Gang War: ಬೆಂಗಳೂರು- ರಾಯಲಸೀಮಾ ಮಂಗಳಮುಖಿಯರ ಮಧ್ಯೆ ಸಿನಿಮಾ ರೀತಿಯ ಗ್ಯಾಂಗ್ ವಾರ್; ಏನಿದು ಗಲಾಟೆ?
Hijras Gang War | ಬೆಂಗಳೂರು (Bengaluru Hijras) ಮತ್ತು ರಾಯಲಸೀಮಾ (Rayalaseema Hijras) ಪ್ರದೇಶಗಳ ಮಂಗಳಮುಖಿಯರ ನಡುವೆ ಸಿನಿಮಾ ಶೈಲಿಯಲ್ಲಿ ಗ್ಯಾಂಗ್ ವಾರ್ ನಡೆದಿದೆ. ಇದು ಆಂಧ್ರದ ಅನಂತಪುರದಲ್ಲಿ ಆತಂಕ ಸೃಷ್ಟಿಸಿದೆ.
ಬೆಂಗಳೂರು: ರಾಜ್ಯಗಳ ಗಡಿಯಲ್ಲಿ ಎರಡು ಭಾಷಿಗರ ನಡುವೆ ಕಿತ್ತಾಟಗಳು ಸಾಮಾನ್ಯ. ಆದರೆ, ಈ ಬಾರಿ ಆಂಧ್ರಪ್ರದೇಶ (Andhra Pradesh) ಮತ್ತು ಕರ್ನಾಟಕದ (Karnataka) ನಡುವೆ ಹೊಸ ವಿಚಾರಕ್ಕೆ ಗ್ಯಾಂಗ್ ವಾರ್ (Gang War) ನಡೆಯುತ್ತಿದೆ. ಅದೂ ಅಂತಿಂಥಾ ಗ್ಯಾಂಗ್ ವಾರ್ ಅಲ್ಲ; ಇದು ಮಂಗಳಮುಖಿಯರ ಗ್ಯಾಂಗ್ ವಾರ್ (Hijras Gang War)! ಬೆಂಗಳೂರು (Bengaluru Hijras) ಮತ್ತು ರಾಯಲಸೀಮಾ (Rayalaseema Hijras) ಪ್ರದೇಶಗಳ ಮಂಗಳಮುಖಿಯರ ನಡುವೆ ಸಿನಿಮಾ ಶೈಲಿಯಲ್ಲಿ ಗ್ಯಾಂಗ್ ವಾರ್ ನಡೆದಿದೆ. ಇದು ಆಂಧ್ರದ ಅನಂತಪುರದಲ್ಲಿ ಆತಂಕ ಸೃಷ್ಟಿಸಿದೆ.
ಅನಂತಪುರ ಮೂಲದ ರಾಯಲಸೀಮಾ ಮಂಗಳಮುಖಿಯರ ಸಂಘಟನೆ (Rayalaseema Hijra Association) ಇತ್ತೀಚೆಗೆ ಆಷಾಡ ಮಾಸದ ಉತ್ಸವವನ್ನು ಆಯೋಜಿಸಿತ್ತು. ಇದರಲ್ಲಿ ರಾಯಲಸೀಮೆಯ ಮಂಗಳಮುಖಿಯರು ಒಗ್ಗಟ್ಟಾಗಿ ಪಾಲ್ಗೊಂಡಿದ್ದರು. ಆದರೆ, ಅವರಲ್ಲಿ ಒಬ್ಬರನ್ನು ಬೆಂಗಳೂರಿನ ಮಂಗಳಮುಖಿಯರ ಗ್ಯಾಂಗ್ನವರು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತಿಯಾಗಿ ರಾಯಲಸೀಮಾ ಮಂಗಳಮುಖಿಯರ ಗ್ಯಾಂಗ್ನವರು ಕೂಡ ಬೆಂಗಳೂರಿನ ಗ್ಯಾಂಗ್ನ ಮಂಗಳಮುಖಿಯನ್ನು ಕಿಡ್ನಾಪ್ ಮಾಡಿದರು. ಇದೇ ಕಾರಣಕ್ಕೆ ಎರಡೂ ಗ್ಯಾಂಗ್ಗಳ ನಡುವಿನ ಗಲಾಟೆ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಇದಾದ ಬಳಿಕ, ತಮ್ಮ ಗ್ಯಾಂಗ್ನವರನ್ನು ಬಿಡುವಂತೆ ಬೆಂಗಳೂರು ಮಂಗಳಮುಖಿಯರವ ಗ್ಯಾಂಗ್ನವರು ರಾಯಲಸೀಮಾ ಗ್ಯಾಂಗ್ನವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಮ್ಮ ಬಳಿಯಿದ್ದ ಹಣ, ಒಡವೆಗಳನ್ನು ಬೆಂಗಳೂರು ಗ್ಯಾಂಗ್ನವರು ಕದ್ದಿದ್ದಾರೆ ಎಂಬ ಆರೋಪ ರಾಯಲಸೀಮಾ ಮಂಗಳಮುಖಿಯರದ್ದು. ಇದನ್ನು ತಮ್ಮ ಪ್ರತಿಷ್ಠೆಯ ವಿಷಯವೆಂದು ಪರಿಗಣಿಸಿದ ರಾಯಲಸೀಮಾ ಮಂಗಳಮುಖಿಯರ ಗ್ಯಾಂಗ್ ಅನಂತಪುರ ಜಿಲ್ಲಾಡಳಿತ ಮುಂದೆ ಗಲಾಟೆಯೆಬ್ಬಿಸಿದ್ದಾರೆ. ಇದರಿಂದ ಅನಂತಪುರದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಸಿನಿಮಾ ಶೈಲಿಯಲ್ಲಿ ನಡೆಯುತ್ತಿರುವ ಎರಡೂ ಗ್ಯಾಂಗ್ಗಳ ನಡುವಿನ ಗಲಾಟೆಯ ಬಗ್ಗೆ ಪೊಲೀಸ್ ಕೇಸ್ ಕೂಡ ದಾಖಲಾಗಿದ್ದು, ಅನಂತಪುರದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಶಾಂತಿ ಕದಡುವಂತೆ ಮತ್ತೊಮ್ಮೆ ಹಲ್ಲೆಗಳು ನಡೆದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸದ್ಯಕ್ಕೆ ಮಂಗಳಮುಖಿಯರ ಗ್ಯಾಂಗ್ ವಾರ ಅನಂತಪುರದಲ್ಲಿ ಹಾಟ್ ಟಾಪಿಕ್ ಆಗಿದೆ.
ಇದನ್ನೂ ಓದಿ: Crime News: ಅಕ್ರಮ ಸಂಬಂಧ ತಂದ ಕಂಟಕ; ಹೆಂಡತಿಯ ಪ್ರಿಯಕರನ ಗುಪ್ತಾಂಗಕ್ಕೆ ಶೂಟ್ ಮಾಡಿದ ಗಂಡ!
Crime News: ಕೇರಳದ ತೃತೀಯಲಿಂಗಿ ಆರ್ಜೆ ಅನನ್ಯಾ ಸಾವಿನ ಬೆನ್ನಲ್ಲೇ ಆಕೆಯ ಗೆಳೆಯನೂ ನೇಣಿಗೆ ಶರಣು
(Gang War: Bangalore Hijras Vs Rayalaseema Hijras Gang War in cinema style Police Case Registered)
Published On - 1:31 pm, Thu, 29 July 21