ನಿತ್ಯ ಒಂದೇ ಕಾರಲ್ಲಿ ಎರಡು ಗಂಟೆ ಪ್ರಯಾಣ ಮಾಡುತ್ತಿದ್ದಾರೆ ಆಮಿರ್-ನಾಗಚೈತನ್ಯ

TV9 Digital Desk

| Edited By: TV9 SEO

Updated on:Jul 29, 2021 | 9:17 AM

Aamir Khan - Naga Chaitanya: ಕಾರ್ಗಿಲ್​ ಭಾಗದಲ್ಲಿ ಪ್ರಮುಖ ದೃಶ್ಯಗಳ ಶೂಟಿಂಗ್​ ನಡೆಯುತ್ತಿದೆ. ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಬೇಕಿತ್ತು. ಅವರ ಬದಲಿಗೆ ನಾಗ ಚೈತನ್ಯ ಅವರು ಈಗ ಚಿತ್ರತಂಡ ಸೇರಿಕೊಂಡಿದ್ದಾರೆ.

ನಿತ್ಯ ಒಂದೇ ಕಾರಲ್ಲಿ ಎರಡು ಗಂಟೆ ಪ್ರಯಾಣ ಮಾಡುತ್ತಿದ್ದಾರೆ ಆಮಿರ್-ನಾಗಚೈತನ್ಯ
ನಿತ್ಯ ಒಂದೇ ಕಾರಲ್ಲಿ ಎರಡು ಗಂಟೆ ಪ್ರಯಾಣ ಮಾಡುತ್ತಿದ್ದಾರೆ ಆಮಿರ್-ನಾಗಚೈತನ್ಯ

Aamir Khan – Naga Chaitanya: ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಕೆಲಸಗಳಲ್ಲಿ ಆಮಿರ್​ ಖಾನ್​ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್​ಗೆ ಈಗಾಗಲೇ ಸಾಕಷ್ಟು ವಿಘ್ನಗಳು ಎದುರಾಗಿವೆ. ಇದನ್ನೆಲ್ಲವೂ ಮೆಟ್ಟಿ ನಿಂತಿರುವ ಆಮಿರ್​ ಖಾನ್ ಈಗ ಮತ್ತೆ ಸಿನಿಮಾದ ಶೂಟಿಂಗ್​ ಆರಂಭಿಸಿದ್ದಾರೆ. ಇದಕ್ಕಾಗಿಯೇ ಅವರು ಕಾರ್ಗಿಲ್​ಗೆ ತೆರಳಿದ್ದಾರೆ. ಶೂಟಿಂಗ್​ ಬಗ್ಗೆ ಒಂದಷ್ಟು ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.

ಕಾರ್ಗಿಲ್​ ಭಾಗದಲ್ಲಿ ಪ್ರಮುಖ ದೃಶ್ಯಗಳ ಶೂಟಿಂಗ್​ ನಡೆಯುತ್ತಿದೆ. ವಿಜಯ್ ಸೇತುಪತಿ ಸಿನಿಮಾದಲ್ಲಿ ನಟಿಸಬೇಕಿತ್ತು. ಅವರ ಬದಲಿಗೆ ನಾಗ ಚೈತನ್ಯ ಅವರು ಈಗ ಚಿತ್ರತಂಡ ಸೇರಿಕೊಂಡಿದ್ದಾರೆ. ನಾಗ ಚೈತನ್ಯ ಕೂಡ ಸಿನಿಮಾ ಸೆಟ್​ ಸೇರಿಕೊಂಡಿದ್ದಾರೆ. 45 ದಿನಗಳ ಕಾಲ ಶೂಟಿಂಗ್​ ನಡೆಯಲಿದೆ. ಎಲ್ಲವನ್ನೂ ತುಂಬಾನೇ ಪರ್ಫೆಕ್ಟ್​ ಆಗಿ ಶೂಟ್​ ಮಾಡುವ ಆಲೋಚನೆ ಆಮಿರ್​ ಖಾನ್​ ಅವರದ್ದು.

