AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alia Bhatt: ರಣಬೀರ್ ಕಪೂರ್ ಟೋಪಿ ಕದ್ದ ಆಲಿಯಾ ಭಟ್!

Ranbir Kapoor and Alia Bhatt: ತನ್ನ ಸ್ನೇಹಿತ ರಣಬೀರ್ ಕಪೂರ್ ಅವರನ್ನು ಬಹಳ ಮಿಸ್ ಮಾಡಿಕೊಳ್ಳುವ ಆಲಿಯಾ ಭಟ್ ಅದಕ್ಕೊಂದು ಪರಿಹಾರವನ್ನೂ ಕಂಡುಕೊಂಡಿದ್ದಾರೆ. ಏನದು? ಮುಂದೆ ಓದಿ.

Alia Bhatt: ರಣಬೀರ್ ಕಪೂರ್ ಟೋಪಿ ಕದ್ದ ಆಲಿಯಾ  ಭಟ್!
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್
TV9 Web
| Updated By: shivaprasad.hs|

Updated on:Jul 28, 2021 | 5:17 PM

Share

ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ನಟ ರಣಬೀರ್ ಕಪೂರ್ ಒಟ್ಟಿಗೇ ಸುತ್ತಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆಲಿಯಾ ಭಟ್ ಈಗ ರಣಬೀರ್ ಕಪೂರ್ ಟೋಪಿಯನ್ನು ಕದ್ದಿದ್ದಾರೆ. ಜೊತೆಗೆ ಅದನ್ನು ಎಲ್ಲೆಡೆಯೂ ಹೇಳಿಕೊಳ್ಳುತ್ತಿದ್ದಾರೆ. ಅರೇ, ಇದೇನಿದು ಎಂದು ಯೋಚಿಸುತ್ತಿದ್ದೀರಾ? ಹೌದು. ಆಲಿಯಾ ಭಟ್ ಟೋಪಿ ಕದ್ದಿರುವುದು ನಿಜ. ಆದರೆ ಅದು ರಣಬೀರ್ ಕಪೂರ್ ಮೇಲಿನ ಪ್ರೀತಿಯಿಂದ. ಪ್ರಿಯಕರನನ್ನು ಬಿಟ್ಟಿರಲು ಮನಸ್ಸು ಬಾರದ ಅವರಿಗೆ ರಣಬೀರ್ ಟೋಪಿಯೇ ಆಸರೆಯಾಗಿ ಕಂಡಿದೆ.

ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಆಲಿಯಾ ಭಟ್ ಅದರಲ್ಲಿ ಕಪ್ಪು ಬಣ್ಣದ ಟೋಪಿಯನ್ನು ಧರಿಸಿದ್ದಾರೆ. ಜೊತೆಗೆ ಅದಕ್ಕೆ ಅಡಿಬರಹವನ್ನೂ ಬರೆದಿದ್ದು, ‘ನಾನು ಆತನನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅದಕ್ಕಾಗಿಯೇ ಆತನಿಗೆ ಸೇರಿದ ವಸ್ತುಗಳನ್ನು ಕದಿಯುತ್ತೇನೆ’ ಎಂದು ಬರೆದಿದ್ದಾರೆ. ಅದಕ್ಕೆ ಅಡಿ ಟಿಪ್ಪಣಿಯನ್ನೂ ಸೇರಿಸಿರುವ ಅವರು ಆತನ ವಸ್ತುಗಳೊಂದಿಗೆ ಎಷ್ಟಾಗುತ್ತದೋ ಅಷ್ಟು ಸೆಲ್ಫಿಯನ್ನೂ ತೆಗೆದುಕೊಳ್ಳುತ್ತೇನೆ ಎಂದು ಮುದ್ದಾಗಿ ಬರೆದಿದ್ದಾರೆ. ಆಲಿಯಾ ಧರಿಸಿರುವ ಆ ಟೋಪಿಯಲ್ಲಿ ‘High as your expectations’ ಎಂದು ಬರೆದುಕೊಂಡಿದ್ದು, ಅದೂ ಸಹ ರಣಬೀರ್ ಕುರಿತೇ ಆಲಿಯಾ ಹೇಳುತ್ತಿರಬಹುದು ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.

ಸುಮಾರು ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಆಲಿಯಾ ಮತ್ತು ರಣಬೀರ್ ‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಒಟ್ಟಿಗೇ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ನಟಿ ಸೋನಮ್ ಕಪೂರ್ ಮದುವೆಯ ರಿಸೆಪ್ಶನ್​ನಲ್ಲಿ ಈರ್ವರೂ ತಮ್ಮ ನಡುವಿನ ಬಾಂಧವ್ಯವನ್ನು ಹಂಚಿಕೊಂಡಿದ್ದರು. ಆಲಿಯಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಆಗಾಗ ರಣಬೀರ್ ಅವರ ಕಾಲೆಳೆಯುತ್ತಾ ಪೋಸ್ಟ್ ಹಾಕುತ್ತಿರುತ್ತಾರೆ.

ಆಲಿಯಾ ಭಟ್ ಹಂಚಿಕೊಂಡಿರುವ ಪೋಸ್ಟ್:

ಚಿತ್ರ ರಂಗದಲ್ಲಿ ಬಹಳ ಬ್ಯುಸಿಯಾಗಿರುವ ಆಲಿಯಾ ಅವರ ಬತ್ತಳಿಕೆಯಲ್ಲೀಗ ಹಲವು ಚಿತ್ರಗಳಿವೆ. ಅವುಗಳೆಲ್ಲವೂ ದೊಡ್ಡ ಬಜೆಟ್​ನ ಬಹು ನಿರೀಕ್ಷಿತ ಚಿತ್ರಗಳು ಎಂಬುದು ವಿಶೇಷ. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ಇದಲ್ಲದೇ, ‘ಗಂಗೂಬಾಯಿ ಕಾಥಿಯಾವಾಡಿ’, ‘ಡಾರ್ಲಿಂಗ್ಸ್’ ಮತ್ತು ‘ತಖ್ತ್’ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಇತ್ತ ರಣಬೀರ್ ಖಾತೆಯಲ್ಲಿ ‘ಶಂಷೇರಾ’ ಚಿತ್ರವಿದೆ.

ಇದನ್ನೂ ಓದಿ: ತಿಳಿದಷ್ಟು ಚಿಕ್ಕದಿಲ್ಲ ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆ; ಚಾರ್ಜ್​ಶೀಟ್​ನಿಂದ ಬಯಲಾಯ್ತು ಅಚ್ಚರಿಯ ವಿಚಾರ

ಇದನ್ನೂ ಓದಿ: Dulquer Salmaan Birthday: ದುಲ್ಕರ್ ಸಲ್ಮಾನ್ ನಟಿಸಿರುವ ಈ ಚಿತ್ರಗಳನ್ನು ನೀವಿನ್ನೂ ನೋಡಿಲ್ಲವೇ? ಮಿಸ್ ಮಾಡಲೇಬೇಡಿ

(Alia Bhatt steals boyfriend Ranbir Kapoor’s hat and writes when you miss him)

Published On - 5:08 pm, Wed, 28 July 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