ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಂಪತಿಗೆ ಶಾಕ್​; ದೊಡ್ಡ ಮೊತ್ತದ ದಂಡ ವಿಧಿಸಿದ ಸೆಬಿ

TV9 Digital Desk

| Edited By: Rajesh Duggumane

Updated on: Jul 29, 2021 | 5:26 PM

ವಿಯಾನ್​ ಇಂಡಸ್ಟ್ರೀಸ್​ ಕಂಪೆನಿಯನ್ನು ರಾಜ್​ ಕುಂದ್ರಾ ಹೊಂದಿದ್ದಾರೆ. ಶಿಲ್ಪಾ ಶೆಟ್ಟಿ ಈ ಕಂಪನಿಯ ನಿರ್ದೇಶಕಿಯಾಗಿದ್ದರು. ಕಳೆದ ವರ್ಷ ಈ ಹುದ್ದೆಗೆ ಶಿಲ್ಪಾ ರಾಜೀನಾಮೆ ನೀಡಿದ್ದರು.

ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಂಪತಿಗೆ ಶಾಕ್​; ದೊಡ್ಡ ಮೊತ್ತದ ದಂಡ ವಿಧಿಸಿದ ಸೆಬಿ
ಶಿಲ್ಪಾ ಶೆಟ್ಟಿ-ರಾಜ್​ ಕುಂದ್ರಾ ದಂಪತಿಗೆ ಶಾಕ್​; ದೊಡ್ಡ ಮೊತ್ತದ ದಂಡ ವಿಧಿಸಿದ ಸೆಬಿ
Follow us

ರಾಜ್​ ಕುಂದ್ರಾ ಅವರ ಅಶ್ಲೀಲ ಸಿನಿಮಾ ದಂಧೆ ಪ್ರಕರಣ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ನಿತ್ಯ ಹೊಸಹೊಸ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಈ ಮಧ್ಯೆ ಭಾರತದ ಭದ್ರತೆ ಮತ್ತು ವಿನಿಮಯ ಮಂಡಳಿ (SEBI) ರಾಜ್​ ಕುಂದ್ರಾ-ಶಿಲ್ಪಾ ದಂಪತಿಗೆ ಸೇರಿದ ಕಂಪೆನಿಯಿಂದ ಆದ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ 3 ಲಕ್ಷ ರೂಪಾಯಿ ದಂಡ ವಿಧಿಸಿದೆ.

ವಿಯಾನ್​ ಇಂಡಸ್ಟ್ರೀಸ್​ ಕಂಪೆನಿಯನ್ನು ರಾಜ್​ ಕುಂದ್ರಾ ಹೊಂದಿದ್ದಾರೆ. ಶಿಲ್ಪಾ ಶೆಟ್ಟಿ ಈ ಕಂಪನಿಯ ನಿರ್ದೇಶಕಿಯಾಗಿದ್ದರು. ಕಳೆದ ವರ್ಷ ಈ ಹುದ್ದೆಗೆ ಶಿಲ್ಪಾ ರಾಜೀನಾಮೆ ನೀಡಿದ್ದರು. 2013ರ ಸೆಪ್ಟೆಂಬರ್ 1  ಮತ್ತು ಡಿಸೆಂಬರ್ 2015ರ ಡಿಸೆಂಬರ್ 23ರ ಮಧ್ಯೆ ನಡೆದ ಈ ಕಂಪೆನಿಯ ವ್ಯವಹಾರಗಳ ಬಗ್ಗೆ ಸೆಬಿ ತನಿಖೆ ನಡೆಸಿದೆ. ಈ ಕಂಪೆನಿಯ ಷೇರುಗಳು ಬಾಂಬೆ ಷೇರು ಮಾರುಕಟ್ಟೆಯಲ್ಲಿ (ಬಿಎಸ್​ಇ) ಲಿಸ್ಟ್ ಆಗಿದೆ. ರಿಪು ಸೂದನ್ ಅಲಿಯಾಸ್​ ರಾಜ್​ ಕುಂದ್ರಾ​, ಶಿಲ್ಪಾ ಕುಂದ್ರಾ ಅಲಿಯಾಸ್​ ಶಿಲ್ಪಾ ಶೆಟ್ಟಿ ಈ ಕಂಪೆನಿಯ ಪ್ರಮೋಟರ್​ಗಳಾಗಿದ್ದಾರೆ.

ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಪ್ರಕರಣದಲ್ಲಿ ಮುಂಬೈ ಪೊಲೀಸ್​ ಅಪರಾಧ ವಿಭಾಗವು ಪ್ರತಿದಿನ ಹೊಸಹೊಸ ವಿಚಾರವನ್ನು ಪತ್ತೆ ಮಾಡುತ್ತಿದೆ. ರಾಜ್ ಕುಂದ್ರಾ ಅವರ ಈ ಅಶ್ಲೀಲ ದಂಧೆ ಪ್ರಕರಣಕ್ಕೂ ಉತ್ತರ ಪ್ರದೇಶದ ಕಾನ್ಪುರಕ್ಕೂ ನಂಟು ಸಿಕ್ಕಿದೆ. ಕಾನ್ಪುರ್ ಮಹಿಳೆಯ ಖಾತೆಗೆ ರಾಜ್ ​ಕುಂದ್ರಾ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಹರ್ಷಿತಾ ಶ್ರೀವಾಸ್ತವ ಎಂಬ ಮಹಿಳೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಈ ಖಾತೆಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಖಾತೆಯಲ್ಲಿ ಸುಮಾರು 2,32,45,222 ರೂಪಾಯಿ ಇತ್ತು. ಹಾಟ್ ಶಾಟ್ಸ್​​ ವಾಟ್ಸಾಪ್ ಗ್ರೂಪ್‌ನಲ್ಲಿ ಅರವಿಂದ್ ಕುಮಾರ್ ಶ್ರೀವಾಸ್ತವ ಹೆಸರಿನ ವ್ಯಕ್ತಿ ಇದ್ದಾರೆ. ಈ ಅರವಿಂದ್ ಅವರ ಪತ್ನಿ ಹರ್ಷಿತಾ. ಅರವಿಂದ್ ಕೋಟ್ಯಂತರ ರೂಪಾಯಿಗಳನ್ನು ಹರ್ಷಿತಾಗೆ ಮಾತ್ರವಲ್ಲ, ತಂದೆ ನರ್ವದ ಶ್ರೀವಾಸ್ತವ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಿದ್ದರು. ಆದರೆ, ಪಾರ್ನ್​ ದಂಧೆಯಿಂದ ಗಳಿಸಿದ ಹಣವನ್ನು ಅರವಿಂದ್ ತನ್ನ ಕುಟುಂಬದ ಖಾತೆಗೆ ಏಕೆ ಕಳುಹಿಸುತ್ತಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ರಾಜ್​ ಕುಂದ್ರಾ ಕಾಮಕ್ಕೆ ಹೆದರಿ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟಿ; ಪೊಲೀಸ್​ ದೂರಿನಲ್ಲಿ ರಹಸ್ಯ ಬಹಿರಂಗ

ತಾಜಾ ಸುದ್ದಿ

Click on your DTH Provider to Add TV9 Kannada