ಬೆಂಗಳೂರಿನ ಆರ್ಟಿ ನಗರದ ಈ ರಸ್ತೆಯಿಂದ ಮೂವರಿಗೆ ಕರ್ನಾಟಕದ ಮುಖ್ಯಮಂತ್ರಿ ಭಾಗ್ಯ! ಏನಿದು ವಾಸ್ತು ಲೆಕ್ಕಾಚಾರ?
Bengaluru News: ಆರ್ಟಿ ನಗರದ ಒಂದೇ ಬೀದಿಯಲ್ಲಿರುವ ಮೂವರು ಈಗಾಗಲೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ, ವೀರಪ್ಪ ಮೊಯ್ಲಿ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮನೆಗಳು ಇದೇ ಬೀದಿಯಲ್ಲಿವೆ.
ಬೆಂಗಳೂರು: ಕೆಲವರು ಅದರಲ್ಲೂ ರಾಜಕಾರಣಿಗಳಿಗೆ ಜ್ಯೋತಿಷ್ಯ, ವಾಸ್ತು ಬಗ್ಗೆ ಭಾರೀ ನಂಬಿಕೆ ಇರುತ್ತದೆ. ಪ್ರಧಾನಿಗಳಿಂದ ಹಿಡಿದು ತಳಮಟ್ಟದ ನಾಯಕರವರೆಗೂ ರಾಹುಕಾಲ, ಕಚೇರಿಯ ವಾಸ್ತು, ಜ್ಯೋತಿಷ್ಯಕ್ಕೆ ಭಾರೀ ಪ್ರಾಮುಖ್ಯತೆ ನೀಡುತ್ತಾರೆ. ಅದೇ ರೀತಿಯ ಆರ್.ಟಿ. ನಗರದ ಈ ಒಂದು ರಸ್ತೆಯ ತಿರುವು ರಾಜ್ಯ ರಾಜಕಾರಣದಲ್ಲಿ ಬಹಳ ಮಹತ್ವ ಹೊಂದಿದೆ. ಇದೇ ಆರ್ಟಿ ನಗರದ ಮೂವರು ರಾಜಕಾರಣಿಗಳು ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಅಲ್ಲದೆ, ಈ ರಸ್ತೆಯಲ್ಲಿ ರಾಜ್ಯದ ಘಟಾನುಘಟಿ ನಾಯಕರು ವಾಸವಾಗಿದ್ದಾರೆ. ಇದು ಅನಿರೀಕ್ಷಿತವೋ, ವಾಸ್ತು ಪರಿಣಾಮವೋ ಎಂಬುದನ್ನು ಹೇಳಲಾಗದು.
ಈ ಮಾಹಿತಿ ಈಗ ಟ್ವಿಟ್ಟರ್ನಲ್ಲಿ ಹರಿದಾಡುತ್ತಿದೆ. ಆರ್ಟಿ ನಗರದ ಒಂದೇ ಬೀದಿಯಲ್ಲಿರುವ ಮೂವರು ಈಗಾಗಲೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಎಸ್.ಆರ್. ಬೊಮ್ಮಾಯಿ, ವೀರಪ್ಪ ಮೊಯ್ಲಿ ಹಾಗೂ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಮನೆಗಳು ಇದೇ ಬೀದಿಯಲ್ಲಿವೆ. ಹಾಗಾಗಿ, ಮುಖ್ಯಮಂತ್ರಿ ಪಟ್ಟಕ್ಕೇರಲು ವಾಸ್ತುವೂ ಕಾರಣವಿರಬಹುದು ಎಂದು ಅನಿಲ್ ಲುಲ್ಲಾ ಎಂಬುವವರ ಟ್ವೀಟ್ ಮಾಡಿದ್ದಾರೆ.
I’m not sure if a house on a curve is good for #vastu. But this particular street in RT Nagar in @NammaBengaluroo has given #Karnataka 3 #CM’s – SR Bommai, @moilyv & now @BSBommai. Guess who lives at the end of this road? @dineshgrao. @BLRrocKS @KiranKS @Amitsen_TNIE @Ananthaforu
— anil lulla (@anil_lulla) July 29, 2021
‘ತಿರುವಿನಲ್ಲಿ ಮನೆಯಿದ್ದರೆ ವಾಸ್ತು ಪ್ರಕಾರ ಒಳ್ಳೆಯದೋ, ಕೆಟ್ಟದ್ದೋ ನನಗೆ ಗೊತ್ತಿಲ್ಲ. ಆದರೆ, ಆರ್ಟಿ ನಗರದ ಇದೊಂದು ಬೀದಿಯಲ್ಲಿ ವಾಸವಾಗಿದ್ದ ಮೂವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಎಸ್.ಆರ್. ಬೊಮ್ಮಾಯಿ, ವೀರಪ್ಪ ಮೊಯ್ಲಿ ಹಾಗೂ ಬಸವರಾಜ ಬೊಮ್ಮಾಯಿಯನ್ನು ಕರ್ನಾಟಕದ ಮುಖ್ಯಮಂತ್ರಿಯಾಗಿ ಈ ಬೀದಿ ಕೊಟ್ಟಿದೆ. ಇನ್ನೊಂದು ವಿಶೇಷವಾದ ವಿಚಾರವೆಂದರೆ ಈ ರಸ್ತೆಯ ತುದಿಯಲ್ಲಿ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸೇರಿದಂತೆ ಕೆಲವು ಸಂಪಾದಕರ ಮನೆಗಳೂ ಇವೆ’ ಎಂದು ಅನಿಲ್ ಲುಲ್ಲಾ ಟ್ವೀಟ್ ಮಾಡಿದ್ದಾರೆ.
(Bengaluru RT Nagar Street have Given 3 Chief Ministers to Karnataka including Basavaraj Bommai)
Published On - 12:32 pm, Thu, 29 July 21