AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ಸಿನಿಮಾ ದಂಧೆಗೆ ಹುಡುಗಿಯರನ್ನು ಹೇಗೆ ತಳ್ಳುತ್ತಿದ್ದರು? ಯುವತಿಯರನ್ನು ಬೆಚ್ಚಿ ಬೀಳಿಸುವ ವಿವರ ಇಲ್ಲಿದೆ

ರಾಜ್​ ಕುಂದ್ರಾ ಅವರ ಅಶ್ಲೀಲ ಸಿನಿಮಾ ಕೇಸ್​ನ ತನಿಖೆ ವೇಳೆ ನಟಿ ಗೆಹನಾ ವಸಿಷ್ಠ್​ ಮತ್ತು ರೋವಾ ಖಾನ್​ ಮೇಲೆ ಗಂಭೀರ ಆರೋಪಗಳು ಎದುರಾಗಿವೆ. ನೀಲಿ ಚಿತ್ರ ದಂಧೆಗೆ ಹುಡುಗಿಯರನ್ನು ಇವರಿಬ್ಬರು ಹೇಗೆ ನೂಕುತ್ತಿದ್ದರು ಎಂಬುದರ ಇಂಚಿಂಚೂ ವಿವರ ಈಗ ಆಚೆ ಬಂದಿದೆ.

ಅಶ್ಲೀಲ ಸಿನಿಮಾ ದಂಧೆಗೆ ಹುಡುಗಿಯರನ್ನು ಹೇಗೆ ತಳ್ಳುತ್ತಿದ್ದರು? ಯುವತಿಯರನ್ನು ಬೆಚ್ಚಿ ಬೀಳಿಸುವ ವಿವರ ಇಲ್ಲಿದೆ
ಗೆಹನಾ ವಸಿಷ್ಠ್​, ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ
Follow us
TV9 Web
| Updated By: ಮದನ್​ ಕುಮಾರ್​

Updated on: Jul 29, 2021 | 3:40 PM

ಅಶ್ಲೀಲ ಸಿನಿಮಾ ದಂಧೆಯಲ್ಲಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ಉದ್ಯಮಿ ರಾಜ್​ ಕುಂದ್ರಾ (Raj Kundra) ಸಿಕ್ಕಿಬಿದ್ದ ಬಳಿಕ ಹಲವು ರಹಸ್ಯಗಳು ಹೊರಬರುತ್ತಿವೆ. ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಹಾಗಾಗಿ ಆರೋಪಿಗಳ ಕುರಿತು ಶಾಕಿಂಗ್​ ಸತ್ಯಗಳು ಬಯಲಾಗುತ್ತಿವೆ. ನೀಲಿ ಚಿತ್ರ ದಂಧೆಯಲ್ಲಿ ಅನೇಕ ಅಮಾಯಕ ನಟಿಯರನ್ನು ಸಿಲುಕಿಸಲಾಗುತ್ತಿತ್ತು. ಯುವತಿಯರನ್ನು ಯಾಮಾರಿಸಲು ಕೆಲವು ತಂತ್ರಗಳನ್ನು ಬಳಸಲಾಗುತ್ತಿತ್ತು. ಇಂಥವರಿಂದ ಮೋಸಕ್ಕೆ ಒಳಗಾದ ಕೆಲವು ಸಂತ್ರಸ್ತ ಯುವತಿಯರು ಪೊಲೀಸರಿಗೆ ನೀಡಿದ ಮಾಹಿತಿ ಭಯಾನಕವಾಗಿದೆ. ತನಿಖೆ ವೇಳೆ ನಟಿ ಗೆಹನಾ ವಸಿಷ್ಠ್ (Gehana Vasisth)​​ ಮತ್ತು ರೋವಾ ಖಾನ್​ ಮೇಲೆ ಗಂಭೀರ ಆರೋಪಗಳು ಎದುರಾಗಿವೆ.

