‘ಅಶ್ಲೀಲ ಸಿನಿಮಾದಲ್ಲಿ ನಟಿಸೋದು ತಪ್ಪು ಎಂದಿದ್ದು ಯಾರು?’ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿಯ ಖಡಕ್​ ಪ್ರಶ್ನೆ  

TV9 Digital Desk

| Edited By: Rajesh Duggumane

Updated on: Jul 28, 2021 | 5:32 PM

1992-97ರ ಅವಧಿಯಲ್ಲಿ ಸೋಮಿ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದರು. ಈ ವೇಳೆ ಸಲ್ಮಾನ್​ ಖಾನ್​ ಜತೆ ಅವರು ರಿಲೇಶನ್​ಶಿಪ್​ನಲ್ಲಿದ್ದರು. ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.

‘ಅಶ್ಲೀಲ ಸಿನಿಮಾದಲ್ಲಿ ನಟಿಸೋದು ತಪ್ಪು ಎಂದಿದ್ದು ಯಾರು?’ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿಯ ಖಡಕ್​ ಪ್ರಶ್ನೆ  
‘ಅಶ್ಲೀಲ ಸಿನಿಮಾದಲ್ಲಿ ನಟಿಸೋದು ತಪ್ಪು ಎಂದಿದ್ದು ಯಾರು?’ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿಯ ಖಡಕ್​ ಪ್ರಶ್ನೆ  

Follow us on

ರಾಜ್​ ಕುಂದ್ರಾ ನಡೆಸುತ್ತಿದ್ದ ಅಶ್ಲೀಲ ಸಿನಿಮಾ ದಂಧೆ ಬಯಲಿಗೆ ಬಂದ ನಂತರದಲ್ಲಿ ಸಾಕಷ್ಟು ಹೀರೋಯಿನ್​​ಗಳ ಹೆಸರು ಬೆಳಕಿಗೆ ಬರುತ್ತಿದೆ. ಬಾಲಿವುಡ್​ನ ಸಾಕಷ್ಟು ನಟಿಯರು ಹಾಗೂ ಮಾಡೆಲ್​ಗಳ ಹೆಸರು ಈ ಪ್ರಕರಣದಲ್ಲಿ ಸಿಲುಕಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಸಲ್ಮಾನ್​ ಖಾನ್​ ಮಾಜಿ ಪ್ರೇಯಸಿ ಸೋಮಿ ಈ ಬಗ್ಗೆ ಮಾತನಾಡಿದ್ದು, ಮಹಿಳೆಯರು ಪಾರ್ನ್​ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

‘ನೀಲಿ ಚಿತ್ರಗಳಲ್ಲಿ ನಟಿಸೋದನ್ನು ಯಾರಾದರೂ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದರೆ ಅವರನ್ನು ನಾನು ಜಡ್ಜ್​ ಮಾಡುವುದಿಲ್ಲ. ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದರೆ ಅದು ತಪ್ಪು. ಅವರೇ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ಅದರಲ್ಲಿ ತಪ್ಪೇನಿದೆ?’ ಎಂದು ಸೋಮಿ ಪ್ರಶ್ನೆ ಮಾಡಿದ್ದಾರೆ.

1992-97ರ ಅವಧಿಯಲ್ಲಿ ಸೋಮಿ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದರು. ಈ ವೇಳೆ ಸಲ್ಮಾನ್​ ಖಾನ್​ ಜತೆ ಅವರು ರಿಲೇಶನ್​ಶಿಪ್​ನಲ್ಲಿದ್ದರು. ನಂತರ ಇಬ್ಬರ ಸಂಬಂಧ ಮುರಿದು ಬಿದ್ದಿತ್ತು.

ಚಾರ್ಜ್​ ಶೀಟ್​ನಲ್ಲಿದೆ ಶಾಕಿಂಗ್​ ವಿಚಾರ

ಮುಂಬೈ ಪೊಲೀಸರು ರಾಜ್​ ಕುಂದ್ರಾ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಈ ಚಾರ್ಜ್​ಶೀಟ್​ನಲ್ಲಿ ರಾಜ್​ ಕುಂದ್ರಾ ಅವರ ಕರ್ಮಕಾಂಡವನ್ನು ಬಿಚ್ಚಿಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಎಷ್ಟು ಹಣ ಗಳಿಕೆ ಮಾಡಬೇಕು ಎನ್ನುವ ರಾಜ್​ ಕುಂದ್ರಾ ಲೆಕ್ಕಾಚಾರದ ಬಗ್ಗೆ ಈ ಚಾರ್ಜ್​ಶೀಟ್​ನಲ್ಲಿದೆಯಂತೆ.

ಹಾಟ್​ಶಾಟ್ಸ್​ ಆ್ಯಪ್​ನಲ್ಲಿ ಪಾರ್ನ್​ ಸಿನಿಮಾಗಳ ಪ್ರಸಾರವನ್ನು ರಾಜ್​ಕುಂದ್ರಾ ಮಾಡುತ್ತಿದ್ದರು. ಈ ಕಾರಣಕ್ಕೆ ಗೂಗಲ್​ ಪ್ಲೇಸ್ಟೋರ್​ ಈ ಆ್ಯಪ್​ಅನ್ನು ತೆಗೆದು ಹಾಕಿತ್ತು. ಇದಾದ ನಂತರದಲ್ಲಿ ಬಾಲಿಫೇಮ್​ ಹೆಸರಿನ ಆ್ಯಪ್​ಅನ್ನು ರಾಜ್​ ಕುಂದ್ರಾ ಲಾಂಚ್​ ಮಾಡಿದ್ದರು. 2023-24ರ ವೇಳೆಗೆ ಈ ಉದ್ಯಮದಿಂದ 146 ಕೋಟಿ ಒಟ್ಟು ಆದಾಯ ಹಾಗೂ 34 ಕೋಟಿ ರೂಪಾಯಿ ಲಾಭಾಂಶ ಗಳಿಕೆ ಮಾಡುವ ಗುರಿ ಅವರದ್ದಾಗಿತ್ತು.

2021-22ರ ಅವಧಿಯಲ್ಲಿ 36.50 ಕೋಟಿ ಒಟ್ಟು ಆದಾಯ ಹಾಗೂ ಹಾಗೂ 4.77 ಕೋಟಿ ರೂಪಾಯಿ ಲಾಭ, 2021-22 ಅವಧಿಯಲ್ಲಿ 73 ಕೋಟಿ ಒಟ್ಟು ಆದಾಯ ಗಳಿಕೆ ಮಾಡುವ ಗುರಿಯನ್ನು ರಾಜ್​ ಹೊಂದಿದ್ದರು.

ಇದನ್ನೂ ಓದಿ: ನನ್ನ ಕರೀಯರ್, ಬದುಕು ಮತ್ತು ವ್ಯವಹಾರವನ್ನು ಮಣ್ಣು ಪಾಲು ಮಾಡಿಬಿಟ್ಟೆ ಅಂತ ಕುಂದ್ರಾ ಮೇಲೆ ಕೂಗಾಡಿದರು ಶಿಲ್ಪಾ ಶೆಟ್ಟಿ

ತಿಳಿದಷ್ಟು ಚಿಕ್ಕದಿಲ್ಲ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆ; ಚಾರ್ಜ್​ಶೀಟ್​ನಿಂದ ಬಯಲಾಯ್ತು ಅಚ್ಚರಿಯ ವಿಚಾರ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada