Spring Season: ಬಂದ ವಸಂತ; ಋತುಗಳ ರಾಜನನ್ನು ಹೊತ್ತು ತಂದ ಮುಳ್ಳುಹಂದಿ-ಗೂಗಲ್​ ಡೂಡಲ್​ನಿಂದ ಸ್ವಾಗತ

Google Doodle: ಸಮಭಾಜಕ ವೃತ್ತದ ಉತ್ತರಾರ್ಧಗೋಳದಲ್ಲಿ ಇಂದಿನಿಂದ ವಸಂತ ಋತು ಪ್ರಾರಂಭ. ವಸಂತ ಋತುವೆಂದರೆ ಋತುಗಳ ರಾಜ ಎಂದೇ ಹೇಳಲಾಗುತ್ತದೆ. ಗಿಡ-ಮರಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತವೆ. ಹೂವು-ಕಾಯಿಗಳನ್ನು ಹೊತ್ತು ನಳನಳಿಸುವ ಕಾಲವಿದು.

Spring Season: ಬಂದ ವಸಂತ; ಋತುಗಳ ರಾಜನನ್ನು ಹೊತ್ತು ತಂದ ಮುಳ್ಳುಹಂದಿ-ಗೂಗಲ್​ ಡೂಡಲ್​ನಿಂದ ಸ್ವಾಗತ
ವಸಂತ ಋತುವಿನ ಆಗಮನಕ್ಕೆ ಗೂಗಲ್ ವಿಶೇಷ ಡೂಡಲ್​
Follow us
Lakshmi Hegde
|

Updated on:Mar 20, 2021 | 12:04 PM

ಕೆಲವು ವಿಶೇಷ ಸಂದರ್ಭಗಳನ್ನು ಡೂಡಲ್​ ಮೂಲಕ ಆಚರಿಸುವುದು ಸಾಮಾನ್ಯ. ಇತ್ತೀಚೆಗೆ ಮಹಿಳಾ ದಿನಾಚರಣೆಯಂದು ಒಂದು ಸ್ಪೆಶಲ್​ ವಿಡಿಯೋ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಿತ್ತು. ಇದೀಗ ವಸಂತ ಋತುವಿನ ಆಗಮನವನ್ನು ಗೂಗಲ್​ ಡೂಡಲ್​ ಸೆಲೆಬ್ರೇಟ್​ ಮಾಡಿದೆ. ಒಂದು ಆಹ್ಲಾದಕರ ಮ್ಯೂಸಿಕ್​ ಜತೆಗೆ ಚೆಂದನೆಯ ವಿಡಿಯೋವೊಂದನ್ನು ಹಂಚಿಕೊಂಡಿದೆ.

ಸಮಭಾಜಕ ವೃತ್ತದ ಉತ್ತರಾರ್ಧಗೋಳದಲ್ಲಿ ಇಂದಿನಿಂದ ವಸಂತ ಋತು ಪ್ರಾರಂಭ. ವಸಂತ ಋತುವೆಂದರೆ ಋತುಗಳ ರಾಜ ಎಂದೇ ಹೇಳಲಾಗುತ್ತದೆ. ಗಿಡ-ಮರಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತವೆ. ಹೂವು-ಕಾಯಿಗಳನ್ನು ಹೊತ್ತು ನಳನಳಿಸುವ ಕಾಲವಿದು. ಕೋಗಿಲೆಯ ಇಂಪಾದ ಕೂಗು ಆಗಾಗ ಕಿವಿಗೆ ಬೀಳುತ್ತ, ಮನಸನ್ನು ಮುದಗೊಳಿಸುತ್ತಿರುತ್ತದೆ. ಬಿಸಿಲಿನ ತಾಪವಿದ್ದರೂ ಒಂದು ಸಣ್ಣನೆಯ ಸಂಭ್ರಮವನ್ನು ಹೊತ್ತುತರುವ ಋತು ಇದು. ಕವಿಗಳಂತೂ ವಸಂತ ಋತುವನ್ನು ಈಗಾಗಲೇ ತುಂಬ ವರ್ಣಿಸಿಬಿಟ್ಟಿದ್ದಾರೆ.

