Vikram Batra: ಅಮರ ಪ್ರೇಮಕತೆ; ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾದ ವಿಕ್ರಮ್ ಬಾತ್ರಾ ಲವ್ ಸ್ಟೋರಿ ಕೇಳಿದ್ರೆ ಕಳೆದೇ ಹೋಗ್ತೀರ!

Captain Vikram Batra Love Story: ಕಾರ್ಗಿಲ್ ಯುದ್ಧಕ್ಕೆ ತೆರಳುವ ಮುನ್ನ ಮಾನಸ ದೇವಿ ದೇವಸ್ಥಾನದಲ್ಲಿ ತನ್ನ ಕೈಬೆರಳನ್ನು ಬ್ಲೇಡ್​ನಿಂದ ಕಟ್ ಮಾಡಿಕೊಂಡು, ಪ್ರೇಯಸಿಯ ಹಣೆಗೆ ರಕ್ತ ಸಿಂಧೂರವಿಟ್ಟಿದ್ದರು ಕ್ಯಾಪ್ಟನ್ ವಿಕ್ರಮ್ ಬಾತ್ರಾ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವಿಕ್ರಮ್ ಬಾತ್ರಾ ಜೀವನದ ಕತೆಯೇ ಶೇರ್​ಷಾ ಸಿನಿಮಾ.

Vikram Batra: ಅಮರ ಪ್ರೇಮಕತೆ; ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮರಾದ ವಿಕ್ರಮ್ ಬಾತ್ರಾ ಲವ್ ಸ್ಟೋರಿ ಕೇಳಿದ್ರೆ ಕಳೆದೇ ಹೋಗ್ತೀರ!
ವಿಕ್ರಮ್ ಬಾತ್ರಾ
Follow us
ಸುಷ್ಮಾ ಚಕ್ರೆ
|

Updated on:Aug 31, 2021 | 7:10 PM

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ವೀರ ಮರಣವನ್ನಪ್ಪಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ (Vikram Batra) ಕುರಿತು ಬಾಲಿವುಡ್​ನಲ್ಲಿ ಶೇರ್​ಷಾ (shershaah) ಎಂಬ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಈ ವಾರ ತೆರೆಕಂಡಿದೆ. ಈಗಾಗಲೇ ಆ ಸಿನಿಮಾಗೆ ಬಹಳ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು,  ಸಿದ್ಧಾರ್ಥ್ ಮಲ್ಹೋತ್ರಾ ವಿಕ್ರಮ್ ಬಾತ್ರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ  ಕಿಯಾರಾ ಅದ್ವಾನಿ ಅಭಿನಯಿಸಿರುವ ಆ ಸಿನಿಮಾದಲ್ಲಿ ಕಾರ್ಗಿಲ್​ನ ದೃಶ್ಯಗಳಷ್ಟೇ ಅವರಿಬ್ಬರ ರೊಮ್ಯಾಂಟಿಕ್ ದೃಶ್ಯಗಳು ಕೂಡ ಅನೇಕ ಜನರನ್ನು ಆಕರ್ಷಿಸುತ್ತಿದೆ. ಮರಣೋತ್ತರವಾಗಿ ನೀಡಲಾಗುವ ಭಾರತದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನು ಪಡೆದಿರುವ ವಿಕ್ರಮ್ ಬಾತ್ರಾ ಸಾಹಸದ ಕುರಿತ ಸಿನಿಮಾದಲ್ಲಿ ಲವ್ ಸ್ಟೋರಿಯೇ ಜಾಸ್ತಿ ಇದೆ ಎಂಬ ಆಕ್ಷೇಪವೂ ಕೇಳಿಬಂದಿದೆ. ಆದರೆ, ವಿಕ್ರಮ್ ಬಾತ್ರಾ ಅವರ ಲವ್ ಸ್ಟೋರಿ ಯಾವ ಸಿನಿಮಾ ಕತೆಗೂ ಕಡಿಮೆಯೇನಿಲ್ಲ. 22 ವರ್ಷಗಳ ಹಿಂದೆ ಯುದ್ಧದಲ್ಲಿ ಹುತಾತ್ಮರಾದ ವಿಕ್ರಮ್ ಬಾತ್ರಾ ನೆನಪಿನಲ್ಲೇ ಆತನ ಪ್ರೇಯಸಿ ಡಿಂಪಲ್ ಚೀಮಾ (Dimple Cheema) ಇನ್ನೂ ಜೀವನ ಸಾಗಿಸುತ್ತಿದ್ದಾರೆ!

