AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 100 ಕೆಜಿ ತೂಕದ ಲೆಹೆಂಗಾ ತೊಟ್ಟು ನಿಂತ ವಧು; ವಿಷ್ ಮಾಡಲು ಜಾಗವಿಲ್ಲದೆ ಅತಿಥಿಗಳು ಕಂಗಾಲು!

100 KG Lehenga Video : ತನ್ನ ಮದುವೆಗೆ ಬರೋಬ್ಬರಿ 100 ಕೆ.ಜಿ. ತೂಕದ ಕೆಂಪು ಬಣ್ಣದ ಲೆಹೆಂಗಾ ತೊಟ್ಟಿದ್ದ ಪಾಕಿಸ್ತಾನದ ವಧುವಿನ ವಿಡಿಯೋ ಭಾರೀ ವೈರಲ್ ಆಗಿದೆ.

Viral Video: 100 ಕೆಜಿ ತೂಕದ ಲೆಹೆಂಗಾ ತೊಟ್ಟು ನಿಂತ ವಧು; ವಿಷ್ ಮಾಡಲು ಜಾಗವಿಲ್ಲದೆ ಅತಿಥಿಗಳು ಕಂಗಾಲು!
100 ಕೆಜಿ ತೂಕದ ಲೆಹೆಂಗಾ ಧರಿಸಿದ ವಧು
TV9 Web
| Edited By: |

Updated on: Jul 29, 2021 | 9:40 PM

Share

ತಮ್ಮ ಮದುವೆಯಲ್ಲಿ ಬಹಳ ಸುಂದರವಾಗಿ ಮಿಂಚಬೇಕೆಂಬುದು ಎಲ್ಲ ವಧು-ವರರ ಕನಸು. ಅದರಲ್ಲೂ ಮದುಮಗಳಂತೂ ಈ ವಿಷಯದಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾಳೆಂಬುದು ಗೊತ್ತಿಲ್ಲದ ಸಂಗತಿಯೇನಲ್ಲ. ಹೀಗಾಗಿ, ಮದುವೆಯ ಡ್ರೆಸ್, ಮೇಕಪ್, ಮೆಹಂದಿ, ಫೋಟೋ-ವಿಡಿಯೋಗಳಿಗೆ ಲಕ್ಷಾಂತರ ರೂ. ಸುರಿಯುವವರೇನೂ ಕಡಿಮೆಯಿಲ್ಲ. ಸೆಲೆಬ್ರಿಟಿಗಳ ಮದುವೆಯಲ್ಲಿ ಅವರು ಯಾವ ಬಟ್ಟೆ ಧರಿಸಿದ್ದರು, ಅದರ ಡಿಸೈನರ್ ಯಾರು, ಎಷ್ಟು ಖರ್ಚಾಯ್ತು ಎಂಬುದೆಲ್ಲ ಹೈಲೈಟ್ ಆಗುತ್ತದೆ. ಆದರೆ, ಈ ಹುಡುಗಿ ಸೆಲೆಬ್ರಿಟಿಯೇನಲ್ಲ; ಆದರೂ ಆಕೆ ತನ್ನ ಮದುವೆಯ ರಿಸೆಪ್ಷನ್​ಗೆ ತೊಟ್ಟಿದ್ದ ಉಡುಗೆ ಈಗ ಭಾರೀ ಚರ್ಚೆಗೊಳಗಾಗಿದೆ. ಆಕೆ ತೊಟ್ಟಿದ್ದ ಡ್ರೆಸ್ ನೋಡಿದವರೆಲ್ಲರೂ ಅಚ್ಚರಿಪಟ್ಟಿದ್ದಾರೆ. ಅಂತಹ ವಿಶೇಷವಾದುದು ಏನಿತ್ತು ಆ ಡ್ರೆಸ್​ನಲ್ಲಿ ಎಂಬ ಪ್ರಶ್ನೆ ನಿಮಗಿದ್ದರೆ ಒಮ್ಮೆ ಈ ಫೋಟೋವನ್ನೊಮ್ಮೆ ಸರಿಯಾಗಿ ನೋಡಿ.

ತನ್ನ ಮದುವೆಗೆ ಬರೋಬ್ಬರಿ 100 ಕೆ.ಜಿ. ತೂಕದ ಕೆಂಪು ಬಣ್ಣದ ಲೆಹೆಂಗಾ ತೊಟ್ಟಿದ್ದ ಪಾಕಿಸ್ತಾನದ ವಧು ಅದನ್ನು ಹೊತ್ತು ನಿಲ್ಲಲಾಗದೆ ಪರದಾಡಿದ್ದಳು. ತೆಳ್ಳನೆಯ ಯುವತಿಗೆ ಆ ಒಂದು ಕ್ವಿಂಟಾಲ್ ಭಾರದ ಡ್ರೆಸ್ ಅನ್ನು ಹೊರಲು ಹೇಗೆ ಸಾಧ್ಯ? ತಾನು ತೊಟ್ಟ ದುಬಾರಿ ಡ್ರೆಸ್ ಅನ್ನು ಹಾಸಿಕೊಂಡು ಕುಳಿತ ವಧುವಿನ ಫೋಟೋಗಳು ವೈರಲ್ ಆಗಿವೆ. ತನ್ನ ಮದುವೆ ಬಹಳ ವಿಶೇಷವಾಗಿರಬೇಕು ಎಂದು ಮೊದಲೇ ಪ್ಲಾನ್ ಮಾಡಿದ್ದ ವಧು ಅದಕ್ಕಾಗಿ 100 ಕೆಜಿ ತೂಕದ ಲೆಹೆಂಗಾವನ್ನು ಡಿಸೈನ್ ಮಾಡಿಸಿಕೊಂಡಿದ್ದಳು.

ವೇದಿಕೆಯ ತುಂಬ ಆ ಲೆಹೆಂಗಾ ಹರಡಿಕೊಂಡಿದ್ದರಿಂದ ವೇದಿಕೆಯನ್ನು ಹತ್ತಿ ಹೋಗಲಾಗದೆ ಅತಿಥಿಗಳು ಪರದಾಡುವಂತಾಯಿತು. ಕೆಂಪು ಬಣ್ಣದ, ಮೈ ತುಂಬ ಎಂಬ್ರಾಯಿಡರಿ ವರ್ಕ್ ಮಾಡಿದ್ದ ಲೆಹೆಂಗಾ ನೋಡಿ ರಿಸೆಪ್ಷನ್​ಗೆ ಬಂದ ಅತಿಥಿಗಳು ಅಚ್ಚರಿ ಪಟ್ಟಿದ್ದಾರೆ. ಮದುಮಗಳ ಜೊತೆ ನಿಂತು ಫೋಟೋಗೆ ಫೋಸ್ ಕೊಡಲೂ ಸಾಧ್ಯವಾಗದೆ ಅತಿಥಿಗಳು ಪರದಾಡಿದ್ದಾರೆ.

ಇದನ್ನೂ ಓದಿ: Viral Video: ಯುವತಿಯರೂ ನಾಚುವಂತೆ ಡ್ಯಾನ್ಸ್ ಮಾಡುವ 78ರ ಅಜ್ಜಿಯ ವಿಡಿಯೋ ವೈರಲ್; ಈಕೆ ಈಗ ಟಿಕ್ ಟಾಕ್ ಸ್ಟಾರ್!

Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!

(Viral Video: Pakistani Bride Wore 100 Kg Red Lehenga On Her Wedding Day Watch Trending Video)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