ನೀಲಿ ಚಿತ್ರ ದಂಧೆಗೆ ಹುಡುಗಿಯರನ್ನು ಗೆಹನಾ ವಸಿಷ್ಠ್​​ ಮತ್ತು ರೋವಾ ಖಾನ್ ಹೇಗೆ ನೂಕುತ್ತಿದ್ದರು ಎಂಬುದರ ಇಂಚಿಂಚೂ ವಿವರ ಈಗ ಆಚೆ ಬಂದಿದೆ. ‘ನನ್ನನ್ನು ಗ್ರೀನ್​ ಪಾರ್ಕ್​​ ಬಂಗಲೆಗೆ ಕರೆದುಕೊಂಡ ಹೋದರು. ಅಲ್ಲಿ ನನಗೆ ಅತಿ ಚಿಕ್ಕ ಬಟ್ಟೆಗಳನ್ನು ಹಾಕಿಸಲಾಯಿತು. ಒಂದು ಸ್ಕ್ರಿಪ್ಟ್​ ನೀಡಿದರು. ಆ ಪಾತ್ರಕ್ಕೆ 25 ಸಾವಿರ ರೂ. ನೀಡುವುದಾಗಿ ತಿಳಿಸಿದರು. ನಾನು ತುಂಬ ತೆಳ್ಳಗಿದ್ದೇನೆ ಎಂಬ ಕಾರಣಕ್ಕೆ ಸ್ಕ್ರಿಪ್ಟ್​ ಬದಲಾಯಿಸಿದರು. ಆ ಸ್ಕ್ರಿಪ್ಟ್​ ಓದಿದಾಗ ನನಗೆ ಅಸಹ್ಯ ಎನಿಸಿತು. ಈ ಮಾತ್ರ ನಾನು ಮಾಡುವುದಿಲ್ಲ ಅಂತ ರೋವಾ ಖಾನ್​ ಮೇಡಮ್​ಗೆ ಹೇಳಿದೆ’ ಎಂದು ಸಂತ್ರಸ್ತ ಯುವತಿಯೊಬ್ಬರು ಕಹಿ ಘಟನೆಯನ್ನು ವಿವರಿಸಿದ್ದಾರೆ.

‘ಈ ಸಿನಿಮಾವನ್ನು ಹೆಚ್ಚು ಜನರು ನೋಡುವುದಿಲ್ಲ. ದುಡ್ಡು ಕೊಟ್ಟು ನೋಡುವವರಿಗೆ ಮಾತ್ರ ಇದು ಲಭ್ಯವಾಗುತ್ತದೆ. ನಿನ್ನ ಹೆಸರು ಮತ್ತು ಗುರುತನ್ನು ಎಲ್ಲಿಯೂ ಬಹಿರಂಗ ಪಡಿಸುವುದಿಲ್ಲ. ಲುಕ್​ ಕೂಡ ಬದಲಾಯಿಸುತ್ತೇನೆ. ದೊಡ್ಡ ಯಶಸ್ಸು ಸಿಗುವುದಕ್ಕಿಂತ ಮುನ್ನ ಎಲ್ಲ ನಟಿಯರು ಇಂಥ ಸಿನಿಮಾಗಳಲ್ಲಿ ಅಭಿನಯಿಸಲೇಬೇಕು’ ಎಂದು ಆ ಯುವತಿಗೆ ರೋವಾ ಖಾನ್​ ಯಾಮಾರಿಸಿದರು.