ನಮಗೆಲ್ಲ ಈ ದೇಶಕ್ಕಾಗಿ ವಿಕ್ರಮ್ ಬಾತ್ರಾ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಕತೆ ಮಾತ್ರ ಗೊತ್ತು. ಆದರೆ, ಆತನ ನಿಜಜೀವನದ ಪ್ರೇಯಸಿ ಆತನಿಗಾಗಿ ತನ್ನ ಜೀವನವನ್ನೇ ತ್ಯಾಗ ಮಾಡಿದ್ದಾಳೆಂಬ ಸಂಗತಿ ಎಷ್ಟು ಜನರಿಗೆ ಗೊತ್ತು? ಪಂಜಾಬ್ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಎಂಎ ಓದುತ್ತಿದ್ದ ವಿಕ್ರಮ್​ಗೆ ಪರಿಚಯವಾಗಿದ್ದಳು ಆ ಚೆಲುವೆ ಡಿಂಪಲ್ ಚೀಮಾ. ಎಲ್ಲ ಪ್ರೇಮಿಗಳಂತೆ ಮೊದಲು ಸ್ನೇಹಿತರಾದ ಅವರಿಬ್ಬರು ನಂತರ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡರು. ಇಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದರು.

ಅಷ್ಟರಲ್ಲೇ ಎಂಎ ಮುಗಿದ ಬಳಿಕ ವಿಕ್ರಮ್ ಬಾತ್ರಾ ಸೇನೆಗೆ ಸೇರಿದರು. ಈ ನಡುವೆ ಊರಿಗೆ ಬಂದಾಗಲೆಲ್ಲ ತನ್ನ ಪ್ರೇಯಸಿಗೆ ಸಿಗುತ್ತಿದ್ದರು. ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಮನೆಯಲ್ಲೂ ತಿಳಿಸಿದ್ದ ವಿಕ್ರಮ್ ‘ನನಗೆ ಯಾರೂ ಹುಡುಗಿಯನ್ನು ಹುಡುಕುವ ಅಗತ್ಯವಿಲ್ಲ. ನಾನು ಮದುವೆಯಾದರೆ ಆಕೆಯನ್ನೂ ಆಗುವುದು’ ಎಂದು ಹೇಳಿದ್ದರು. ಮಗ ತೋರಿಸಿದ್ದ ಡಿಂಪಲ್ ಚೀಮಾಳ ಫೋಟೋವನ್ನು ನೋಡಿ ಆತನ ಅಪ್ಪ-ಅಮ್ಮ ಕೂಡ ಖುಷಿ ಪಟ್ಟಿದ್ದರು. ಆ ವರ್ಷ ಆತನ ರಜೆಗೆ ಊರಿಗೆ ಬಂದಾಗ ಅವರಿಬ್ಬರ ಮದುವೆ ಮಾಡಿ ಮುಗಿಸಬೇಕೆಂಬುದು ಅವರ ಆಸೆಯಾಗಿತ್ತು.

ಆದರೆ, ಆ ಆಸೆ ಕೊನೆಯವರೆಗೂ ಆಸೆಯಾಗಿಯೇ ಉಳಿಯಿತು. ಕಾರ್ಗಿಲ್ ಯುದ್ಧ ಮುಗಿದ ನಂತರ ಊರಿಗೆ ಬರುವುದಾಗಿ ತಿಳಿಸಿದ್ದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಊರಿಗೆ ಬಂದಿದ್ದು ಶವವಾಗಿ. ಮಗನನ್ನು ಮದುಮಗನ ವೇಷದಲ್ಲಿ ನೋಡಬೇಕೆಂದುಕೊಂಡಿದ್ದ ಆತನ ಪೋಷಕರು ಭಾರತದ ಧ್ವಜದಲ್ಲಿ ಸುತ್ತಿಟ್ಟಿದ್ದ ಆತನ ಶವವನ್ನು ನೋಡಬೇಕಾಯಿತು. ತನ್ನ 25ನೇ ವರ್ಷಕ್ಕೆ ವಿಕ್ರಮ್ ಬಾತ್ರಾ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು.

