Viral Video: ಬರಿಗೈಯಲ್ಲಿ ಹಾವನ್ನು ಹಿಡಿದು ರಕ್ಷಿಸಿದ ಯುವತಿ; ಅತ್ಯಂತ ಅಪಾಯಕಾರಿ ಸಾಹಸದ ದೃಶ್ಯ ವೈರಲ್

TV9 Digital Desk

| Edited By: shivaprasad.hs

Updated on:Jul 29, 2021 | 6:47 PM

Snake Rescue: ಧೈರ್ಯವಂತ ಉರಗ ತಜ್ಞೆಯೋರ್ವಳು ಬರಿಗೈಯಲ್ಲಿ ಹಾವನ್ನು ಹಿಡಿಯುತ್ತಿರುವ ದೃಶ್ಯ ವೈರಲ್ ಆಗಿದೆ. ನೆಟ್ಟಿಗರು ಇದಕ್ಕೆ ಭಿನ್ನವಾಗಿ ಪ್ರತಿಕ್ರಿಯಿಸಿದ್ದು, ಕೆಲವರು ಆಕೆಯ ಧೈರ್ಯ ಕೊಂಡಾಡಿದ್ದರೆ, ಮತ್ತೆ ಕೆಲವರು ಕಿವಿ ಮಾತು ಹೇಳಿದ್ದಾರೆ.

Viral Video: ಬರಿಗೈಯಲ್ಲಿ ಹಾವನ್ನು ಹಿಡಿದು ರಕ್ಷಿಸಿದ ಯುವತಿ; ಅತ್ಯಂತ ಅಪಾಯಕಾರಿ ಸಾಹಸದ ದೃಶ್ಯ ವೈರಲ್
ಯುವತಿ ಹಾವನ್ನು ಹಿಡಿಯುತ್ತಿರುವ ದೃಶ್ಯ
Follow us


ಯುವತಿಯೊಬ್ಬಳು ಬರಿಗೈಯಿಂದ ದೊಡ್ಡ ಹಾವೊಂದನ್ನು ಹಿಡಿದ ವಿಡಿಯೊ ಈಗ ವೈರಲ್ ಆಗಿದೆ. ಪಾಳು ಬಂಗಲೆಯೊಂದರಲ್ಲಿ ಅಡಗಿದ್ದ ದೊಡ್ಡ ಹಾವೊಂದನ್ನು ಹಿಡಿಯಲು ಪ್ರಯತ್ನಿಸುವ ಆಕೆ ಅದಕ್ಕಾಗಿ ಕೋಲಿನ ಸಹಾಯ ಪಡೆಯುತ್ತಾಳೆ. ಆದರೆ ಹಾವು ಯುವತಿಗೆ ಕೋಲಿನಲ್ಲಿ ಹಾವು ಸಿಗದ ಕಾರಣ, ಬರಿಗೈಯಲ್ಲಿ ಹಾವನ್ನು ಹಿಡಿಯಲು ಮುಂದಾಗುತ್ತಾಳೆ. ಹಾವನ್ನು ಹಿಡಿಯುವ ಅತ್ಯಂತ ಅಪಾಯಕಾರಿ ವಿಧಾನಕ್ಕೆ ಆಕೆ ಮುಂದಾಗಿ, ಅದರಲ್ಲಿ ಯಶಸ್ವಿಯೂ ಆಗುತ್ತಾಳೆ. ಗ್ರಾಮಸ್ಥರು ಈ ಘಟನೆಯನ್ನು ವಿಡಿಯೊ ಮಾಡಿದ್ದು, ಪ್ರಸ್ತುತ ಇದು ಎಲ್ಲೆಡೆ ವೈರಲ್ ಆಗುತ್ತಿದೆ.

ಪಾಳು ಬಂಗಲೆಯಿಂದ ಹಾವನ್ನು ಹಿಡಿಯಲು ಯಶಸ್ವಿಯಾಗುವ ಆಕೆ ಅದನ್ನು ಹೊರತಂದು ರಸ್ತೆಗೆ ಬಿಡುತ್ತಾಳೆ. ಹಾವನ್ನು ಚೀಲಕ್ಕೆ ತುಂಬಿಸುವ ಪ್ರಯತ್ನದಲ್ಲಿ ಹಾವು ತಪ್ಪಿಸಿಕೊಳ್ಳಲು ನೋಡುತ್ತದೆ. ಆದರೂ ಪ್ರಯತ್ನ ಬಿಡದ ಆಕೆ ಅದನ್ನು ಹಿಡಿದು, ಪರೀಕ್ಷಿಸಿ ಚೀಲದ ಒಳಗೆ ತುಂಬುತ್ತಾಳೆ. ಸುರಕ್ಷಿತ ಸ್ಥಳಕ್ಕೆ ಹಾವನ್ನು ಸಾಗಿಸುವುದಕ್ಕಾಗಿ ಹಾವನ್ನು ಹಿಡಿಯಲಾಗಿದೆ ಎಂದು ತಿಳಿದುಬಂದಿದೆ.