ಇಂದು ಪ್ರಾರಂಭವಾಗುವ ವಸಂತ ಋತು ಜೂನ್​ 20ರವರೆಗೆ ಇರುತ್ತದೆ. ಈ ವಸಂತನ ಆಗಮನಕ್ಕೆ ಗೂಗಲ್​ ಮುಳ್ಳುಹಂದಿಯ ಮೂಲಕ ಶುಭಕೋರಿದೆ. ಮುಳ್ಳು ಹಂದಿ ತನ್ನ ದೇಹದಲ್ಲಿ ಮುಳ್ಳುಗಳನ್ನು ಹೊಂದಿರುತ್ತದೆ. ಆದರೆ ಈ ವಸಂತ ಋತುವನ್ನು ಹೊತ್ತು ತಂದ ಮುಳ್ಳುಹಂದಿಯ ಮೈಮೇಲೆ ಬರೀ ಗುಲಾಬಿ, ನೀಲಿ, ಹಳದಿ ಹೂವುಗಳು, ಹಸಿರೇ ತುಂಬಿದೆ. ಅಷ್ಟೇ ಅಲ್ಲ, ಜೇನುನೊಣಗಳು ಮಕರಂದ ಹೀರುತ್ತಿರುವುದನ್ನೂ ಎನಿಮೇಶನ್​ ಮಾಡಲಾಗಿದೆ. ಒಂದು ನಿಮಿಷಗಳ ವಿಡಿಯೋ ಡೂಡಲ್​ ಇದಾಗಿದೆ. ಇಷ್ಟುದಿನಗಳ ಚಳಿಗಾಲದಲ್ಲಿ, ಚಳಿಗೆ ಹೆದರಿ ಮುದುಡಿ ಮಲಗುವ ಮುಳ್ಳುಹಂದಿಗಳು ವಸಂತ ಋತುವಿನ ಬಿಸಿಲು ಶುರುವಾಗುತ್ತಿದ್ದಂತೆ ಮತ್ತೆ ಚಟುವಟಿಕೆ ಪ್ರಾರಂಭ ಮಾಡುತ್ತವೆ. ಇದೇ ಕಾರಣಕ್ಕೆ ಮುಳ್ಳುಹಂದಿಯ ಮೈಮೇಲೆ ವಿವಿಧ ಹೂವುಗಳನ್ನು ಚಿತ್ರಿಸಿ, ವಸಂತ ಋತುವಿಗೆ ಸ್ವಾಗತಕೋರಿದೆ.

ಸೂರ್ಯ ಭೂಮಿಯ ಸಮಭಾಜಕ ವೃತ್ತಕ್ಕೆ ನೇರವಾಗಿ ಬಂದಾಗ ಈ ವಸಂತ ವಿಷುವತ್​ ಸಂಕ್ರಾಂತಿ ಸಂಭವಿಸುತ್ತದೆ. ಆಗ ಉತ್ತರಾರ್ಧಗೋಳದಲ್ಲಿ ಬೇಸಿಗೆ ಶುರುವಾಗುತ್ತದೆ. ಹಗಲಿನ ಅವಧಿ ಜಾಸ್ತಿಯಿದ್ದು, ರಾತ್ರಿಯ ಅವಧಿ ಕಡಿಮೆ ಇರುತ್ತದೆ. ಅದಕ್ಕೆ ವಿರುದ್ಧವಾಗಿ ದಕ್ಷಿರ್ಣಾರ್ಧಗೋಳದಲ್ಲಿ ಶರದ್​ ಋತು ಶುರುವಾಗಿ, ಹಗಲು-ರಾತ್ರಿಗಳ ಅವಧಿ ಒಂದೇ ಇರುತ್ತದೆ.

ಇದನ್ನೂ ಓದಿ: India vs England: ರಾಹುಲ್ ಮೇಲೆ ವಿರಾಟ್ ನಂಬಿಕೆ! ನಿರ್ಣಾಯಕ ಪಂದ್ಯಕ್ಕಾಗಿ ಟೀಂ ಇಂಡಿಯಾದಲ್ಲಾಗುತ್ತಾ ಬದಲಾವಣೆ?

ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?

Published On - 11:23 am, Sat, 20 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