ಸಿನಿಮಾ ಬಗ್ಗೆ ಸ್ಥಳೀಯ ಮಾಧ್ಯಮಗಳಲ್ಲಿ ಮಾತನಾಡಿರುವ ಆಮಿರ್​ ಖಾನ್​, ‘ಇಲ್ಲಿ ಶೂಟ್​ ಮಾಡೋಕೆ ನಿಜಕ್ಕೂ ಖುಷಿಯಾಗುತ್ತಿದೆ. ಹೋಟೆಲ್​ನಿಂದ ಸಿನಿಮಾ ಶೂಟಿಂಗ್​ ಸೆಟ್​ಗೆ ತೆರಳೋಕೆ ಒಂದು ಗಂಟೆ ಬೇಕು. ನಾನು ಹಾಗೂ ನಾಗ ಚೈತನ್ಯ ಒಂದೇ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಎರಡು ಗಂಟೆ ನಿತ್ಯ ನಾವು ಪ್ರಯಾಣದಲ್ಲೇ ಕಳೆಯುತ್ತಿದ್ದೇವೆ’ ಎಂದಿದ್ದಾರೆ ಆಮಿರ್.

ಹಾಲಿವುಡ್​ನ ‘ಫಾರೆಸ್ಟ್​ ಗಂಪ್​​’ ಸಿನಿಮಾದ ಹಿಂದಿ ರಿಮೇಕ್​ ಲಾಲ್​ ಸಿಂಗ್​ ಚಡ್ಡಾ. ಆಮಿರ್​ ಖಾನ್​ ಸಿನಿಮಾದಲ್ಲಿ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರೀನಾ ಕಪೂರ್​ ಚಿತ್ರದ ನಾಯಕಿ. 2021ರ ಡಿಸೆಂಬರ್ ಅಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ. ಆದರೆ, ಶೂಟಿಂಗ್​ ವಿಳಂಬವಾಗುತ್ತಿರುವುದರಿಂದ ಚಿತ್ರಕ್ಕೆ ಹಿನ್ನಡೆ ಉಂಟಾಗುತ್ತಿದೆ.

ಇತ್ತೀಚೆಗೆ ಆಮಿರ್​ ಖಾನ್​ ಹಾಗೂ ಕಿರಣ್​ ರಾವ್​ ವಿಚ್ಛೇದನ ಪಡೆದುಕೊಂಡಿದ್ದರ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದರು. ‘ಈ 15 ವರ್ಷಗಳ ಜೀವನವನ್ನು ನಾವು ಖುಷಿ ಮತ್ತು ಸಂತೋಷದಿಂದ ಕಳೆದಿದ್ದೇವೆ. ನಂಬಿಕೆ, ಪ್ರೀತಿ ಮತ್ತು ಗೌರವದಿಂದ ನಮ್ಮ ಸಂಬಂಧ ಬೆಳೆದಿತ್ತು. ಈಗ ನಾವು ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದೇವೆ. ಇನ್ಮುಂದೆ ನಾವು ಪತಿ-ಪತ್ನಿ ಅಲ್ಲ. ಆದರೆ ಅಜಾದ್​ನ ಪಾಲಕರಾಗಿ, ಆ ಮೂಲಕ ಕುಟುಂಬದವರಾಗಿ ಇರುತ್ತೇವೆ. ಬೇರೆಯಾಗುವ ಬಗ್ಗೆ ಕೆಲವು ಸಮಯದ ಹಿಂದೆಯೇ ಯೋಚಿಸಿದ್ದೆವು. ಮಗನನ್ನು ಜೊತೆಯಾಗಿ ಬೆಳೆಸುತ್ತೇವೆ’ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಇದನ್ನೂ ಓದಿ: ‘ನಾವು ಖುಷಿಯಾಗಿದ್ದೇವೆ, ನೀವು ಬೇಸರಗೊಳ್ಳಬೇಡಿ’; ವಿಡಿಯೋ ಮೂಲಕ ಫ್ಯಾನ್ಸ್​ಗೆ ಮನವಿ ಮಾಡಿದ ಆಮಿರ್​-ಕಿರಣ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada