ರಾಜ್​ ಕುಂದ್ರಾ ಕಾಮಕ್ಕೆ ಹೆದರಿ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟಿ; ಪೊಲೀಸ್​ ದೂರಿನಲ್ಲಿ ರಹಸ್ಯ ಬಹಿರಂಗ

Sherlyn Chopra: ರಾಜ್ ಕುಂದ್ರಾ ಬಳಿ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ನಟಿ  ಶೆರ್ಲಿನ್​ ಚೋಪ್ರಾ ಅವರಿಗೂ ಬಂಧನದ ಭಯ ಕಾಡುತ್ತಿದೆ. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

ರಾಜ್​ ಕುಂದ್ರಾ ಕಾಮಕ್ಕೆ ಹೆದರಿ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟಿ; ಪೊಲೀಸ್​ ದೂರಿನಲ್ಲಿ ರಹಸ್ಯ ಬಹಿರಂಗ
ರಾಜ್​ ಕುಂದ್ರಾ- ಶೆರ್ಲಿನ್​ ಚೋಪ್ರಾ
Follow us
TV9 Web
| Updated By: Digi Tech Desk

Updated on:Jul 29, 2021 | 1:02 PM

ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ (Raj Kundra) ಮಾಡಿಕೊಂಡಿರುವ ಹಗರಣಗಳು ಒಂದೆರಡಲ್ಲ. ನೀಲಿ ಚಿತ್ರ ಕೇಸ್​ನಲ್ಲಿ ಪೊಲೀಸರ ಅತಿಥಿ ಆಗಿರುವ ಅವರ ಬಗ್ಗೆ ದಿನಕ್ಕೊಂದು ಹೊಸಹೊಸ ಶಾಕಿಂಗ್​ ಸತ್ಯಗಳು ಹೊರಬೀಳುತ್ತಿವೆ.​ ಸದ್ಯ ಜಾಮೀನು ಪಡೆಯುವಲ್ಲಿ ಅವರಿಗೆ ಹಿನ್ನಡೆ ಆಗಿದೆ. 14 ದಿನಗಳ ಕಾಲ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲು ನ್ಯಾಯಾಲಯ ಆದೇಶಿಸಿದೆ. ಇದರ ಬೆನ್ನಲ್ಲೇ ನಟಿ ಶೆರ್ಲಿನ್​ ಚೋಪ್ರಾ (Sherlyn Chopra)  ಅವರು ರಾಜ್​ ಕುಂದ್ರಾ ಬಗ್ಗೆ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶಿಲ್ಪಾ ಶೆಟ್ಟಿಗೆ ಆಘಾತ ಮೂಡಿಸುವಂತಹ ಕೆಲವು ಮಾಹಿತಿಯನ್ನು ಶೆರ್ಲಿನ್​ ಚೋಪ್ರಾ ಬಹಿರಂಗಪಡಿಸಿದ್ದಾರೆ. 

ಏಪ್ರಿಲ್​ನಲ್ಲಿಯೇ ರಾಜ್​ ಕುಂದ್ರಾ ವಿರುದ್ಧ ಶೆರ್ಲಿನ್​ ಚೋಪ್ರಾ ದೂರು ನೀಡಿದ್ದರು. ಆ ದೂರಿನಲ್ಲಿ ರಾಜ್​ ಕುಂದ್ರಾ ಬಗ್ಗೆ ಹಲವು ಆರೋಪಗಳನ್ನು ಮಾಡಲಾಗಿದೆ. ‘2019ರ ಆರಂಭದಲ್ಲಿಯೇ ಒಂದು ಆ್ಯಪ್​ ಬ್ಯುಸಿನೆಸ್​ಗಾಗಿ ರಾಜ್​ ಕುಂದ್ರಾ ಅವರು ನನ್ನನ್ನು ಕರೆದಿದ್ದರು. ಮೀಟಿಂಗ್​ ಮುಗಿದ ಬಳಿಕ ಅವರು ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದರು. ಇದರಿಂದ ನಮ್ಮ ನಡುವೆ ಜಗಳ ಶುರುವಾಯಿತು’ ಎಂದು ದೂರಿನಲ್ಲಿ ಶೆರ್ಲಿನ್​ ಚೋಪ್ರಾ ತಿಳಿಸಿದ್ದಾರೆ.

‘ನಾನು ಬೇಡ ಎಂದು ವಿರೋಧಿಸಿದರೂ ಕೂಡ ರಾಜ್​ ಕುಂದ್ರಾ ಬಲವಂತವಾಗಿ ಕಿಸ್​ ಮಾಡಲು ಬಂದರು. ನನಗೆ ಭಯವಾಯಿತು. ಇದನ್ನೆಲ್ಲ ನಿಲ್ಲಿಸುವಂತೆ ಕೇಳಿಕೊಂಡೆ. ನಂತರ ಅವರನ್ನು ತಳ್ಳಿ ಎಸ್ಕೇಪ್​ ಆದೆ. ಶೌಚಾಲಯಕ್ಕೆ ತೆರಳಿ ಅಡಗಿಕೊಂಡೆ’ ಎಂದು ಶೆರ್ಲಿನ್​ ಚೋಪ್ರಾ ಹೇಳಿದ್ದಾರೆ. ‘ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿಯಿಲ್ಲ. ಹಾಗಾಗಿ ನಾನು ಸದಾ ಒತ್ತಡದಲ್ಲಿ ಇರುತ್ತೇನೆ’ ಎಂದು ಶರ್ಲಿನ್​​ ಬಳಿ ರಾಜ್​ ಕುಂದ್ರಾ ಹೇಳಿಕೊಂಡಿದ್ದರು ಎಂಬ ಸುದ್ದಿ ಈಗ ಬಹಿರಂಗ ಆಗಿದೆ.

ರಾಜ್ ಕುಂದ್ರಾ ಜೊತೆ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ಶೆರ್ಲಿನ್​ ಚೋಪ್ರಾ ಅವರಿಗೂ ಬಂಧನದ ಭಯ ಕಾಡುತ್ತಿದೆ. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ರಾಜ್​ ಕುಂದ್ರಾ ಅವರ ಬಗ್ಗೆ ಮೊದಲು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದು ತಾವೇ ಎಂದು ಶೆರ್ಲಿನ್​ ಚೋಪ್ರಾ ಹೇಳುತ್ತಿದ್ದಾರೆ. ಹಲವು ಆಯಾಮಗಳಿಂದ ತನಿಖೆ ಮುಂದುವರಿದಿದ್ದು, ಅನೇಕ ನಟಿಯರ ಹೆಸರುಗಳು ಹೊರಬರುತ್ತಿವೆ. ಶಿಲ್ಪಾ ಶೆಟ್ಟಿಗೆ ಪೊಲೀಸರು ಇನ್ನೂ ಕ್ಲೀನ್ ಚಿಟ್ ಕೊಟ್ಟಿಲ್ಲ ಎಂಬ ಮಾಹಿತಿ ಕೂಡ ಕೇಳಿಬಂದಿದೆ.

ಇದನ್ನೂ ಓದಿ:

ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಕನ್ನಡ ಸಿನಿಮಾ ನಟಿ ಹೆಸರು ಪ್ರಸ್ತಾಪ; ಅಸಲಿಯತ್ತು ಏನು?

Breaking News: ಅಶ್ಲೀಲ ಸಿನಿಮಾ ಕೇಸ್​: ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ

Published On - 12:12 pm, Thu, 29 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