Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್ ಕುಮಾರ್ ಪ್ರೀತಿಯ ಮಾತು; ವಿಡಿಯೋ ವೈರಲ್ ಮಾಡಿದ ಕಮಾಲ್ ಖಾನ್
Kamaal R Khan: ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅನೇಕರು ಅಕ್ಷಯ್ ಕುಮಾರ್ ಪರವಾಗಿ ಮಾತನಾಡಿದ್ದಾರೆ.
ರಾಷ್ಟ್ರೀಯತೆಯ ವಿಷಯ ಬಂದಾಗಲೆಲ್ಲ ನಟ ಅಕ್ಷಯ್ ಕುಮಾರ್ ಅವರನ್ನು ಅನುಮಾನದ ದೃಷ್ಟಿಯಲ್ಲಿ ನೋಡಲಾಗುತ್ತದೆ. ಅವರು ಕೆನಡಾ ಪೌರತ್ವ ಹೊಂದಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಆಗಾಗ ಜನರು ಟ್ರೋಲ್ ಮಾಡುತ್ತಾರೆ. ಅದರ ನಡುವೆ ಪಾಕಿಸ್ತಾನದ ಬಗ್ಗೆ ಅಕ್ಷಯ್ ಕುಮಾರ್ ಪ್ರೀತಿಯಿಂದ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಆಗಿರುವುದು ಬಾಲಿವುಡ್ನ ಕಿರಿಕ್ ನಟ, ನಿರ್ಮಾಪಕ ಕಮಾಲ್ ಆರ್ ಖಾನ್.
ಅಕ್ಷಯ್ ಕುಮಾರ್ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅದೇ ರೀತಿ ಪಾಕಿಸ್ತಾನದಲ್ಲೂ ಕೂಡ ಅವರ ಸಿನಿಮಾಗಳಿಗೆ ದೊಡ್ಡ ಪ್ರೇಕ್ಷಕ ವರ್ಗ ಇದೆ. ಉರಿ ಭಯೋತ್ಪಾದಕ ದಾಳಿ ಆದ ಬಳಿಕ ಭಾರತ ಮತ್ತು ಪಾಕ್ ನಡುವೆ ಮನರಂಜನಾ ಕ್ಷೇತ್ರದ ಕೊಡುಕೊಳ್ಳುವಿಕೆ ಕೂಡ ನಿಂತು ಹೋಯಿತು. ಭಾರತೀಯ ಸಿನಿಮಾಗಳಲ್ಲಿ ಪಾಕ್ನಲ್ಲಿ ರಿಲೀಸ್ ಮಾಡುತ್ತಿಲ್ಲ. ಪಾಕ್ ನಟರನ್ನು ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಆದರೆ ಹಲವು ವರ್ಷಗಳ ಹಿಂದೆ ಪರಿಸ್ಥಿತಿ ಹೀಗಿರಲಿಲ್ಲ.
ಅಕ್ಷಯ್ ಕುಮಾರ್ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿ ಒಳ್ಳೆಯ ಕಲೆಕ್ಷನ್ ಆಗುತ್ತಿತ್ತು. ಆ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ನೀಡಿದ್ದ ಒಂದು ವಿಡಿಯೋ ಸಂದರ್ಶನದ ತುಣುಕು ಈಗ ವೈರಲ್ ಆಗುತ್ತಿದೆ. ಅದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಕಮಾಲ್ ಆರ್. ಖಾನ್ ಶೇರ್ ಮಾಡಿಕೊಂಡಿದ್ದಾರೆ. ‘ಪಾಕಿಸ್ತಾನದಲ್ಲಿ ನನ್ನ ಸಿನಿಮಾಗಳು ಹೆಚ್ಚು ಬ್ಯುಸಿನೆಸ್ ಮಾಡುತ್ತವೆ. ಪಾಕಿಸ್ತಾನದಿಂದ ನನಗೆ ಸಿಗುವಷ್ಟು ಪ್ರೀತಿ ಬೇರೆಲ್ಲಿಂದ ಸಿಗುತ್ತದೆ’ ಎಂದು ಆ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಹೇಳಿದ್ದರು. ‘ನಮ್ಮ ದೇಶಭಕ್ತ ಕೆನಡಿಯನ್ ನಟ ಅಕ್ಕಿ ಅವರು ಪಾಕಿಸ್ತಾನದ ಬಗ್ಗೆ ಹೇಳಿದ ಮಾತು’ ಎಂಬ ವ್ಯಂಗ್ಯದ ಕ್ಯಾಪ್ಷನ್ನೊಂದಿಗೆ ಕಮಾಲ್ ಆರ್. ಖಾನ್ ಇದನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
Our Deshbhakt Canadian actor #Akki’s statement about Pakistan! ??? pic.twitter.com/drDqkM3ULp
— KRKBOXOFFICE (@KRKBoxOffice) June 17, 2021
ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಅನೇಕರು ಅಕ್ಷಯ್ ಕುಮಾರ್ ಪರವಾಗಿ ಮಾತನಾಡಿದ್ದಾರೆ. ತಮ್ಮ ಕೆಲಸ ಮತ್ತು ದೇಣಿಗೆಗಳ ಮೂಲಕ ಅಕ್ಷಯ್ ಕುಮಾರ್ ಅವರು ಭಾರತದ ಬಗ್ಗೆ ಇರುವ ದೇಶಭಕ್ತಿಯನ್ನು ಸಾಬೀತು ಮಾಡಿದ್ದಾರೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಕಳೆದ ವರ್ಷ ಕೊವಿಡ್ನಿಂದ ಲಾಕ್ಡೌನ್ ಆದಾಗ ಪಿಎಂ ಕೇರ್ಸ್ ಫಂಡ್ಗೆ ಅಕ್ಷಯ್ ಕುಮಾರ್ ಬರೋಬ್ಬರಿ 25 ಕೋಟಿ ರೂ. ದೇಣಿಗೆ ನೀಡಿದ್ದರು.
ಇದನ್ನೂ ಓದಿ:
ಸೈನಿಕರ ಜೊತೆ ಹಾಡಿ ಕುಣಿದು, ಶಾಲೆ ನಿರ್ಮಾಣಕ್ಕೆ ಒಂದು ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್ ಕುಮಾರ್
ಅಂಡರ್ಟೇಕರ್ ಜತೆ ಗುದ್ದಾಡಿದ್ದ ಅಕ್ಷಯ್ ಕುಮಾರ್? ಫೋಟೋ ಹಂಚಿಕೊಂಡ ನಟ