ಆ ದಿನ ತನ್ನ ಪ್ರೀತಿಯ ಹುಡುಗನನ್ನು ಕೊನೆಯ ಭಾರಿ ಕಣ್ತುಂಬಿಕೊಳ್ಳಲು ಬಂದಳು ಡಿಂಪಲ್ ಚೀಮಾ. ಅದೇ ಮೊದಲ ಬಾರಿಗೆ ಆಕೆ ವಿಕ್ರಮ್ ಬಾತ್ರಾನ ಮನೆಯವರನ್ನು ನೋಡಿದ್ದು. ಆಕೆಯನ್ನು ಫೋಟೋದಲ್ಲಷ್ಟೇ ನೋಡಿದ್ದ ವಿಕ್ರಮ್​ನ ಪೋಷಕರು ತಮ್ಮ ಭಾವಿ ಸೊಸೆಯನ್ನು ಈ ರೀತಿಯ ಸಂದರ್ಭದಲ್ಲಿ ನೋಡಬೇಕಾಯಿತಲ್ಲ ಎಂದು ಇನ್ನಷ್ಟು ಕುಸಿದುಹೋದರು. ಆದರೆ, ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಶವದ ಪಕ್ಕದಲ್ಲಿ ನಿಂತ ಡಿಂಪಲ್ ‘ನಾನು ಇನ್ಯಾರನ್ನೂ ಮದುವೆಯಾಗುವುದಿಲ್ಲ. ನನ್ನ ಕೊನೆಯ ಉಸಿರಿರುವವರೆಗೂ ವಿಕ್ರಮ್ ನೆನಪಿನಲ್ಲೇ ಇರುತ್ತೇನೆ’ ಎಂದಿದ್ದಳು. ಆಕೆಯ ಮಾತು ಕೇಳಿ ಅಲ್ಲಿದ್ದವರೆಲ್ಲರೂ ಶಾಕ್ ಆಗಿದ್ದರು.

ಕೇವಲ 22 ವರ್ಷ ವಯಸ್ಸಿನ ಡಿಂಪಲ್ ಚೀಮಾಳ ನಿರ್ಧಾರ ಸುಲಭದ್ದಾಗಿರಲಿಲ್ಲ. ಅಷ್ಟು ಚಿಕ್ಕ ವಯಸ್ಸಿನಲ್ಲಿ, ಅದೂ ತನ್ನ ಪ್ರೇಮಿಯ ಶವದ ಮುಂದೆ ನಾನಿನ್ನು ಮದುವೆಯಾಗದೆ ಇಡೀ ಜೀವನ ಕಳೆಯುತ್ತೇನೆಂಬ ಆಕೆಯ ಮಾತು ಕೇಳಿ ಆಕೆಯ ತಂದೆ-ತಾಯಿ, ವಿಕ್ರಮ್​ನ ತಂದೆ-ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದರು. ಅದೆಲ್ಲ ಆಗಿ 22 ವರ್ಷಗಳೇ ಕಳೆದಿವೆ. ವಿಕ್ರಮ್​ನ ಪ್ರೇಯಸಿಯಾಗಿದ್ದ ಡಿಂಪಲ್ ಚೀಮಾಳಿಗೆ ಈಗ 44 ವರ್ಷ. ಆ ದಿನ ಆಕೆ ಕೊಟ್ಟ ಮಾತಿನಂತೆ ಅವಳು ಇನ್ನೂ ಮದುವೆಯಾಗದೆ ಉಳಿದಿದ್ದಾಳೆ.

ಕಾರ್ಗಿಲ್​ಗೆ ತೆರಳುವ ಮುನ್ನ ಡಿಂಪಲ್ ಚೀಮಾಳೊಂದಿಗೆ ಮಾನಸ ದೇವಿಯ ದೇವಸ್ಥಾನಕ್ಕೆ ಹೋಗಿದ್ದ ವಿಕ್ರಮ್ ಬಾತ್ರಾ ಅಲ್ಲಿ ತನ್ನ ಬೆರಳನ್ನೇ ಕೊಯ್ದುಕೊಂಡು, ತನ್ನ ರಕ್ತದಲ್ಲಿ ಆಕೆಯ ಬೈತಲೆಗೆ ರಕ್ತದ ಸಿಂಧೂರ ಇಟ್ಟಿದ್ದರಂತೆ. ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವ ಡಿಂಪಲ್ ಚೀಮಾ, ‘ಅದು ನನ್ನ ಜೀವನದ ಮರೆಯಲಾಗದ ಘಟನೆ. ಆತನ ಜೊತೆ ನನ್ನ ಮದುವೆ ಎಂದೋ ಆಗಿಹೋಗಿದೆ. ಇನ್ನು ಯಾರೂ ನನ್ನ ಬದುಕಿನಲ್ಲಿ ಬರಲು ಸಾಧ್ಯವಿಲ್ಲ’ ಎಂದಿದ್ದಾರೆ.

