IAF AFCAT Recruitment 2021: ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ; ಖಾಲಿ ಇರುವ ಹುದ್ದೆಗಳು 334

Indian Air Force: ಆನ್​ಲೈನ್​ನಲ್ಲಿ ನೋಂದಣಿ ಪ್ರಕ್ರಿಯೆ ಜೂ.1ರಿಂದ ಶುರುವಾಗಲಿದ್ದು, ಜೂ.30ರವರೆಗೆ ಅವಕಾಶ ಇರುತ್ತದೆ. ಆಸಕ್ತಿ ಇರುವ ಅರ್ಹರು afcat.cdac.in. ಗೆ ಭೇಟಿ ನೀಡಬೇಕು.

IAF AFCAT Recruitment 2021: ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ; ಖಾಲಿ ಇರುವ ಹುದ್ದೆಗಳು 334
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on: Jun 01, 2021 | 3:24 PM

ಭಾರತೀಯ ವಾಯು ಸೇನೆ (IAF) ವಾಯುಪಡೆಯ ಸಾಮಾನ್ಯ ಪ್ರವೇಶ ಪರೀಕ್ಷೆ (AFCAT)-2ಗೆ ಅರ್ಜಿ ಆಹ್ವಾನಿಸಿದೆ. ಹಾರಾಟ ವಿಭಾಗ ಮತ್ತು ಭೂ ವಿಭಾಗ ಎರಡೂ ಕಡೆಗಳಲ್ಲಿ ಖಾಲಿ ಇರುವ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಈ ಅಧಿಸೂಚನೆ ಹೊರಡಿಸಿದೆ. ಆನ್​ಲೈನ್​ನಲ್ಲಿ ನೋಂದಣಿ ಪ್ರಕ್ರಿಯೆ ಜೂ.1ರಿಂದ ಶುರುವಾಗಲಿದ್ದು, ಜೂ.30ರವರೆಗೆ ಅವಕಾಶ ಇರುತ್ತದೆ. ಆಸಕ್ತಿ ಇರುವ ಅರ್ಹರು afcat.cdac.in. ಗೆ ಭೇಟಿ ನೀಡಬೇಕು. ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದನ್ನು ನಮೂದಿಸಿ ಅರ್ಜಿ ಸಲ್ಲಿಸಿಕೊಳ್ಳಬಹುದಾಗಿದೆ.

ವಾಯು ಮತ್ತು ಭೂ ವಿಭಾಗಗಳಿಂದ ಒಟ್ಟು 334 ಹುದ್ದೆಗಳು ಖಾಲಿ ಇವೆ. ಇದರಲ್ಲಿ 96 ಕಿರು ಸೇವಾ ಆಯೋಗ (SSC)ದಲ್ಲಿ ಖಾಲಿ ಇವೆ. ಹಾಗೆ ನೆಲ ವಿಭಾಗದ ತಾಂತ್ರಿಕ ಶಾಖೆಯ ಎಸ್​ಎಸ್​ಸಿ ಮತ್ತು ಶಾಶ್ವತ ಆಯೋಗ (ಪಿಸಿ)ದಲ್ಲಿ 137, ನೆಲ ವಿಭಾಗದ ತಾಂತ್ರಿಕೇತರ ಶಾಖೆಯಲ್ಲಿ 73 ಪಿಸಿ/ಎಸ್​ಎಸ್​ಸಿ ಹುದ್ದೆಗಳು, ಹವಾಮಾನ ಶಾಖೆಯಲ್ಲಿ 28 ಪಿಸಿ/ಎಸ್​ಎಸ್​ಸಿ ಹುದ್ದೆಗಳು ಖಾಲಿ ಇವೆ. ಇನ್ನು ಎನ್​ಸಿಸಿ ವಿಶೇಷ ಪ್ರವೇಶದಡಿ, ಸಂಯೋಜಿತ ರಕ್ಷಣಾ ಸೇವೆಗಳಡಿ ಬರುವ ಶಾಶ್ವತ ಆಯೋಗಕ್ಕೆ 10 ಪರ್ಸಂಟ್​ ಮತ್ತು ವಾಯುಪಡೆ ಸಾಮಾನ್ಯ ಪ್ರವೇಶ ಪರೀಕ್ಷೆಯಡಿಯ ಕಿರುಸೇವಾ ಆಯೋಗಕ್ಕೆ 10 ಪರ್ಸಂಟ್​ ಸೀಟ್​ಗಳನ್ನು ಮೀಸಲಿಡಲಾಗಿದೆ.

