ಉತ್ತರ ಪ್ರದೇಶದಲ್ಲಿ ‘ಮೊಹರಂ’ಗೆ ನಿರ್ಬಂಧ; ಸುತ್ತೋಲೆಯಲ್ಲಿ ‘ಹಬ್ಬ’ ಪದ ಬಳಕೆಗೆ ಆಕ್ಷೇಪ
Uttar Pradesh:ಮೊಹರಂ ಹಬ್ಬ ಆರಂಭವಾಗುವ ಒಂದು ದಿನ ಮೊದಲು ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಡಿಜಿಪಿ ತಮ್ಮ ಪತ್ರದಲ್ಲಿ ಹೇಳಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯದ ಮೇಲೆ ಕಟ್ಟುನಿಟ್ಟಾಗಿ ನಿಗಾ ಇಡುವಂತೆ ಹೇಳಿದ್ದಾರೆ
ಲಖನೌ: ಮೊಹರಂ ಅನ್ನು ನಿಷೇಧಿಸಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಸುತ್ತೋಲೆಯಲ್ಲಿ ಮೊಹರಂ ‘ಹಬ್ಬ’ ಎಂದು ಉಲ್ಲೇಖಿಸಿದ್ದಕ್ಕೆ ಉತ್ತರಪ್ರದೇಶದ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊವಿಡ್ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಸರ್ಕಾರವು ಮೊಹರಂ ಮೆರವಣಿಗೆಯನ್ನುನಿಷೇಧಿಸಿದೆ. ಎಸ್ಪಿಗೆ ಕಳುಹಿಸಿದ “ಗೌಪ್ಯ ಮತ್ತು ಅತ್ಯಂತ ಮುಖ್ಯವಾದ” ಪತ್ರದಲ್ಲಿ, ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮುಕುಲ್ ಗೋಯೆಲ್ ಅವರು ಕೊವಿಡ್ ಮಾರ್ಗಸೂಚಿ ಪಾಲಿಸಿ ರಾಜ್ಯದಲ್ಲಿ ಮೊಹರಂ ಆಚರಿಸಬಹುದು ಎಂದು ನಿರ್ದೇಶಿಸಿದ್ದಾರೆ.
ಆಗಸ್ಟ್ 10 ರಿಂದ 19 ರವರೆಗೆ ಮೊಹರಂ ಆಚರಿಸುವ 10 ದಿನಗಳಲ್ಲಿ ಯಾವುದೇ ಮೆರವಣಿಗೆಯನ್ನು (ಟಜಿಯಾ ಎಂದು ಕರೆಯಲಾಗುತ್ತದೆ) ನಡೆಸಲು ಅನುಮತಿಸಲಾಗುವುದಿಲ್ಲ. ಕೊವಿಡ್ -19 ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೆ ಎಂದು ಧಾರ್ಮಿಕ ಮುಖಂಡರು ಖಚಿತಪಡಿಸಿಕೊಳ್ಳಬೇಕು ಎಂದು ಗೋಯೆಲ್ ನಿರ್ದೇಶಿಸಿದ್ದಾರೆ.
ಈ ಅವಧಿಯಲ್ಲಿನ ಪರಿಸ್ಥಿತಿಯನ್ನು “ಅತ್ಯಂತ ಸೂಕ್ಷ್ಮ” ಎಂದು ಹೇಳುತ್ತಾ, ಡಿಜಿಪಿ ಮೊಹರಂ ಸಮಯದಲ್ಲಿ ಆಚರಣೆ ನಡೆಯುವ ಪ್ರದೇಶಗಳವನ್ನು ಅಧ್ಯಯನ ಮಾಡಲು ಮತ್ತು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲು ಡಿಜಿಪಿ ಹೇಳಿದ್ದಾರೆ, ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಬೇಕು ಎಂದು ಪೊಲೀಸ್ ಮುಖ್ಯಸ್ಥರು ಹೇಳಿದರು.
ವಿವಿಧ ಪೊಲೀಸ್ ಠಾಣೆಗಳಲ್ಲಿ ಲಭ್ಯವಿರುವ ಹಬ್ಬಗ ರಿಜಿಸ್ಟರ್‌ಗಳಲ್ಲಿನ ಎಲ್ಲಾ ನಮೂದುಗಳನ್ನು ಅಧ್ಯಯನ ಮಾಡಬೇಕು ಮತ್ತು ಪ್ರತ್ಯೇಕ ಮಾರ್ಗಕ್ಕೆ ಯಾವುದೇ ಅನುಮತಿಯನ್ನು ನೀಡಬಾರದು ಎಂದು ಅವರು ನಿರ್ದೇಶಿಸಿದ್ದಾರೆ.
ಮೊಹರಂ ಹಬ್ಬ ಆರಂಭವಾಗುವ ಒಂದು ದಿನ ಮೊದಲು ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಡಿಜಿಪಿ ತಮ್ಮ ಪತ್ರದಲ್ಲಿ ಹೇಳಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯದ ಮೇಲೆ ಕಟ್ಟುನಿಟ್ಟಾಗಿ ನಿಗಾ ಇಡುವಂತೆ ಹೇಳಿದ್ದಾರೆ. ಅಂತಹ ವಿಷಯವನ್ನು ನಿರ್ಬಂಧಿಸಬೇಕು ಎಂದು ಅವರು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ಇದೇ ವೇಳೆ, ಮೊಹರಂಗೆ ‘ಹಬ್ಬ’ ಎಂಬ ಪದವನ್ನು ಬಳಸಿದ್ದಕ್ಕೆ ಧಾರ್ಮಿಕ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಮೊಹರಂ ಎಂಬುದು ಕರ್ಬಲಾ ಯುದ್ಧದಲ್ಲಿ ಪ್ರವಾದಿ ಮುಹಮ್ಮದ್ ಮೊಮ್ಮಗ ಹುಸೇನ್ ಇಬ್ನ್ ಅಲಿ ಅಥವಾ ಇಮಾಮ್ ಹುಸೇನ್ ಅವರ ನಿಧನಕ್ಕೆ ಮುಸ್ಲಿಮರಿಗೆ ಶೋಕಾಚರಣೆಯ ಕಾಲವಾಗಿದೆ. ಮಾರ್ಗಸೂಚಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ, ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯು ಈ ಕುರಿತು ಚರ್ಚಿಸಲು ಸೋಮವಾರ ಸಭೆ ಕರೆದಿದೆ.
ಇದನ್ನೂ ಓದಿ: ಸಂಪುಟ ರಚನೆಗೆ ಸಿಕ್ತಾ ಗ್ರೀನ್ ಸಿಗ್ನಲ್? ದೆಹಲಿಯಿಂದ ಸಿಎಂ ಹೊತ್ತು ತರುವ ಹೊಸ ಸಚಿವರ ಲಿಸ್ಟ್ನಲ್ಲಿ ಯಾರಿದ್ದಾರೆ ?
ಇದನ್ನೂ ಓದಿ: ಮತ್ತೆ ಮರುಕಳಿಸಲಿದೆ ಆ ದಿನಗಳು; ಬೆಂಗಳೂರಿನ ಕೆಲ ಕಡೆ ಸೀಲ್ ಡೌನ್, ಹೈರಿಸ್ಕ್ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ
(Uttar Pradesh banned Muharram in view of the coronavirus disease clerics object to word festival used to describe the event)