‘ನನ್ನ ಮಗನ ನೆನಪಿನಲ್ಲಿ ಜೀವನ ಸಾಗಿಸುತ್ತೇನೆ ಎಂಬುದು ನಿನ್ನ ದೊಡ್ಡ ಮಾತು. ಆದರೆ, ಅದು ನಮಗೆ ಇಷ್ಟವಿಲ್ಲ. ನೀನು ಬೇರೆ ಮದುವೆಯಾಗಲೇಬೇಕು’ ಎಂದು ಖುದ್ದಾಗಿ ವಿಕ್ರಮ್ ಬಾತ್ರಾ ಅವರ ತಂದೆ ಜಿಎಲ್ ಬಾತ್ರಾ ಆಕೆಯ ಬಳಿ ಮನವಿ ಮಾಡಿಕೊಂಡರೂ ಆಕೆ ಒಪ್ಪಲಿಲ್ಲ. ‘ನನ್ನ ಇಡೀ ಜೀವನವನ್ನು ವಿಕ್ರಮ್ ಜೊತೆಯಲ್ಲೇ ಕಳೆಯಬೇಕೆಂದು ನಾನು ನಿರ್ಧಾರ ಮಾಡಿಕೊಂಡಿದ್ದೆ. ಈಗ ಆತ ಬದುಕಿಲ್ಲದಿದ್ದರೂ ಆತನ ನೆನಪುಗಳೊಂದಿಗೆ ನಾನು ಬದುಕಬಲ್ಲೆ’ ಎಂದು ಆಕೆ ಬಾತ್ರಾ ಅವರನ್ನು ವಾಪಾಸ್ ಕಳುಹಿಸಿದ್ದಳು.

ಈ ವಿಷಯವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದ ಜಿ.ಎಲ್. ಬಾತ್ರಾ, ‘ನನ್ನ ಮಗ ಮತ್ತು ಆಕೆಯದ್ದು ಪವಿತ್ರವಾದ ಪ್ರೀತಿಯಾಗಿತ್ತು. ಅಂತಹ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ಆಕೆಯೊಂದಿಗೆ ಬದುಕುವ ಅದೃಷ್ಟ ನನ್ನ ಮಗನಿಗೆ ಇರಲಿಲ್ಲ’ ಎಂದು ಹೇಳಿದ್ದರು. ತಮ್ಮ ಸಾಹಸಮಯ ವ್ಯಕ್ತಿತ್ವದಿಂದ ಹೇಗೆ ವಿಕ್ರಮ್ ಬಾತ್ರಾ ಇಂದಿಗೂ ಎಲ್ಲರ ಮನಸಿನಲ್ಲಿ ಉಳಿದಿದ್ದಾರೋ ಅದೇ ರೀತಿ ಅವರ ಪ್ರೇಮಕತೆಯೂ ಅನೇಕರಿಗೆ ಸ್ಫೂರ್ತಿಯಾಗುವಂಥದು. ನೀವಿನ್ನೂ ಈ ಸಿನಿಮಾ ನೋಡದಿದ್ದರೆ ಅಮೇಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ: Happy Birthday MS Dhoni: ನಿಮಗೆ ಗೊತ್ತಿರದ ಎಂಎಸ್ ಧೋನಿ ‘ಸಾಕ್ಷಿ’ಯ ಹೃದಯ ಸ್ಪರ್ಶ ಪ್ರೇಮಕಥೆ

(Captain Vikram Batra’s Lover Dimple Cheema refused to marry after his Death This Love Story will Make you Speechless)

Published On - 6:23 pm, Thu, 29 July 21

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್