ವಿಡಿಯೊದ ದೃಶ್ಯಾವಳಿ ಇಲ್ಲಿದೆ:

ಪ್ರಸ್ತುತ ವೈರಲ್ ಆಗುತ್ತಿರುವ ಈ ವಿಡಿಯೊದಲ್ಲಿ ಹಲವರು ಆಕೆಯ ಧೈರ್ಯವನ್ನು ಕೊಂಡಾಡಿದ್ದರೆ, ಮತ್ತೆ ಕೆಲವರು ಹಾವನ್ನು ಹಿಡಿಯುವುದಕ್ಕೆ ಈ ವಿಧಾನ ಅನುಸರಿಸುವುದು ಅತ್ಯಂತ ಅಪಾಯಕಾರಿ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಆಕೆಯ ಅದೃಷ್ಟ ಚೆನ್ನಾಗಿದ್ದ ಕಾರಣ ಆಕೆ ಬದುಕುಳಿದಿದ್ದಾಳೆ; ಯಾವ ಉರಗ ತಜ್ಞರೂ ಈ ಮಾದರಿಯನ್ನು ಅನುಸರಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಮತ್ತೋರ್ವರ ಪ್ರಕಾರ, ಉರಗ ತಜ್ಞರಿಗೆ ಹಾವನ್ನು ಹಿಡಿಯುವಾಘ ಆತ್ಮ ವಿಶ್ವಾಸದಷ್ಟೇ ಎಚ್ಚರಿಕೆಯೂ ಮುಖ್ಯ. ಅದಕ್ಕಾಗಿ ಸೂಕ್ತ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳುವುದು ಒಳ್ಳೆಯದು ಎಂದು ಕಿವಿ ಮಾತು ಹೇಳಿದ್ದಾರೆ. ಬಹುತೇಕರು ಯುವತಿಯ ಸಾಹಸವನ್ನು ಕೊಂಡಾಡುತ್ತಿದ್ದು, ಬಹಳ ಧೈರ್ಯವಂತೆ ಮತ್ತು ಸಮಯಪ್ರಜ್ಞೆ ಆಕೆಗಿದೆ ಎಂದು ಶ್ಲಾಘಿಸಿದ್ದಾರೆ.

ನಾಲ್ಕು ನಿಮಿಷದ ಈ ದೃಶ್ಯವು ವೈರಲ್ ಆಗಿದ್ದು ಜನರ ಗಮನ ಸೆಳೆದಿದೆ. ಸುಮಾರು 1.5ಲಕ್ಷಕ್ಕೂ ಅಧಿಕ ಜನ ವಿಡಿಯೊವನ್ನು ಇಷ್ಟಪಟ್ಟಿದ್ದು, ಸುಮಾರು 19,000 ಜನ ಅದನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 

Vikram Batra: ಅಮರ ಪ್ರೇಮಕತೆ; ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾದ ವಿಕ್ರಮ್ ಬಾತ್ರಾ ಲವ್ ಸ್ಟೋರಿ ಕೇಳಿದ್ರೆ ಕಳೆದೇ ಹೋಗ್ತೀರ!

ಮಂಗನಿಂದ ಮಾನವನೆಂಬ ಅಂಶವನ್ನು ಈ ತಾಯಿ ಮಂಗ ಅಕ್ಷರಶಃ ಸಾಬೀತು ಮಾಡುತ್ತಿದೆ! ವಿಡಿಯೋವನ್ನೊಮ್ಮೆ ನೋಡಿ

Viral Video: ಪ್ರವಾಸಿ ತಾಣದ ನಡುರಸ್ತೆಯೊಂದರಲ್ಲಿ ಮಂಗಗಳ ಗ್ಯಾಂಗ್ ವಾರ್; ಆಹಾರದ ಕೊರತೆ ಕಾರಣವಿರಬಹುದೆಂದ ತಜ್ಞರು!

(Woman catching a snake with bare hands video gone viral on social media)

ತಾಜಾ ಸುದ್ದಿ

Related Stories

Click on your DTH Provider to Add TV9 Kannada