Happy Birthday MS Dhoni: ನಿಮಗೆ ಗೊತ್ತಿರದ ಎಂಎಸ್ ಧೋನಿ ‘ಸಾಕ್ಷಿ’ಯ ಹೃದಯ ಸ್ಪರ್ಶ ಪ್ರೇಮಕಥೆ

Dhoni Sakshi Love Story: ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ, ಸಾಕ್ಷಿ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ಯಾವ ಬಾಲಿವುಡ್ ಸಿನಿಮಾಗೂ ಕಡಿಮೆಯಿಲ್ಲ. ಎಂಎಸ್ ಧೋನಿ ಮತ್ತು ಅವರ ಪತ್ನಿ ಇಬ್ಬರಿಗೂ ಮೊದಲೇ ಪರಿಚಯವಿತ್ತು.

Happy Birthday MS Dhoni: ನಿಮಗೆ ಗೊತ್ತಿರದ ಎಂಎಸ್ ಧೋನಿ ‘ಸಾಕ್ಷಿ’ಯ ಹೃದಯ ಸ್ಪರ್ಶ ಪ್ರೇಮಕಥೆ
ಎಂಎಸ್ ಧೋನಿ ಮತ್ತು ಸಾಕ್ಷಿ
Follow us
TV9 Web
| Updated By: sandhya thejappa

Updated on: Jul 07, 2021 | 5:15 PM

ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್​ನ ಅತ್ಯುತ್ತಮ ನಾಯಕರಲ್ಲಿ ಒಬ್ಬರು. ಭಾರತೀಯ ಕ್ರಿಕೆಟ್​ಗೆ ಅವರು ನೀಡಿದ ಕೊಡುಗೆ ಗಮನಾರ್ಹವಾಗಿದೆ. ಕ್ರಿಕೆಟ್​ನಲ್ಲಿ ಸಾಧನೆಗೈದ ಮಹೇಂದ್ರ ಸಿಂಗ್ ಧೋನಿ ಬಗ್ಗೆ ನಿಮಗೆ ಗೊತ್ತೆಯಿದೆ. ಆದರೆ ಅದೆಷ್ಟೋ ಜನರಿಗೆ ಧೋನಿ ಕುಟುಂಬದ ಬಗ್ಗೆ ಇನ್ನು ತಿಳಿದಿಲ್ಲ. ಯಶಸ್ವಿ ನಾಯಕ ಪ್ರೀತಿಸಿ ಮದುವೆಯಾಗಿದ್ದಾರೆ. ಈ ಬಗ್ಗೆ ಸುಶಾಂತ್ ಸಿಂಗ್ ರಜಪೂತ್ ನಟಿಸಿದ ಚಿತ್ರ ‘ಎಂಎಸ್ ಧೋನಿ- ದಿ ಅನ್ ಟೋಲ್ಡ್ ಸ್ಟೋರಿಯಲ್ಲಿಯೂ ಪ್ರಸ್ತಾಪವಾಗಿದೆ.

ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ, ಸಾಕ್ಷಿ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ಯಾವ ಬಾಲಿವುಡ್ ಸಿನಿಮಾಗೂ ಕಡಿಮೆಯಿಲ್ಲ. ಎಂಎಸ್ ಧೋನಿ ಮತ್ತು ಅವರ ಪತ್ನಿ ಇಬ್ಬರಿಗೂ ಮೊದಲೇ ಪರಿಚಯವಿತ್ತು. ಕಾರಣ ಅವರ ತಂದೆ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಂಚಿಯ ಶಾಲೆಯೊಂದರಲ್ಲಿ ಧೋನಿ ಮತ್ತು ಸಾಕ್ಷಿ ಓದಿದ್ದರು. ಆದರೆ ಕೆಲವು ವರ್ಷಗಳ ನಂತರ ಸಾಕ್ಷಿ ತನ್ನ ಕುಟುಂಬದೊಂದಿಗೆ ದೆಹ್ರಾದೂನ್​ಗೆ ತೆರಳಿದರು. ಹೀಗಾಗಿ ಇಬ್ಬರ ನಡುವೆ ಸಂಪರ್ಕ ಇರಲಿಲ್ಲ.

10 ವರ್ಷಗಳ ನಂತರ ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ಟೀಮ್ ಇಂಡಿಯಾದ ನಾಯಕನಾಗಿದ್ದ ಧೋನಿ ಸಾಕ್ಷಿಯನ್ನು ನೋಡುತ್ತಾರೆ. ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿನಿಯಾಗಿದ್ದ ಸಾಕ್ಷಿ ಅಲ್ಲಿ ಕೆಲಸಮಾಡುತ್ತಿದ್ದರು. ಮೊದಲ ಬಾರಿ ಸಾಕ್ಷಿಯನ್ನು ನೋಡಿದ ಧೋನಿಗೆ ಇಷ್ಟವಾಯಿತು. ನಂತರ ಧೋನಿ ಹೋಟೆಲ್ ಮ್ಯಾನೇಜರ್​ನಿಂದ ಸಾಕ್ಷಿಯ ನಂಬರ್ ಪಡೆದು ಸಂಪರ್ಕಿಸುತ್ತಾರೆ.

ಧೋನಿ ನಿಧಾನವಾಗಿ ತನ್ನ ಪ್ರೀತಿ ವಿಚಾರವನ್ನು ಸಾಕ್ಷಿಗೆ ತಿಳಿಸಲು ಮುಂದಾದರು. ನಂತರ 2008ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದ ಇವರು 2010 ಜುಲೈ 4ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಮದುವೆಗೆ ಕ್ರಿಕೆಟ್ ಆಟಗಾರರು, ರಾಜಕಾರಣಿಗಳು ಮತ್ತು ಚಲನಚಿತ್ರ ನಟ-ನಟಿಯರು ಸಾಕ್ಷಿಯಾಗಿದ್ದರು. 2015 ಫೆಬ್ರವರಿ 6 ರಂದು ಈ ದಂಪತಿಗೆ ಮುದ್ದಾದ ಹೆಣ್ಣು ಮಗು ಜನಿಸಿತು.

ಇದನ್ನೂ ಓದಿ

MS Dhoni Birthday: ಎಂ.ಎಸ್. ಧೋನಿ ಜನ್ಮದಿನ ವಿಶೇಷ .. ನಾಯಕನಾಗಿ ಮಹೀ ಸೃಷ್ಟಿಸಿದ ಐದು ಶ್ರೇಷ್ಠ ದಾಖಲೆಗಳಿವು

MS Dhoni Birthday: ಎಂ.ಎಸ್. ಧೋನಿ ಜನ್ಮದಿನ ವಿಶೇಷ .. ನಾಯಕನಾಗಿ ಮಹೀ ಸೃಷ್ಟಿಸಿದ ಐದು ಶ್ರೇಷ್ಠ ದಾಖಲೆಗಳಿವು

(Ms dhoni Birthday here is the interesting love story of MSD and Sakshi Singh Dhoni)