Akshay Kumar: ಅಕ್ಷಯ್ ಕುಮಾರ್ 1ಕೋಟಿ ರೂ ದೇಣಿಗೆ ನೀಡಿದ್ದ ಕಾಶ್ಮೀರದ ಶಾಲೆಯ ನೂತನ ಕಟ್ಟಡಕ್ಕೆ ನೆರವೇರಿತು ಶಿಲಾನ್ಯಾಸ
BSF India: ತಮ್ಮ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ. ಜೀರ್ಣಾವಸ್ಥೆಯಲ್ಲಿದ್ದ ಕಾಶ್ಮೀರದ ಶಾಲೆಯೊಂದಕ್ಕೆ 1ಕೋಟಿ ರೂ ದೇಣಿಗೆ ನೀಡಿದ್ದು, ಅದರ ಕಾಮಗಾರಿ ಆರಂಭವಾಗಿದೆ. ಇದನ್ನು ಬಿಎಸ್ಎಫ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ.

ತಮ್ಮ ಚಿತ್ರರಂಗದ ಕೆಲಸಗಳ ಜೊತೆಜೊತೆಗೆ ತಮ್ಮ ಹೊರಗಿನ ನಡವಳಿಕೆ ಮತ್ತು ವ್ಯಕ್ತಿತ್ವದಿಂದಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಉಳಿದ ನಟರಿಗಿಂತ ಭಿನ್ನವಾಗಿದ್ದಾರೆ. ಕೊರೊನಾ ಸಂದಿಗ್ಧ ಸಮಯದಲ್ಲಿ ಅವಶ್ಯವಿರುವವರಿಗೆ ಸಹಾಯ ಹಸ್ತ ಚಾಚಿದ್ದ ಈ ನಟ, ಈಗ ಶಿಕ್ಷಣ ಕ್ಷೇತ್ರದಲ್ಲೂ ನೆರವು ನೀಡಿದ್ದು ಗಮನ ಸೆಳೆದಿದೆ. ಇತ್ತೀಚೆಗೆ ಅಂದರೆ ಜೂನ್ 17ರಂದು ನಟ ಕಾಶ್ಮೀರದ ಗಡಿ ಭದ್ರತಾ ಪಡೆಯ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿಗೆ ಸಮೀಪದಲ್ಲಿ ಜೀರ್ಣಾವಸ್ಥೆಯಲ್ಲಿದ್ದ ಶಾಲೆಯೊಂದನ್ನು ಗಮನಿಸಿದ್ದ ಅವರು ಅದರ ಅಭಿವೃದ್ಧಿಗಾಗಿ 1ಕೋಟಿ ರೂ.ಗಳನ್ನು ನೀಡುವುದಾಗಿ ತಿಳಿಸಿದ್ದರು. ಈಗ ಆ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿದೆ.
ಅಕ್ಷಯ್ ಈ ಹಿಂದೆ ಬಿಎಸ್ಎಫ್ಗೆ ಭೇಟಿ ನೀಡಿದ್ದರ ಕುರಿತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ‘ದೇಶದ ಗಡಿ ಕಾಯುವ ನೈಜ ಹೀರೋಗಳನ್ನು ನಾನಿಂದು ಭೇಟಿಯಾದೆ. ಗೌರವದ ಹೊರತಾಗಿ ಮತ್ಯಾವ ಭಾವವೂ ನನ್ನಲ್ಲಿ ಮೂಡುತ್ತಿಲ್ಲ’ ಎಂದು ಅವರು ಬರೆದುಕೊಂಡಿದ್ದರು. ಆ ಸಂದರ್ಭದಲ್ಲಿಯೇ ಅವರು ಶಾಲೆಗೆ ದೇಣಿಗೆ ನೀಡಲು ಇಚ್ಛೆ ವ್ಯಕ್ತಪಡಿಸಿದ್ದರು. ಈಗ ಬಿಎಸ್ಎಫ್ ಶಾಲೆಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಮಾಡಿರುವ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಂಡಿದೆ.
ಗಡಿ ಭದ್ರತಾ ಪಡೆಯ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಮಾಹಿತಿಯಂತೆ, ಅಕ್ಷಯ್ ಕುಮಾರ್ ಅವರ ತಂದೆ ದಿವಂಗತ ಹರಿ ಓಂ ಭಾಟಿಯಾ ಅವರ ಸ್ಮರಣಾರ್ಥವಾಗಿ, ಕಾಶ್ಮೀರದ ‘ನೀರು’ವಿನ ಸರ್ಕಾರಿ ಶಾಲೆಯ ಹೊಸ ಸಂಕೀರ್ಣಕ್ಕೆ ಅಡಿಪಾಯವನ್ನು ಹಾಕಲಾಗಿದೆ. ಈ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ಅವರು ವೆಬ್ಲಿಂಕ್ ಮೂಲಕ ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.
ಬಿಎಸ್ಎಫ್ ಮಾಡಿರುವ ಟ್ವೀಟ್:
DG BSF Sh Rakesh Asthana along with Sh @akshaykumar Padma Shri laid foundation stone of Hari Om Bhatia Education Block at Govt Middle School Niru, Kashmir in presence of Smt Anu Asthana, President BWWA & Sh Surendra Panwar, SDG Western Command BSF through weblink today#JaiHind pic.twitter.com/7lO9VvQ7up
— BSF (@BSF_India) July 27, 2021
ಅಕ್ಷಯ್ ಕುಮಾರ್ ಅವರ ಚಿತ್ರಗಳನ್ನು ಗಮನಿಸುವುದಾದರೆ, ವರ್ತಮಾನದಲ್ಲಿ ಅವರು ಬಾಲಿವುಡ್ನಲ್ಲಿ ಮುಂಚೂಣಿಯಲ್ಲಿರುವ ನಟರಾಗಿದ್ದಾರೆ. ‘ಬೆಲ್ ಬಾಟಂ’, ‘ಬಚ್ಚನ್ ಪಾಂಡೆ’, ‘ರಕ್ಷಾ ಬಂಧನ್’, ‘ರಾಮ ಸೇತು’, ‘ಪೃಥ್ವಿರಾಜ್’ ಸೇರಿದಂತೆ ಹಲವಾರು ಚಿತ್ರಗಳು ಅವರ ಖಾತೆಯಲ್ಲಿವೆ.
ಇದನ್ನೂ ಓದಿ: Vikrant Rona First Look: ವಿಕ್ರಾಂತ್ ರೋಣಾದಲ್ಲಿ ಜಿಆರ್ ಆಗಿ ಧೂಳೆಬ್ಬಿಸಲಿದ್ದಾರೆ ಜಾಕ್ವೆಲಿನ್!
ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆಗೆ ಅಕ್ಷಯ್ ಕುಮಾರ್ ಕಡೆಯಿಂದ ಸಿಗಲಿದೆ ಗಿಫ್ಟ್; ಲೀಕ್ ಆಯ್ತು ಬಿಗ್ ನ್ಯೂಸ್
(Akshay Kumar donates 1cr to a school of Kashmir and the work begins)
Published On - 2:06 pm, Wed, 28 July 21