ತಿಳಿದಷ್ಟು ಚಿಕ್ಕದಿಲ್ಲ ರಾಜ್ ಕುಂದ್ರಾ ಅಶ್ಲೀಲ ಸಿನಿಮಾ ದಂಧೆ; ಚಾರ್ಜ್ಶೀಟ್ನಿಂದ ಬಯಲಾಯ್ತು ಅಚ್ಚರಿಯ ವಿಚಾರ
ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ರಾಜ್ ಕುಂದ್ರಾ ಅವರ ಕರ್ಮಕಾಂಡವನ್ನು ಬಿಚ್ಚಿಡಲಾಗಿದೆ.
ರಾಜ್ ಕುಂದ್ರಾ ಅವರ ಪಾರ್ನ್ ಸಿನಿಮಾ ದಂಧೆ ಪ್ರಕರಣ ನಿತ್ಯ ಹೊಸಹೊಸ ತಿರುವು ಪಡೆದುಕೊಳ್ಳುತ್ತಿದೆ. ವಿಚಾರಣೆಯಿಂದ, ತನಿಖೆಯಿಂದ ಒಂದಷ್ಟು ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಮುಂದಿನ ಮೂರು ವರ್ಷಗಳಲ್ಲಿ ಈ ಉದ್ಯಮದಿಂದ ದೊಡ್ಡ ಮೊತ್ತದ ಹಣ ಗಳಿಕೆ ಮಾಡಲು ರಾಜ್ ಕುಂದ್ರಾ ಪ್ಲ್ಯಾನ್ ಮಾಡಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ರಾಜ್ ಕುಂದ್ರಾ ಅವರ ಕರ್ಮಕಾಂಡವನ್ನು ಬಿಚ್ಚಿಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಎಷ್ಟು ಹಣ ಗಳಿಕೆ ಮಾಡಬೇಕು ಎನ್ನುವ ರಾಜ್ ಕುಂದ್ರಾ ಲೆಕ್ಕಾಚಾರದ ಬಗ್ಗೆ ಈ ಚಾರ್ಜ್ಶೀಟ್ನಲ್ಲಿದೆಯಂತೆ.
ಹಾಟ್ಶಾಟ್ಸ್ ಆ್ಯಪ್ನಲ್ಲಿ ಪಾರ್ನ್ ಸಿನಿಮಾಗಳ ಪ್ರಸಾರವನ್ನು ರಾಜ್ಕುಂದ್ರಾ ಮಾಡುತ್ತಿದ್ದರು. ಈ ಕಾರಣಕ್ಕೆ ಗೂಗಲ್ ಪ್ಲೇಸ್ಟೋರ್ ಈ ಆ್ಯಪ್ಅನ್ನು ತೆಗೆದು ಹಾಕಿತ್ತು. ಇದಾದ ನಂತರದಲ್ಲಿ ಬಾಲಿಫೇಮ್ ಹೆಸರಿನ ಆ್ಯಪ್ಅನ್ನು ರಾಜ್ ಕುಂದ್ರಾ ಲಾಂಚ್ ಮಾಡಿದ್ದರು. 2023-24ರ ವೇಳೆಗೆ ಈ ಉದ್ಯಮದಿಂದ 146 ಕೋಟಿ ಒಟ್ಟು ಆದಾಯ ಹಾಗೂ 34 ಕೋಟಿ ರೂಪಾಯಿ ಲಾಭಾಂಶ ಗಳಿಕೆ ಮಾಡುವ ಗುರಿ ಅವರದ್ದಾಗಿತ್ತು.
2021-22ರ ಅವಧಿಯಲ್ಲಿ 36.50 ಕೋಟಿ ಒಟ್ಟು ಆದಾಯ ಹಾಗೂ ಹಾಗೂ 4.77 ಕೋಟಿ ರೂಪಾಯಿ ಲಾಭ, 2021-22 ಅವಧಿಯಲ್ಲಿ 73 ಕೋಟಿ ಒಟ್ಟು ಆದಾಯ ಗಳಿಕೆ ಮಾಡುವ ಗುರಿಯನ್ನು ರಾಜ್ ಹೊಂದಿದ್ದರು.
ರಾಜ್ ಕುಂದ್ರಾ ಅವರ ಈ ಅಶ್ಲೀಲ ದಂಧೆ ಪ್ರಕರಣಕ್ಕೂ ಉತ್ತರ ಪ್ರದೇಶದ ಕಾನ್ಪುರಕ್ಕೂ ನಂಟು ಸಿಕ್ಕಿತ್ತು. ಕಾನ್ಪುರ್ ಮಹಿಳೆಯ ಖಾತೆಗೆ ರಾಜ್ ಕುಂದ್ರಾ ಹಣ ವರ್ಗಾವಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿತ್ತು. ಹರ್ಷಿತಾ ಶ್ರೀವಾಸ್ತವ ಎಂಬ ಮಹಿಳೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಈ ಖಾತೆಯನ್ನು ವಶಕ್ಕೆ ಪಡೆಯಲಾಗಿದ್ದು, ಈ ಖಾತೆಯಲ್ಲಿ ಸುಮಾರು 2,32,45,222 ರೂಪಾಯಿ ಇತ್ತು. ಹಾಟ್ ಶಾಟ್ಸ್ ವಾಟ್ಸಾಪ್ ಗ್ರೂಪ್‌ನಲ್ಲಿ ಅರವಿಂದ್ ಕುಮಾರ್ ಶ್ರೀವಾಸ್ತವ ಹೆಸರಿನ ವ್ಯಕ್ತಿ ಇದ್ದಾರೆ. ಈ ಅರವಿಂದ್ ಅವರ ಪತ್ನಿ ಹರ್ಷಿತಾ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಗಂಡನ ಅಶ್ಲೀಲ ಸಿನಿಮಾ ಕೇಸ್ ಬಯಲಾದ ಬಳಿಕ ರಿಯಾಲಿಟಿ ಶೋಗೆ ಕೈ ಎತ್ತಿದ ಶಿಲ್ಪಾ ಶೆಟ್ಟಿ
ಅಶ್ಲೀಲ ಸಿನಿಮಾ ಕೇಸ್: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ 14 ದಿನ ನ್ಯಾಯಾಂಗ ಬಂಧನ