ಬೆಂಗಳೂರು: ಗಾಂಧೀಜಿ ಮಗ ಕುಡುಕನಾಗಲಿಲ್ವ? ಅನ್ನುತ್ತಾ ಬಸವರಾಜ ಬೊಮ್ಮಾಯಿಗೂ ಅಪ್ಪನ ಗುಣ ಇರುತ್ತದೆ ಎನ್ನಲಾಗದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ನೂತನ ಮುಖ್ಯಮಂತ್ರಿ ಬಗ್ಗೆ ಲೇವಡಿ ಮಾಡಿದ್ದರು. ಅದಕ್ಕೆ ಇಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ. ಸಿದ್ದರಾಮಯ್ಯನವರೇ ನೀವು ಯಾವ ಗಾಂಧಿ ಬಗ್ಗೆ ಹೇಳಿದ್ದು? ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ ಅಥವಾ ಸೋನಿಯಾ ಗಾಂಧಿ ಪುತ್ರನ ಬಗ್ಗೆಯೋ ಎಂದು ಪ್ರಶ್ನೆ ಮಾಡಿದೆ.
ನಿಮ್ಮ ಹಿರಿಯ ಪುತ್ರ ರಾಕೇಶ್ ವಿಪರೀತ ಕುಡಿಯುವ ಅಭ್ಯಾಸ ಹೊಂದಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕುಡಿದ ಮತ್ತಿನಲ್ಲಿ ಹಿರಿಯರ ಮೇಲೂ ದೌರ್ಜನ್ಯ ಎಸಗಿದ ಬಗ್ಗೆ ಸುದ್ದಿಯಾಗಿತ್ತು. ಇದೆಲ್ಲಾ ಅಪ್ಪನ ಗುಣ ಎಂದು ಸಾಮಾನ್ಯೀಕರಿಸಲು ಸಾಧ್ಯವೇ ಸಿದ್ದರಾಮಯ್ಯ? ಎಂದು ಹಿಡಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ರಾಜ್ಯ ಬಿಜೆಪಿ ಮಾರ್ಮಿಕವಾಗಿ ಪ್ರಶ್ನಿಸಿದೆ. ಜೊತೆಗೆ #ಮಜವಾದಿಸಿದ್ದರಾಮಯ್ಯ ಎಂದು ಹ್ಯಾಷ್ ಟ್ಯಾಗ್ ಬಳಸಿ ಲೇವಡಿ ಮಾಡಿದೆ.
ಪ್ರಾಮಾಣಿಕವಾಗಿ ಹೇಳಿ ಸಿದ್ದರಾಮಯ್ಯನವರೇ,
ನಿಮ್ಮ ಪುತ್ರ, ಡಾ. ಯತೀಂದ್ರ ಅವರಿಗೆ ನಿಮ್ಮ ಗುಣ ಎಷ್ಟು ಬಂದಿದೆ? ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ. ಸಂಸ್ಕಾರ, ಗುಣ, ಸಾಮರ್ಥ್ಯ ಅವರವರ ಗಳಿಕೆ ಎಂಬುದನ್ನು ಅರ್ಥೈಸಿಕೊಳ್ಳಿ. #ಮಜವಾದಿಸಿದ್ದರಾಮಯ್ಯ ಇದನ್ನು ಓದಿ: Siddaramaiah: ಗಾಂಧೀಜಿ ಮಗ ಕುಡುಕನಾಗಲಿಲ್ವ?; ಬಸವರಾಜ ಬೊಮ್ಮಾಯಿಗೂ ಅಪ್ಪನ ಗುಣ ಇರುತ್ತದೆ ಎನ್ನಲಾಗದು ಎಂದ ಸಿದ್ದರಾಮಯ್ಯ
(Karnataka BJP tweet questions siddaramaiah on alcohol habits)
ಪ್ರಾಮಾಣಿಕವಾಗಿ ಹೇಳಿ ಸಿದ್ದರಾಮಯ್ಯನವರೇ,
ನಿಮ್ಮ ಪುತ್ರ, ಡಾ. ಯತೀಂದ್ರ ಅವರಿಗೆ ನಿಮ್ಮ ಗುಣ ಎಷ್ಟು ಬಂದಿದೆ?
ಸಾಮಾನ್ಯವಾಗಿ ತಂದೆಯಿಂದ ಮಗನಿಗೆ ವಂಶವಾಹಿನಿ ರೂಪದಲ್ಲಿ ಬರುವುದು ಕಾಯಿಲೆ ಮಾತ್ರ. ಸಂಸ್ಕಾರ, ಗುಣ, ಸಾಮರ್ಥ್ಯ ಅವರವರ ಗಳಿಕೆ ಎಂಬುದನ್ನು ಅರ್ಥೈಸಿಕೊಳ್ಳಿ.#ಮಜವಾದಿಸಿದ್ದರಾಮಯ್ಯ
— BJP Karnataka (@BJP4Karnataka) July 29, 2021