‘ಶೂಟಿಂಗ್​ ಆರಂಭ ಆದಂತೆ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗುತ್ತಾ ಹೋಯಿತು. ಡೈಲಾಗ್​ಗಳು ತುಂಬ ಅಸಹ್ಯವಾಗಿದ್ದವು. ಮೊಬೈಲ್​ ಫೋನ್​ ಕ್ಯಾಮೆರಾದಲ್ಲಿ ಶೂಟಿಂಗ್​ ಮಾಡಲು ಶುರುಮಾಡಿದರು. ಅರ್ಧ ಶೂಟಿಂಗ್​ ಆಯಿತು. ಇನ್ನುಳಿದ ದೃಶ್ಯಗಳಲ್ಲಿ ಬೆತ್ತಲೆಯಾಗಿ ನಟಿಸಬೇಕು ಎಂದರು. ಆಗ ನಾನು ಈ ಪ್ರಾಜೆಕ್ಟ್​ನಿಂದ ಹೊರನಡೆಯುತ್ತೇನೆ ಎಂದೆ. ಹಾಗಾಗಿದ್ದರೆ ಇಷ್ಟು ದಿನ ಶೂಟಿಂಗ್​ಗೆ ಆದ ಖರ್ಚನ್ನು ನೀನೇ ಭರಿಸಬೇಕು ಎಂದು ಬೆದರಿಕೆ ಹಾಕಿದರು. ಸಂಬಳ ಕೊಡುವುದಿಲ್ಲ. ಇನ್ಮುಂದೆ ಎಲ್ಲಿಯೂ ಕೆಲಸ ಸಿಗುವುದಿಲ್ಲ ಅಂತ ಹೆದರಿಸಿದರು’ ಎಂದು ತಮಗಾದ ಮೋಸವನ್ನು ಇಬ್ಬರು ಸಂತ್ರಸ್ತ ಯುವತಿಯರು ಹೇಳಿಕೊಂಡಿದ್ದಾರೆ.

ಶೂಟಿಂಗ್​ ಶುರುವಾಗುವುದಕ್ಕೂ ಮುನ್ನ ಯುವತಿಯರಿಗೆ ಕೇಳುವ ಕಥೆ ಮತ್ತು ಪಾತ್ರವೇ ಬೇರೆ. ಅರ್ಧ ಶೂಟಿಂಗ್ ಆದ ಬಳಿಕ ಇಲ್ಲ ಸಲ್ಲದ ಕಾರಣಗಳನ್ನು ಹೇಳಿ ಸ್ಕ್ರಿಪ್ಟ್ ಬದಲಾಯಿಸುತ್ತಾರೆ. ಅಶ್ಲೀಲ ಸಂಭಾಷಣೆಗಳನ್ನು ಸೇರಿಸುತ್ತಾರೆ. ನಗ್ನ ದೃಶ್ಯಗಳಲ್ಲಿ ನಟಿಸಬೇಕು ಎಂದು ಒತ್ತಾಯ ಹೇರುತ್ತಾರೆ. ಒಂದು ವೇಳೆ ಅದಕ್ಕೆಲ್ಲ ಒಪ್ಪದಿದ್ದರೆ ಇಷ್ಟು ದಿನ ಶೂಟಿಂಗ್​ಗೆ ಖರ್ಚಾದ ಲಕ್ಷಾಂತರ ರೂ. ಹಣವನ್ನು ತುಂಬಿಕೊಡಬೇಕು ಎನ್ನುತ್ತಾರೆ. ಆ ಹಣ ಕೊಡಲು ಸಾಧ್ಯವಾಗದ ನಟಿಯರು ಅಷ್ಟರಲ್ಲಾಗಲೇ ನೀಲಿ ಚಿತ್ರ ದಂಧೆಗೆ ಶರಣಾಗಲೇ ಬೇಕಾಗುತ್ತದೆ. ಸದ್ಯ ತನಿಖೆ ಮುಂದುವರಿಯುತ್ತಿದ್ದು, ಇನ್ನಷ್ಟು ಕಹಿ ಸತ್ಯಗಳು ಹೊರಬರಲಿವೆ. ನಿಜವಾದ ಅಪರಾಧಿಗಳು ಯಾರು ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ.

ಇದನ್ನೂ ಓದಿ:

ಅಶ್ಲೀಲ ಸಿನಿಮಾ ದಂಧೆ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜೊತೆ ಈ ಸುಂದರಿಯರಿಗೆ ಏನು ಸಂಬಂಧ?

ರಾಜ್​ ಕುಂದ್ರಾ ಕಾಮಕ್ಕೆ ಹೆದರಿ ಶೌಚಾಲಯದಲ್ಲಿ ಅಡಗಿಕೊಂಡಿದ್ದ ನಟಿ; ಪೊಲೀಸ್​ ದೂರಿನಲ್ಲಿ ರಹಸ್ಯ ಬಹಿರಂಗ