ್ನ ನಿಲುವು ವ್ಯಕ್ತಪಡಿಸಿದೆ.

ದೇಶದಲ್ಲಿ ಕೊವಿಡ್ ಲಸಿಕೆಗಳಿಗೆ ಇರುವ ಭಿನ್ನ ದರಗಳ ಕುರಿತೂ ಕೇಂದ್ರ ಸರ್ಕಾರದ ಕಿವಿ ಹಿಂಡಿರುವ ಸುಪ್ರೀಂಕೋರ್ಟ್, ದೇಶದ ಎಲ್ಲೆಡೆ ಕೊವಿಡ್ ಲಸಿಕೆಗೆ ಒಂದೇ ದರವನ್ನು ನಿಗದಿಪಡಿಸಬೇಕು. ಈ ಕುರಿತು ಸಮರ್ಪಕ ನಿಯಮ ರೂಪಿಸಿ ಎಂದು ನಿರ್ದೇಶನ ನೀಡಿದೆ.

ನದಿಗೆ ಶವ ಎಸೆದ ಫೋಟೊ ಪ್ರಸಾರ: ದೇಶದ್ರೋಹವೇ? ದೇಶದಲ್ಲಿ ಕೊವಿಡ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಬಗೆಗಿನ ವಿಚಾರಣೆಯ ವೇಳೆ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಅಭಿಪ್ರಾಯವೊಂದು ಬಿಜೆಪಿ ನೇತೃತ್ವದ ಸರ್ಕಾರಗಳ ಕುರಿತು ತೀವ್ರ ಸಂಚಲನ ಸೃಷ್ಟಿಸಿದೆ. ನಿನ್ನೆ ಸುದ್ದಿ ವಾಹಿನಿಯೊಂದರಲ್ಲಿ ಶವವನ್ನು ನದಿಗೆ ಎಸೆಯುವ ಫೋಟೋ ವೀಕ್ಷಿಸಿದೆ. ಆ ದೃಶ್ಯವನ್ನು ಪ್ರಸಾರ ಮಾಡಿದ ಕಾರಣಕ್ಕೆ ಆ ಸುದ್ದಿ ವಾಹಿನಿಯ ವಿರುದ್ಧ ಈಗಾಗಲೇ ದೇಶದ್ರೋಹದ ಪ್ರಕರಣ ದಾಖಲಾಗಿದೆಯೇ ಎಂದು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ವ್ಯಂಗ್ಯಭರಿತ ದಾಟಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರದ ಆಳ್ವಿಕೆಯನ್ನು ಸ್ವತಃ ವಹಿಸಿಕೊಳ್ಳಲು ಮುಂದಾಗುತ್ತಿಲ್ಲ. ಅಥವಾ ಟೀಕೆ ಮಾಡುವ ಆಲೋಚನೆಯೂ ಇಲ್ಲ. ಸುಪ್ರೀಂಕೋರ್ಟ್​ಗೆ ಸರ್ಕಾರದ ಕೈಗಳನ್ನು ಬಲಪಡಿಸುವ ಉದ್ದೇಶವಿದೆ. ಕೋರ್ಟ್ ವಿಚಾರಣೆ ನಡೆಸುವ ಉದ್ದೇಶ ಪರ-ವಿರೋಧ ಚರ್ಚೆ ಮಾಡುವುದಷ್ಟೇ ಆಗಿದೆ ಎಂದು ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೊವಿಡ್ ತಡೆಗೆ ಮೈಸೂರಿನಲ್ಲಿ ಮತ್ತೊಂದು ಪ್ರಯೋಗ; ರಿವರ್ಸ್ ಐಸೋಲೇಷನ್​ ಮೂಲಕ ಸೋಂಕಿತರ ಕಾಳಜಿ

ಆಕ್ಸಿಜನ್ ಕಾನ್ಸನ್​ಟ್ರೇಟರ್ ಆಮದು ಮೇಲೆ ಜಿಎಸ್​ಟಿ ರದ್ದು; ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ

(Prayers to God in Supreme Court Justice DY Chandrachud about Covid Vaccine)

Published On - 3:41 pm, Tue, 1 June 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು