AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sanjay Dutt Birthday: ಸಂಜಯ್​ ದತ್ ಬದುಕಿನ 308 ಪ್ರೇಯಸಿಯರು ಮತ್ತು ಮೂವರು ಪತ್ನಿಯರ ಬಗ್ಗೆ ಅಚ್ಚರಿಯ ಮಾಹಿತಿ

Happy Birthday Sanjay Dutt: ಸಂಜಯ್​ ದತ್​ಗೆ 308 ಪ್ರೇಯಸಿಯರು ಇದ್ದರು ಮತ್ತು ಈಗಾಗಲೇ ಎರಡು ಮದುವೆ ವಿಚ್ಛೇದನದಲ್ಲಿ ಅಂತ್ಯವಾಗಿದೆ ಎಂಬುದು ಗೊತ್ತಿದ್ದರೂ ಕೂಡ ಮಾನ್ಯತಾ ಅವರು ಸಂಜಯ್​ ಜೊತೆ ಮದುವೆಯಾಗಲು ಒಪ್ಪಿದರು.

Sanjay Dutt Birthday: ಸಂಜಯ್​ ದತ್ ಬದುಕಿನ 308 ಪ್ರೇಯಸಿಯರು ಮತ್ತು ಮೂವರು ಪತ್ನಿಯರ ಬಗ್ಗೆ ಅಚ್ಚರಿಯ ಮಾಹಿತಿ
ಸಂಜಯ್​ ದತ್ ಬದುಕಿನ 308 ಪ್ರೇಯಸಿಯರು ಮತ್ತು ಮೂವರು ಪತ್ನಿಯರ ಬಗ್ಗೆ ಅಚ್ಚರಿಯ ಮಾಹಿತಿ
TV9 Web
| Edited By: |

Updated on:Jul 29, 2021 | 9:18 AM

Share

Sanjay Dutt Birthday: ‘ಕೆಜಿಎಫ್​: ಚಾಪ್ಟರ್​ 2’ (KGF: Chapter 2) ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಡುತ್ತಿರುವ ನಟ ಸಂಜಯ್​ ದತ್​ ಅವರಿಗೆ ಇಂದು (ಜು.29) ಜನ್ಮದಿನದ (Birthday) ಸಂಭ್ರಮ. ಎಲ್ಲರಿಂದ ಅವರಿಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ. ಸಂಜಯ್​ ದತ್​ (Sanjay Dutt) ಬದುಕಿನಲ್ಲಿ ಹಲವು ಏರಿಳಿತಗಳಿವೆ. ಐಷಾರಾಮಿ ಜೀವನವನ್ನು ಕಂಡ ಅವರು ಜೈಲುವಾಸವನ್ನೂ ಅನುಭವಿಸಿ ಬಂದಿದ್ದಾರೆ. ಭಾರಿ ಜನಪ್ರಿಯತೆ ಪಡೆದ ಅವರು ಕೆಲವು ಕಾರಣಗಳಿಗೆ ಕುಖ್ಯಾತಿ ಪಡೆದಿದ್ದೂ ಉಂಟು. ಭಾರತದಲ್ಲಿ ಶ್ರೀಮಂತಿಕೆಯ ಜೀವನ ನಡೆಸಿದ ಸಂಜಯ್​ ದತ್​ ಅವರು ವಿದೇಶದ ಬೀದಿಯಲ್ಲಿ ಭಿಕ್ಷೆ ಬೇಡಿದ್ದರು! ಹೀಗೆ ಅವರ ವೈಯಕ್ತಿಕ ಜೀವನದ ವಿವರಗಳು ಒಂದಕ್ಕಿಂತ ಮತ್ತೊಂದು ಇಂಟರೆಸ್ಟಿಂಗ್​ ಆಗಿವೆ. 

ಮದುವೆ ಮತ್ತು ರಿಲೇಷನ್​ಶಿಪ್​ ಕಾರಣದಿಂದಲೂ ಸಂಜಯ್​ ದತ್​ ಆಗಾಗ ಸುದ್ದಿ ಆಗಿದ್ದಾರೆ. ಮೂರು ಬಾರಿ ಮದುವೆಯಾದ ಅವರಿಗೆ ಅಂದಾಜು 308 ಪ್ರೇಯಸಿಯರು ಇದ್ದರು! ಹಾಗಂತ ಇದು ಗಾಸಿಪ್​ ಅಲ್ಲ. ಅವರೇ ಹೇಳಿಕೊಂಡಿರುವ ಸತ್ಯ. ಸಂಜಯ್​ ದತ್​ ಜೀವನ ಆಧರಿಸಿ ಮೂಡಿಬಂದ ‘ಸಂಜು’ ಚಿತ್ರದಲ್ಲೂ ಈ ವಿಚಾರದ ಬಗ್ಗೆ ಝಲಕ್ ನೀಡಲಾಗಿತ್ತು. ಸಂಜಯ್​ ದತ್​ ಅವರ ಮೂರು ಮದುವೆ ಬಗ್ಗೆ ಇಲ್ಲಿದೆ ವಿವರ.

