ಮತ್ತೆ ಮರುಕಳಿಸಲಿದೆ ಆ ದಿನಗಳು; ಬೆಂಗಳೂರಿನ ಕೆಲ ಕಡೆ ಸೀಲ್​ ಡೌನ್, ಹೈರಿಸ್ಕ್ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ

Bangalore Lockdown: ಹೈರಿಸ್ಕ್ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ. ಬಿಬಿಎಂಪಿ ಸೂಚಿಸಿದ ಸ್ಥಳದಲ್ಲಿಯೇ ಕ್ವಾರಂಟೈನ್ ಆಗಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

ಮತ್ತೆ ಮರುಕಳಿಸಲಿದೆ ಆ ದಿನಗಳು; ಬೆಂಗಳೂರಿನ ಕೆಲ ಕಡೆ ಸೀಲ್​ ಡೌನ್, ಹೈರಿಸ್ಕ್ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ
ಸೀಲ್​ ಡೌನ್
Follow us
TV9 Web
| Updated By: Digi Tech Desk

Updated on:Aug 02, 2021 | 1:43 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರಿನ ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಮಹದೇವಪುರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಬಿಬಿಎಂಪಿ ಸೀಲ್ಡೌನ್ ಗೆ ಮುಂದಾಗಿದೆ. ಹೆಚ್ಚು ಕೇಸ್ ಪತ್ತೆ ಆಗಿರುವ ಮನೆಗಳಿಗೆ ಸೀಲ್ ಡೌನ್ ಮಾಡಲಾಗ್ತಿದೆ.

ಸೀಲ್‌ಡೌನ್ ಮಾಡುವ ಭರದಲ್ಲಿ ಮನೆ ಬಾಗಿಲೇ ಲಾಕ್ ಇನ್ನು ಸೀಲ್​ಡೌನ್ ಮಾಡುವ ಭರದಲ್ಲಿ ಬಿಬಿಎಂಪಿ ಸಿಬ್ಬಂದಿ ಎಡವಟ್ಟು ಮಾಡಿದ್ದಾರೆ. ಬೆಂಗಳೂರಿನ BTM ಲೇಔಟ್‌ನ ಫ್ಲ್ಯಾಟ್ ಬಾಗಿಲು ಲಾಕ್ ಮಾಡಲಾಗಿದೆ. ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್‌ಗೆ ಫ್ಲ್ಯಾಟ್‌ನಲ್ಲಿದ್ದವರಿಂದ ಮಾಹಿತಿ ಬಂದ ಹಿನ್ನೆಲೆ ಮತ್ತೆ ಬಾಗಿಲು ತೆರೆದು ಗೇಟ್‌ಗೆ ರೆಡ್ ಟೇಪ್ ಅಳವಡಿಕೆ ಮಾಡಲಾಯಿತು.

ಇನ್ನು ಹೈರಿಸ್ಕ್ ರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ. ಬಿಬಿಎಂಪಿ ಸೂಚಿಸಿದ ಸ್ಥಳದಲ್ಲಿಯೇ ಕ್ವಾರಂಟೈನ್ ಆಗಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ ಕೊವಿಡ್ ಟೆಸ್ಟ್ ಮಾಡಲಾಗುವುದು. ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ಬಂದರಷ್ಟೇ ಮನೆಗೆ ವಾಪಸ್ ಕಳಿಸಲಾಗುತ್ತೆ. ಕೇರಳದಿಂದ ಬರುವವರು ಕೊವಿಡ್ ನೆಗೆಟಿವ್ ವರದಿ ತರಬೇಕು ಎಂದರು.

ಕ್ವಾರಂಟೈನ್ ಎಲ್ಲಿ ಮಾಡ್ತಾರೆ? ಬಿಬಿಎಂಪಿ ಈಗಾಗಲೇ ನಿರ್ಮಾಣ ಮಾಡಿರುವ ಕೊವಿಡ್ ಕೇರ್ ಸೆಂಟರ್​ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತೆ. ಬಿಬಿಎಂಪಿ ಎಂಟು ವಲಯದಲ್ಲೂ ಕ್ವಾರಂಟೈನ್ ಕೇಂದ್ರ ನಿರ್ಮಾಣ ಮಾಡಿದೆ. ಹೈ ರಿಸ್ಕ್ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಅಲ್ಲಿ ಕ್ವಾರಂಟೈನ್ ಮಾಡಲಾಗುತ್ತೆ. ಹೋಟೆಲ್‌ಗಳಲ್ಲಿ ಕ್ವಾರಂಟೈನ್ ಆದರೆ ಹಣ ಪಾವತಿಸಬೇಕು. ಕೊವಿಡ್ ಕೇರ್ ಸೆಂಟರ್‌ನಲ್ಲಿ ಹಣ ಪಾವತಿಸಬೇಕಾಗಿಲ್ಲ.

ವೀಕೆಂಡ್ ಲಾಕ್‌ಡೌನ್ ಬಗ್ಗೆ ಬಿಬಿಎಂಪಿ ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಸಾಮಾನ್ಯ ಜನರು ಜೀವನ ನಡೆಸಬೇಕಾಗಿದೆ. ಕೊರೊನಾ ಸೋಂಕಿಗೆ ಪೂರ್ವ ಸಿದ್ಧತೆ ಆಗಬೇಕಾಗಿದೆ. ಸರ್ಕಾರದ ಹಂತದಲ್ಲಿ ಅಂತಿಮ‌ ತೀರ್ಮಾನ ಆಗಲಿದೆ. ಕೊರೊನಾ ಕೇಸ್‌ಗಳು 500ಕ್ಕಿಂತ ಕಡಿಮೆ ಬರುತ್ತಿದೆ. ಕಂಟೇನ್‌ಮೆಂಟ್ ವಿಚಾರದಲ್ಲಿ ಬಿಗಿಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶೇ.17ರಷ್ಟು ಜನ ವ್ಯಾಕ್ಸಿನ್ ಪಡೆದಿದ್ದಾರೆ. ಪಾಲಿಕೆಗೆ ಪ್ರತಿದಿನ 1.50 ಲಕ್ಷ ಡೋಸ್ ಲಸಿಕೆ ಬೇಕಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮುಂದೆ ಬೇಡಿಕೆ ಇಡಲಾಗಿದೆ ಎಂದು ಆಗಸ್ಟ್‌ನಲ್ಲಿ ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ವಿಚಾರಕ್ಕೆ ಸಂಬಂಧಿಸಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ. ಈಗಲೂ ಎರಡನೆ ಅಲೆ ಮುಗಿದಿಲ್ಲ ಅಂತಾರೆ ಮತ್ತೆ ಕೆಲವರು ಮೂರನೇ ಅಲೆ ಆರಂಭ ಅಂತಾರೆ. ಹೀಗಾಗಿ ತಜ್ಞರು ಅಲೆ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಇಳಿಕೆಯತ್ತ ಸಾಗಿದ್ದ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗ್ತಿದೆ. 500ರೊಳಗೆ ಬರ್ತಿದ್ದ ಪಾಸಿಟಿವ್ ನಂಬರ್, ಮತ್ತೆ ಹಾವು ಏಣಿ ಆಟ ಆಡ್ತಿದೆ. ಕೇರಳದಲ್ಲಿ ಬೀಸ್ತಿರೋ ಹೆಮ್ಮಾರಿ ಚಂಡ ಮಾರುತ ರಾಜಧಾನಿ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ಹೀಗಾಗೇ, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಮತ್ತೆ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೆ ತರೋ ಸಾಧ್ಯತೆ ದಟ್ಟವಾಗಿದೆ.