ಅರ್ಹತೆಗಳೇನು? ವಾಯು ವಿಭಾಗದ ಶಾಖೆಯ ಖಾಲಿ ಹುದ್ದೆಗೆ ಅರ್ಜಿ ಸಲ್ಲಿಸುವವರು 20-24ವರ್ಷದವರಾಗಿರಬೇಕು. ಇನ್ನು ಇದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಅಂದರೆ 26ವರ್ಷದವರೆಗಿನ ಯಾರಾದರೂ ಡೈರಕ್ಟರ್ ಜನರಲ್ ಆಫ್​ ಸಿವಿಲ್​ ಏವಿಯೇಷನ್​ (DGCA)ದಿಂದ ಮಾನ್ಯತೆ ಪಡೆದ ವಾಣಿಜ್ಯ ಪೈಲಟ್​ ಲೈಸೆನ್ಸ್​ ಪಡೆದಿದ್ದರೆ ಅಂಥವರಿಗೆ ಅವಕಾಶ ನೀಡಲಾಗುತ್ತದೆ.

ನೆಲವಿಭಾಗದ ಹುದ್ದೆಗಳಿಗೆ, ತಾಂತ್ರಿಕ ಆಗಿರಲಿ ಅಥವಾ ತಾಂತ್ರಿಕೇತರ ಶಾಖೆಯಾಗಲಿ 20-26ವರ್ಷದವರೆಗಿನವರು ಅರ್ಜಿಸಲ್ಲಿಸಬಹುದು. ಎಎಫ್​​ಸಿಎಟಿಗೆ ನೋಂದಣಿ ಮಾಡುವವರು 250 ರೂ.ಶುಲ್ಕ ಪಾವತಿಸಬೇಕು. ಅದೇ ಎನ್​ಸಿಸಿ ವಿಶೇಷ ಪ್ರವೇಶ ಮತ್ತು ಹವಾಮಾನ ಇಲಾಖೆಗೆ ಅರ್ಜಿ ಸಲ್ಲಿಸುವವರು ಹಣ ನೀಡಬೇಕಿಲ್ಲ.

ನೋಂದಣಿ ಹೇಗೆ? ಮೊದಲು afcat.cdac.in ಗೆ ಭೇಟಿ ನೀಡಿ ಅದರ ಹೋಂ ಪೇಜ್​ನಲ್ಲಿ ಕ್ಯಾಂಡಿಡೇಟ್ ಲಾಗಿನ್​ ಟ್ಯಾಬ್​​ಗೆ ಹೋಗಿ AFCAT 02/2021 ಲಿಂಕ್​ ಮೇಲೆ ಕ್ಲಿಕ್​ ಮಾಡಿ ಅದರಲ್ಲಿ ಕಾಣುವ New registration ಎಂಬಲ್ಲಿ ಕ್ಲಿಕ್​ ಮಾಡಿ. ಅಲ್ಲಿ ಕೇಳಿರುವ ವಿವರಗಳನ್ನು ತುಂಬಿ. ಅದನ್ನು ಸಬ್​​ಮಿಟ್​ ಮಾಡಿ ಮತ್ತು ನಿಮ್ಮ ನೋಂದಣಿ ಐಡಿ ಹಾಗೂ ಪಾಸ್​ವರ್ಡ್​​ನ್ನು ಸೇವ್​ ಮಾಡಿಟ್ಟುಕೊಳ್ಳಿ. ನಂತರ ಈ ಕ್ರೆಡೆನ್ಷಿಯಲ್​​ಗಳನ್ನು ಬಳಸಿ ಲಾಗಿನ್​ ಆಗಿ, ಅರ್ಜಿಯನ್ನು ತುಂಬಿ. ನಂತರ ಶುಲ್ಕವನ್ನು ತುಂಬಿ ಅರ್ಜಿಯನ್ನು ಸಬ್​​ಮಿಟ್ ಮಾಡಿ. ಆ ಕಾಪಿಯನ್ನು ಡೌನ್​ಲೋಡ್ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: ಕೊರೊನಾ ಮೂರನೇ ಅಲೆ; ಮುಂಜಾಗೃತಾ ಕ್ರಮವಾಗಿ ಮಕ್ಕಳ ಸಮೀಕ್ಷೆಗೆ ಮುಂದಾದ ಕೊಪ್ಪಳ ಜಿಲ್ಲಾಡಳಿತ

ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್