ಸಂಜು ಮೊದಲ ಪತ್ನಿ ರಿಚಾ ಶರ್ಮಾ

ನಟಿ ರಿಚಾ ಶರ್ಮಾ ಜೊತೆ ಸಂಜಯ್​ ದತ್​ ಮೊದಲ ಮದುವೆ ನೆರವೇರಿತ್ತು. 1987ರಲ್ಲಿ ರಿಚಾ ಮತ್ತು ಸಂಜು ಮದುವೆಯಾದರು. ರಿಚಾ ಅವರ ಸರಳತೆಗೆ ಸಂಜಯ್​ ದತ್​ ಫಿದಾ ಆಗಿದ್ದರಂತೆ. 1988ರಲ್ಲಿ ಈ ಜೋಡಿಗೆ ತ್ರಿಶಾಲಾ ಎಂಬ ಮಗಳು ಜನಿಸಿದಳು. ಕ್ಯಾನ್ಸರ್​ನಿಂದಾಗಿ 1996ರಲ್ಲಿ ರಿಚಾ ನಿಧನರಾದರು.

ಹೆಚ್ಚು ಕಾಲ ಬಾಳಲಿಲ್ಲ ಎರಡನೇ ಮದುವೆ

ಮಾಡೆಲಿಂಗ್​ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದ ರಿಯಾ ಪಿಳ್ಳೈ ಅವರನ್ನು ಸಂಜಯ್​ ದತ್​ 1998ರಲ್ಲಿ ವಿವಾಹವಾದರು. ಆದರೆ ಕೆಲವೇ ವರ್ಷಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತು. 2005ರಲ್ಲಿ ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿತು. 2008ರಲ್ಲಿ ಸಂಜಯ್​ ದತ್​ ಮತ್ತು ರಿಯಾ ಪಿಳ್ಳೈ ಡಿವೋರ್ಸ್​ ಪಡೆದರು.

ಮೂರನೇ ಪತ್ನಿ ಮಾನ್ಯಾತಾ

ಅನೇಕ ನಟಿಯರ ಜೊತೆ ಸಂಜು ಹೆಸರು ತಳುಕು ಹಾಕಿಕೊಂಡಿತ್ತು. ಸಂಜಯ್​ ದತ್​ಗೆ 308ಕ್ಕೂ ಹೆಚ್ಚು ಪ್ರೇಯಸಿಯರು ಇದ್ದರು ಮತ್ತು ಈಗಾಗಲೇ ಎರಡು ಮದುವೆ ವಿಚ್ಛೇದನದಲ್ಲಿ ಅಂತ್ಯವಾಗಿದೆ ಎಂಬುದು ಗೊತ್ತಿದ್ದರೂ ಕೂಡ ಮಾನ್ಯತಾ ಅವರು ಸಂಜಯ್​ ಜೊತೆ ಮದುವೆಯಾಗಲು ಒಪ್ಪಿದರು. 2008ರಲ್ಲಿ ಸಂಜು ಮತ್ತು ಮಾನ್ಯತಾ ಮದುವೆ ನೆರವೇರಿತು. ಒಬ್ಬರ ನಡುವೆ ಒಳ್ಳೆಯ ಹೊಂದಾಣಿಕೆ ಇದೆ. ಸಂಜಯ್​ ದತ್​ ಅವರು ಹಲವು ಏರುಪೇರಿನ ಹಾದಿನಲ್ಲಿ ಮಾನ್ಯತಾ ಜೊತೆಯಾಗಿದ್ದಾರೆ.

ಇದನ್ನೂ ಓದಿ:

ಸಂಜಯ್​ ದತ್​ ಮಗಳು ತ್ರಿಶಲಾ ಬಾಯ್​ ಫ್ರೆಂಡ್​ ಸತ್ತಿದ್ದು ಹೇಗೆ? ಸ್ಟಾರ್ ಪುತ್ರಿಗೆ ಕಿರಿಕಿರಿ ತಂದ ಪ್ರಶ್ನೆ!

ಸಂಜಯ್​ ದತ್​ಗೆ ಯುಎಇ ಸರ್ಕಾರದಿಂದ ಸಿಕ್ತು ಗೋಲ್ಡನ್​ ವೀಸಾ; ಇದರಿಂದ ಸಿಗೋ ಸವಲತ್ತುಗಳೇನು ಗೊತ್ತಾ?

(Sanjay Dutt Birthday: 308 girlfriends and 3 wives of Sanjay Dutt)

Published On - 8:34 am, Thu, 29 July 21

Follow Us
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