AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯ ದಿನಾಚರಣೆಗೆ ಅಕ್ಷಯ್​ ಕುಮಾರ್​ ಕಡೆಯಿಂದ ಸಿಗಲಿದೆ ಗಿಫ್ಟ್​; ಲೀಕ್​ ಆಯ್ತು ಬಿಗ್​ ನ್ಯೂಸ್​

Sooryavanshi Release Date: ದೀಪಾವಳಿ ಹಬ್ಬದ ಸಮಯದಲ್ಲಿ ಸೂರ್ಯವಂಶಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿತ್ತು. ಆದರೆ ಈಗ ಅದಕ್ಕೂ ಮುನ್ನವೇ ರಿಲೀಸ್​ ಮಾಡುವ ಬಗ್ಗೆ ಪ್ಲ್ಯಾನ್​ ನಡೆಯುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಅಕ್ಷಯ್​ ಕುಮಾರ್​ ಕಡೆಯಿಂದ ಸಿಗಲಿದೆ ಗಿಫ್ಟ್​; ಲೀಕ್​ ಆಯ್ತು ಬಿಗ್​ ನ್ಯೂಸ್​
ಅಕ್ಷಯ್​ ಕುಮಾರ್​
TV9 Web
| Edited By: |

Updated on: Jun 26, 2021 | 8:14 AM

Share

ಸಮಯಕ್ಕೆ ಸಿಕ್ಕಾಪಟ್ಟೆ ಬೆಲೆ ಕೊಡುತ್ತಾರೆ ನಟ ಅಕ್ಷಯ್​ ಕುಮಾರ್​. ಅದೇ ಕಾರಣಕ್ಕಾಗಿ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಮಾಡುತ್ತಿರುತ್ತಾರೆ. ಆದರೆ ಕೊರೊನಾ ವೈರಸ್​ ಹಾವಳಿಯಿಂದಾಗಿ ಒಂದೂವರೆ ವರ್ಷದಿಂದ ಈಚೆಗೆ ಅವರ ವೇಗಕ್ಕೆ ಕೊಂಚ ಬ್ರೇಕ್​ ಬಿದ್ದಿದೆ. ಸದ್ಯ ಅವರು ಹಲವು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಪೈಕಿ ಬಿಡುಗಡೆಗೆ ಸಿದ್ಧವಾಗಿರುವ ‘ಸೂರ್ಯವಂಶಿ’ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ಒಂದು ಸುದ್ದಿ ಸೋರಿಕೆ ಆಗಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2020ರ ಆರಂಭದಲ್ಲೇ ‘ಸೂರ್ಯವಂಶಿ’ ರಿಲೀಸ್​ ಆಗಬೇಕಿತ್ತು. ಆದರೆ ಆ ಸಮಯದಲ್ಲಿ ಕೊರೊನಾ ವೈರಸ್​ ಕಾಟ ಶುರು ಆಗಿದ್ದರಿಂದ ಸಿನಿಮಾ ಬಿಡುಗಡೆ ಸಾಧ್ಯವಾಗಲಿಲ್ಲ. ನಂತರ ಲಾಕ್​ಡೌನ್​ ಪರಿಣಾಮ ಚಿತ್ರಮಂದಿರಗಳು ಬಂದ್​ ಆಗಿ, ಅನಿರ್ಧಿಷ್ಟಾವಧಿಗೆ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿತ್ತು. ಈಗ ‘ಸೂರ್ಯವಂಶಿ’ ಬಿಡುಗಡೆಗಾಗಿ ಸೂಕ್ತ ದಿನಾಂಕವನ್ನು ಚಿತ್ರತಂಡ ಫಿಕ್ಸ್​ ಮಾಡಿದೆ ಎಂಬ ಮಾತು ಕೇಳಿಬಂದಿದೆ.

ಸದ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗುತ್ತಿದೆ. ಹಾಗಾಗಿ ನಿಧಾನಕ್ಕೆ ಚಿತ್ರಮಂದಿರಗಳನ್ನು ತೆರೆಯುವ ಸಾಧ್ಯತೆ ಇದೆ. ಈ ವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ಸೂರ್ಯವಂಶಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿತ್ತು. ಆದರೆ ಈಗ ಅದಕ್ಕೂ ಮುನ್ನವೇ ರಿಲೀಸ್​ ಮಾಡುವ ಬಗ್ಗೆ ಪ್ಲ್ಯಾನ್​ ನಡೆಯುತ್ತಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆಗಸ್ಟ್​ ಎರಡನೇ ವಾರದಲ್ಲಿ ‘ಸೂರ್ಯವಂಶಿ’ ರಿಲೀಸ್​ ಆದರೆ ಸೂಕ್ತ ಎಂಬ ಅಭಿಪ್ರಾಯ ಚಿತ್ರತಂಡದ ಸದಸ್ಯರಿಂದ ವ್ಯಕ್ತವಾಗಿದೆ ಎನ್ನಲಾಗಿದೆ.

ಈ ಚಿತ್ರದ ಕಥೆಯಲ್ಲಿ ದೇಶಭಕ್ತಿಯ ಅಂಶಗಳು ಕೂಡ ಇದೆ. ಹಾಗಾಗಿ ಸ್ವಾತಂತ್ರ್ಯ ದಿನಾಚರಣೆಯ ಆಸುಪಾಸಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ ಎಂಬ ಸುದ್ದಿ ಕೇಳಿಬಂದಿದೆ. ಅಧಿಕೃತ ಮಾಹಿತಿ ಹೊರಬೀಳಲು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ಗೆ ಜೋಡಿಯಾಗಿ ಕತ್ರಿನಾ ಕೈಫ್​ ನಟಿಸಿದ್ದಾರೆ. ರೋಹಿತ್​ ಶೆಟ್ಟಿ ನಿರ್ದೇಶನ ಮಾಡಿದ್ದು, ಅಜಯ್​ ದೇವಗನ್ ಹಾಗೂ ರಣವೀರ್​ ಸಿಂಗ್​ ಕೂಡ ಅಭಿನಯಿಸಿದ್ದಾರೆ.

ಅಕ್ಷಯ್ ಕುಮಾರ್​ ನಟನೆಯ ‘ಬೆಲ್​ ಬಾಟಂ’ ಚಿತ್ರ ಕೂಡ ಬಿಡುಗಡೆಗೆ ಸಜ್ಜಾಗಿದೆ. ಅತರಂಗಿ ರೇ, ರಾಮ್​ ಸೇತು, ರಕ್ಷಾ ಬಂದನ್​, ಬಚ್ಚನ್​ ಪಾಂಡೆ ಸೇರಿದಂತೆ ಹಲವಾರು ಸಿನಿಮಾಗಳು ಅಕ್ಷಯ್​ ಕುಮಾರ್​ ಕೈಯಲ್ಲಿವೆ.

ಇದನ್ನೂ ಓದಿ:

ಬಾಲಿವುಡ್ ಪಾರ್ಟಿಗಳೆಂದರೆ ಅಕ್ಷಯ್​ ಕುಮಾರ್​​ಗೆ ಅಲರ್ಜಿ? ಇದರ ಹಿಂದಿದೆ ಇಂಟರೆಸ್ಟಿಂಗ್​ ವಿಚಾರ

Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್​ ಕುಮಾರ್​ ಪ್ರೀತಿಯ ಮಾತು; ವಿಡಿಯೋ ವೈರಲ್​ ಮಾಡಿದ ಕಮಾಲ್​ ಖಾನ್​

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು