AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಟ್ ಕರ್ಫ್ಯೂ, ಪರಿಣಾಮಕಾರಿ ಕ್ರಮಗಳ ಬಗ್ಗೆ ಶೀಘ್ರದಲ್ಲಿಯೇ ಸಿಎಂ ಬೊಮ್ಮಾಯಿ ಜೊತೆ ಸಭೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಪಕ್ಕದ ರಾಜ್ಯಗಳಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ ಎಂದು ಹೇಳಿಕೆ ನೀಡಿದ ಗೌರವ್ ಗುಪ್ತಾ, ನೈಟ್ ಕರ್ಫ್ಯೂ, ಪರಿಣಾಮಕಾರಿ ಕ್ರಮಗಳ ಬಗ್ಗೆ ಚರ್ಚೆ ಶೀಘ್ರದಲ್ಲಿಯೇ ಸಿಎಂ ಬೊಮ್ಮಾಯಿ ಜೊತೆ ಸಭೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ನೈಟ್ ಕರ್ಫ್ಯೂ, ಪರಿಣಾಮಕಾರಿ ಕ್ರಮಗಳ ಬಗ್ಗೆ ಶೀಘ್ರದಲ್ಲಿಯೇ ಸಿಎಂ ಬೊಮ್ಮಾಯಿ ಜೊತೆ ಸಭೆ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ
ಪ್ರಾತಿನಿಧಿಕ ಚಿತ್ರ
TV9 Web
| Updated By: sandhya thejappa|

Updated on: Aug 02, 2021 | 2:07 PM

Share

ಬೆಂಗಳೂರು: ಮಾಸ್ಕ್, ದೈಹಿಕ ಅಂತರ ಬಗ್ಗೆ ಹೆಚ್ಚು ನಿಗಾವಹಿಸಲು ಬಿಬಿಎಂಪಿ ಕಮಿಷನರ್ ಮತ್ತು ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ. ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಎಚ್ಚರಿಕೆ ವಹಿಸಬೇಕು ಅಂತ ಬೆಂಗಳೂರು ಪೊಲೀಸ್ ಆಯುಕ್ತರಾದ ಕಮಲ್ ಪಂತ್ ತಿಳಿಸಿದ್ದಾರೆ. 3ನೇ ಅಲೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಬಿಬಿಎಂಪಿ ಹಾಗು ಪೊಲೀಸ್ ಇಲಾಖೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನೆ ನೀಡಿದ್ದಾರೆ.

ಪಕ್ಕದ ರಾಜ್ಯಗಳಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಎಚ್ಚರಿಕೆ ವಹಿಸುವ ಅಗತ್ಯತೆ ಇದೆ ಎಂದು ಹೇಳಿಕೆ ನೀಡಿದ ಗೌರವ್ ಗುಪ್ತಾ, ನೈಟ್ ಕರ್ಫ್ಯೂ, ಪರಿಣಾಮಕಾರಿ ಕ್ರಮಗಳ ಬಗ್ಗೆ ಚರ್ಚೆ ಶೀಘ್ರದಲ್ಲಿಯೇ ಸಿಎಂ ಬೊಮ್ಮಾಯಿ ಜೊತೆ ಸಭೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಇವತ್ತು ನಗರ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿ ಎಲ್ಲಾ ಸಭೆ ಮಾಡಿದ್ದೀವಿ. ಎರಡನೇ ಅಲೆ ಪರಿಣಾಮಕಾರಿಯಾಗಿ ಎದುರಿಸಿದ್ದೀವಿ. ಅನ್​ಲಾಕ್​ ಆಗಿ ಸಾಮಾನ್ಯ ಸ್ಥಿತಿಗೆ ಬಂದಿದ್ದೀವಿ. ಆದರೆ ಪಕ್ಕದ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹಾಗಾಗಿ ಎಚ್ಚರಿಕೆ ವಹಿಸುವುದು ಅವಶ್ಯಕತೆ ಇದೆ ಎಂದು ಗೌರವ್ ಗುಪ್ತಾ ಹೇಳಿದರು.

ಪಕ್ಕದ ರಾಜ್ಯದಿಂದ ಬಂದವರಿಂದ ಸೋಂಕು ಹರಡಬಾರದು ಅಂತ ಹೆಚ್ಚು ಕ್ರಮ ವಹಿಸಲಾಗುತ್ತಿದೆ. ಹೀಗಾಗಿ ಹೆಚ್ಚುವರಿಯಾಗಿ ಟೆಸ್ಟ್ ಮಾಡುವುದು, ಕ್ವಾರಂಟೈನ್ ಮಾಡಲಾಗುತ್ತಿದೆ. ಆಂಟಿಬಾಡಿ ಸಿರೋ ಸರ್ವೆ ಪ್ರಕಾರ ನಾವು ಸೇಫ್ ಆಗಲಿದೆ. ನೈಟ್ ಕರ್ಪ್ಯೂ ಅಥವಾ ಪರಿಣಾಮಕಾರಿ ಕ್ರಮಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಬೇಕು. ಸಿಎಂ ಅವರ ಜೊತೆಯಲ್ಲಿ ಶೀಘ್ರದಲ್ಲಿ ಸಭೆ ನಡೆಯುತ್ತದೆ. ನಂತರ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ತಜ್ಞರು ವರದಿಯನ್ನು ನೀಡುತ್ತಾರೆ. ಬಳಿಕ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ

Nirmala Sitharaman: ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ. ದಾಟಿದ ಜಿಎಸ್​ಟಿ ಸಂಗ್ರಹ; ಚೇತರಿಕೆಯತ್ತ ಆರ್ಥಿಕತೆ ಎಂದ ನಿರ್ಮಲಾ

Covid 19 Updates: ‘ಕೊರೊನಾ ಮೂರನೇ ಅಲೆ ಈ ತಿಂಗಳಲ್ಲೇ ಶುರುವಾಗಲಿದೆ, ಅಕ್ಟೋಬರ್​ನಲ್ಲಿ ಉತ್ತುಂಗಕ್ಕೇರಲಿದೆ’

(BBMP commissioner Gaurav Gupta said would be meeting with CM Bommai soon to take action on corona third wave)

ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಸಿಬ್ಬಂದಿಯನ್ನ ಹೆದರಿಸಿ ಮಸಾಜ್​ ಮಾಡಿಸಿಕೊಂಡ ಮುಖ್ಯಶಿಕ್ಷಕಿ: ವಿಡಿಯೋ ವೈರಲ್
ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ
ಬೀದರ್‌ನ ಐತಿಹಾಸಿಕ ಗುರುದ್ವಾರಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ಬೆಂಗಳೂರಿನ ಹಲವೆಡೆ ಮಳೆ: ಸಿಲಿಕಾನ್ ಸಿಟಿ ಮತ್ತಷ್ಟು ಕೂಲ್ ಕೂಲ್
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂಗೆ, ನಮ್ಮದು ಸ್ಲೋ ಇರುತ್ತೆ: ಜಾರಕಿಹೊಳಿ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ಲಾಸ್ ಏಂಜಲೀಸ್​​ನಲ್ಲಿ ಡೆಲ್ಟಾ ವಿಮಾನ ತುರ್ತು ಭೂಸ್ಪರ್ಶ
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ವೇಗವಾಗಿ ಬಂದ ಆಂಬ್ಯುಲೆನ್ಸ್​ ಕನ್ವಾರಿಯಾಗಳಿಗೆ ಡಿಕ್ಕಿ, ಇಬ್ಬರು ಸಾವು
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಹೆರಿಗೆಗೆಂದು ತವರಿಗೆ ಹೋದ ಟೆಕ್ಕಿ ಪತ್ನಿ, ಫ್ಲ್ಯಾಟ್​ ಮಾರಿ ಪತಿ ಪರಾರಿ
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್​​ ಮುಕ್ತಿಗೆ ಪೊಲೀಸರಿಂದ ಮೆಗಾ ಪ್ಲ್ಯಾನ್
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು
ವಿಯೆಟ್ನಾಂನ ಹಾ ಲಾಂಗ್ ಕೊಲ್ಲಿಯಲ್ಲಿ ಹಡಗು ಮಗುಚಿ 34 ಮಂದಿ ಸಾವು
Weekly Horoscope: ಜುಲೈ 21 ರಿಂದ 27ರವರೆಗಿನ ವಾರ ಭವಿಷ್ಯ
Weekly Horoscope: ಜುಲೈ 21 ರಿಂದ 27ರವರೆಗಿನ ವಾರ ಭವಿಷ್ಯ