ಬಿಬಿಎಂಪಿಗೆ ಫುಲ್ ಪವರ್, ಬೆಂಗಳೂರಿನಲ್ಲಿ ಹೈ ಅಲರ್ಟ್ ಸಿಎಂ ಬೊಮ್ಮಾಯಿ ಈಗಾಗಲೇ ಅಧಿಕಾರಿಗಳ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದು, ಕೇರಳದಿಂದ ಬರೋ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಿದ್ದಾರೆ. ಹೀಗಾಗೇ, ಸಿಟಿ ರೈಲ್ವೆ ನಿಲ್ದಾಣ, ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಖಾಸಗಿ ವಾಹನಗಳಲ್ಲಿ ಕೇರಳ ಮತ್ತು ಮಹಾರಾಷ್ಟ್ರದಿಂದ ಬರೋರನ್ನ ತಪಾಸಣೆ ನಡೆಸಲಾಗ್ತಿದೆ. ಅಷ್ಟೇ ಅಲ್ಲ ಕೊರೊನಾ ನೆಗೆಟಿವ್ ರಿಪೋರ್ಟ್ ಇಲ್ದೆ ಇದ್ರೆ, ಸ್ಥಳದಲ್ಲೇ ಟೆಸ್ಟ್ ಮಾಡಿ, ಕೆಲ ದಿನಗಳ ಸೆಲ್ಫ್ ಕ್ವಾರಂಟೈನ್ನಲ್ಲಿರಬೇಕು ಅಂತಾ ರೂಲ್ಸ್ ಮಾಡಲಾಗಿದೆ. ಇದಷ್ಟೇ ಅಲ್ಲ, ಕೊರೊನಾ ಸೋಂಕಿನ ನಿಯಂತ್ರಣ ಮತ್ತು ಯಾವುದೇ ಕ್ರಮ ತೆಗೆದುಕೊಳ್ಳೋಕೆ ಸರ್ಕಾರ ಬಿಬಿಎಂಪಿಗೆ ಫುಲ್ ಪವರ್ ಕೊಟ್ಟಿದೆ. ಇದಕ್ಕಾಗೇ, ಪಾಲಿಕೆ ಕೆಲವೊಂದಿಷ್ಟು ಪ್ಲ್ಯಾನ್ಗಳನ್ನ ಮಾಡಿಕೊಂಡಿದೆ.

ಕೊರೊನಾ ನಿಯಂತ್ರಣಕ್ಕೆ ಪ್ಲ್ಯಾನ್ ಪ್ಲ್ಯಾನ್ ನಂ.1 : ನೈಟ್ ಮತ್ತು ವೀಕೆಂಡ್ ಕರ್ಫ್ಯೂ ಜಾರಿ ಮಾಡೋದು ಪ್ಲ್ಯಾನ್ ನಂ.2 : ಹೆಚ್ಚು ಸೋಂಕಿತರು ಇರೋ ಏರಿಯಾ ಸೀಲ್ಡೌನ್ ಪ್ಲ್ಯಾನ್ ನಂ.3 : ಹಾಟ್ಸ್ಪಾಟ್ ಏರಿಯಾದಲ್ಲಿ ಸಭೆ, ಮಾರುಕಟ್ಟೆ ಕ್ಲೋಸ್ ಪ್ಲ್ಯಾನ್ ನಂ.4 : ಸೋಂಕಿತರ ಸಂಖ್ಯೆ ಏರಿಕೆಯಾದ್ರೆ ಮತ್ತೆ ಲಾಕ್ಡೌನ್..?

