ನಟನ ಮಗಳನ್ನು ತರಗತಿಯಿಂದ ಹೊರ ಹಾಕಿದ ಶಿಕ್ಷಕರು; ಕಾರಣವೇನು?

TV9 Digital Desk

|

Updated on:Jul 29, 2021 | 9:16 AM

Javed Haider: ನಟ ಜಾವೇದ್​ ಹೈದರ್​ಗೂ ಕೊರೊನಾ ಹಾಗೂ ಲಾಕ್​ಡೌನ್​ ತೊಂದರೆ ಉಂಟು ಮಾಡಿದೆ. ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ.

ನಟನ ಮಗಳನ್ನು ತರಗತಿಯಿಂದ ಹೊರ ಹಾಕಿದ ಶಿಕ್ಷಕರು; ಕಾರಣವೇನು?
ನಟನ ಮಗಳನ್ನು ತರಗತಿಯಿಂದ ಹೊರ ಹಾಕಿದ ಶಿಕ್ಷಕರು; ಕಾರಣವೇನು?
Follow us

ಬಣ್ಣದ ಲೋಕದಲ್ಲಿ ಮಿಂಚುವ ನಟ-ನಟಿಯರ ಬಳಿ ಸಾಕಷ್ಟು ಹಣವಿರುತ್ತದೆ ಅನ್ನೋದು ಜನಸಾಮಾನ್ಯರ ನಂಬಿಕೆ. ಆದರೆ, ಅಸಲಿಯತ್ತು ಆ ರೀತಿ ಇಲ್ಲ ಅನ್ನೋದು ಅನೇಕರಿಗೆ ಗೊತ್ತಿಲ್ಲ.  ಅದರಲ್ಲೂ ಕೊರೊನಾ ಕಾಣಿಸಿಕೊಂಡ ನಂತರದಲ್ಲಿ ಸಾಕಷ್ಟು ಸಿನಿಮಾ ಕಲಾವಿದರು ನಿರುದ್ಯೋಗ ಅನುಭವಿಸುತ್ತಿದ್ದಾರೆ. ಈಗ ಹಿಂದಿ ನಟನೋರ್ವ ಈ ಬಗ್ಗೆ ಮೌನ ಮುರಿದಿದ್ದಾರೆ. ಮಗಳ ಶಾಲಾ ಫೀ ಕಟ್ಟೋಕು ಅವರ ಬಳಿ ಹಣವಿಲ್ಲ. ಈ ಬಗ್ಗೆ ಅವರು ಬೇಸರ ತೋಡಿಕೊಂಡಿದ್ದಾರೆ.

ನಟ ಜಾವೇದ್​ ಹೈದರ್​ಗೂ ಕೊರೊನಾ ಹಾಗೂ ಲಾಕ್​ಡೌನ್​ ತೊಂದರೆ ಉಂಟು ಮಾಡಿದೆ. ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ನನ್ನ ಮಗಳು 8ನೇ ತರಗತಿ ಓದುತ್ತಿದ್ದಾಳೆ. ನಟನೆಗೆ ಅವಕಾಶ ಸಿಗದೆ ನಾನು ತುಂಬಾನೇ ಕಷ್ಟಪಡುತ್ತಿದ್ದೇನೆ. ಶಾಲೆಯ ಪ್ರವೇಶ ಶುಲ್ಕ ತುಂಬದ ಕಾರಣ ಮಗಳನ್ನು ಆನ್​ಲೈನ್ ತರಗತಿಗೆ ಸೇರಿಸಿರಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.

‘ಶಾಲೆಯವರು ನನಗೆ ಶಾಲಾ ಶುಲ್ಕದಲ್ಲಿ ವಿನಾಯಿತಿ ನೀಡಿದ್ದಾರೆ. ಆದಾಗ್ಯು ತಿಂಗಳಿಗೆ ನಾನು 2,500 ರೂಪಾಯಿ ಪಾವತಿ ಮಾಡಬೇಕು. ಅದು ಕೂಡ ನನ್ನ ಬಳಿ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಾಲಾ ಶಿಕ್ಷಕರ ಬಳಿ ನಾನು ಮಾತನಾಡಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದಿದ್ದಾರೆ ಜಾವೇದ್.

‘ಒಂದಷ್ಟು ಮೊತ್ತವನ್ನು ನಾನು ಹೊಂದಿಸಿದೆ. ಆ ನಂತರವೇ ಮಗಳಿಗೆ ತರಗತಿ ಪ್ರವೇಶ ನೀಡಲಾಯಿತು. ಯಾರ ಬಳಿಯಾದರೂ ನಾವು ಹಣ ಕೇಳಿದರೆ ಅಂತಹ ಸಂದರ್ಭದಲ್ಲಿ ಅವರು ನಮ್ಮನ್ನು ಕಡೆಗಣಿಸುತ್ತಾರೆ. ಇದಕ್ಕಿಂತ ದೊಡ್ಡ ಅವಮಾನ ಮತ್ತೊಂದಿಲ್ಲ. ಆದರೆ, ನಟನೆ ಇಲ್ಲದೆ ನನ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಪತ್ನಿಯ ಒಡವೆಗಳನ್ನು ಮಾರುವ ಸ್ಥಿತಿ ಬಂದಿದೆ’ ಎಂದು ಬೇಸರ ಹೊರಹಾಕಿದ್ದಾರೆ ಅವರು.

1973ರಲ್ಲಿ ಬಾಲ ಕಲಾವಿದನಾಗಿ ಜಾವೇದ್​ ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ನಂತರದಲ್ಲಿ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರು.  ಆದರೆ, ಈಗ ಅವರಿಗೆ ಚಿತ್ರಗದಲ್ಲಿ ನಟಿಸೋಕೆ ಅವಕಾಶ ಸಿಗುತ್ತಿಲ್ಲ. ಅವರಿಗೆ ಸಹಾಯ ಮಾಡಬೇಕು ಎಂದು ಅಭಿಮಾನಿಗಳು ಚಿತ್ರರಂಗದವರ ಬಳಿ ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ತಿಳಿದಷ್ಟು ಚಿಕ್ಕದಿಲ್ಲ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆ; ಚಾರ್ಜ್​ಶೀಟ್​ನಿಂದ ಬಯಲಾಯ್ತು ಅಚ್ಚರಿಯ ವಿಚಾರ

ತಾಜಾ ಸುದ್ದಿ

Related Stories

Click on your DTH Provider to Add TV9 Kannada