ಅಂದಹಾಗೇ ಈಗಾಗಲೇ ರಾತ್ರಿ 10 ಗಂಟೆಯ ನಂತ್ರ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಕೊರೊನಾ ಸಂಖ್ಯೆ ನಿಯಂತ್ರಣಕ್ಕೆ ಬರದಿದ್ರೆ. ರಾತ್ರಿ 10 ಗಂಟೆಯ ಬದಲು ರಾತ್ರಿ 8ಗಂಟೆಯಿಂದಲೇ ಮತ್ತೆ ನೈಟ್ ಕರ್ಫ್ಯೂ ಹೇರೋಕೆ ಬಿಬಿಎಂಪಿ ಪ್ಲ್ಯಾನ್ ರೂಪಿಸಿದೆ. ಇದ್ರ ಜೊತೆಗೆ ವೀಕೆಂಡ್ ಕರ್ಫ್ಯೂವನ್ನೂ ಜಾರಿ ಮಾಡೋಕೆ ಪ್ಲ್ಯಾನ್ ಇದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಿದೆ. ಇನ್ನು ಬಿಬಿಎಂಪಿ ಪ್ಲ್ಯಾನ್ ಎರಡರ ಪ್ರಕಾರ ಸೋಂಕು ಹರಡದಂತೆ ತಡೆಗಟ್ಟಲು 10ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗೋ ಏರಿಯಾವನ್ನೂ ಕಂಪ್ಲೀಟ್ ಸೀಲ್ಡೌನ್ ಮಾಡಲು ಪ್ಲ್ಯಾನ್ ಮಾಡಿದ್ದು, ಈಗಾಗಲೇ ಅದು ಕಾರ್ಯರೂಪಕ್ಕೆ ಬಂದಿದೆ.

ಇನ್ನು ಪ್ಲ್ಯಾನ್ ನಂಬರ್ ಮೂರರ ಪ್ರಕಾರ ಒಂದು ವೇಳೆ ಏರಿಯಾದ ಏನಾದ್ರೂ ಹಾಟ್ಸ್ಪಾಟ್ ಆದ್ರೆ, ಆ ಏರಿಯಾದ ಅಥವಾ ವಾರ್ಡ್ಗಳಲ್ಲಿ ಮದುವೆ, ಪಾರ್ಟಿಹಾಲ್, ಮಾರುಕಟ್ಟೆ ಸೇರಿದಂತೆ ಜನ ಸೇರೋ ಸ್ಥಳಗಳನ್ನ ಒಂದು ವಾರದ ಮಟ್ಟಿಗೆ ಕ್ಲೋಸ್ ಮಾಡೋದಾಗಿದೆ. ಇನ್ನು ಅಂತಿಮವಾಗಿ ಅಂದ್ರೆ ನಾಲ್ಕನೇ ಪ್ಲ್ಯಾನ್ ಪ್ರಕಾರ ಮತ್ತೆ ಲಾಕ್ಡೌನ್ ಮಾಡೋದು ಸಹ ಇದೆ. ಯಾಕಂದ್ರೆ ಸದ್ಯ ಸೋಂಕಿತರ ಸಂಖ್ಯೆ 500ರ ಆಸುಪಾಸಿನಲ್ಲಿದ್ದು, ಆಸ್ಪತ್ರೆಗೆ ದಾಖಲಾಗ್ತಿರೋ ಸೋಂಕಿತರ ಸಂಖ್ಯೆ ಕಡಿಮೆಯಿದೆ. ಒಂದೊಮ್ಮೆ ಸೋಂಕಿತರ ಸಂಖ್ಯೆ 1 ಸಾವಿರ ಗಡಿದಾಟಿದ್ರೆ, ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಏರಿಕೆಯಾದ್ರೆ ಬೆಂಗಳೂರನ್ನ ಒಂದು ವಾರದ ಮಟ್ಟಿಗೆ ಲಾಕ್ಡೌನ್ ಮಾಡಲು ಬಿಬಿಎಂಪಿ ಪ್ಲಾನ್ ಮಾಡಿದೆ.

ಇದನ್ನೂ ಓದಿ: ಮತ್ತೆ ಬರಲಿದೆ ಸಾಂಸ್ಥಿಕ ಕ್ವಾರಂಟೈನ್; ಬಿಬಿಎಂಪಿ ವತಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆ

Published On - 12:08 pm, Mon, 2 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