Dulquer Salmaan Birthday: ದುಲ್ಕರ್ ಸಲ್ಮಾನ್ ನಟಿಸಿರುವ ಈ ಚಿತ್ರಗಳನ್ನು ನೀವಿನ್ನೂ ನೋಡಿಲ್ಲವೇ? ಮಿಸ್ ಮಾಡಲೇಬೇಡಿ

Dqsalmaan: ಮಲಯಾಳಂನ ಖ್ಯಾತ ನಟ, ತಮ್ಮ ಚಿತ್ರಗಳಿಂದ ಭಾರತದಾದ್ಯಂತ ಗುರುತಿಸಿಕೊಂಡಿರುವ ದುಲ್ಕರ್ ಸಲ್ಮಾನ್ ಜನ್ಮದಿನವಿಂದು. ಅವರ ಮುಂದಿನ ಚಿತ್ರ ‘ಕುರುಪ್’ ಕನ್ನಡದಲ್ಲೂ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ಬಂದಿದೆ. ಅದೇನೇ ಇದ್ದರೂ, ತಮ್ಮ ಅಭಿನಯದಿಂದ ಮನೆ ಮಾತಾಗಿರುವ ಅವರ ಅತ್ಯುತ್ತಮ ಚಿತ್ರಗಳ ಪಟ್ಟಿ ಇಲ್ಲಿದೆ.

1/10
ದುಲ್ಕರ್ ಸಲ್ಮಾನ್ ನಟಿಸಿರುವ ಒಂದು ಚಲನಚಿತ್ರ ಏನೆಲ್ಲಾ ಹೊಸತನ್ನು ದೃಶ್ಯ ರೂಪಕವಾಗಿ ಉಣಬಡಿಸಬಹುದು ಎಂಬುದಕ್ಕೆ ‘ಚಾರ್ಲಿ’ ಅತ್ಯುತ್ತಮ ಉದಾಹರಣೆ. ಇದರಲ್ಲಿ ಚಾರ್ಲಿ/ ಜಿನ್ ಪಾತ್ರ ಮಾಡಿರುವ ದುಲ್ಕರ್​ಗೆ ಜೋಡಿಯಾಗಿ ಪಾರ್ವತಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ‘ಚುಂದರಿ ಪೆಣ್ಣೇ’ ಹಾಡನ್ನು ದುಲ್ಕರ್ ಸ್ವತಃ ಹಾಡಿದ್ದಾರೆ. ಬಾಕ್ಸ್ ಆಫೀಸ್​ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಈ ಚಿತ್ರಕ್ಕೆ ಸಿಗದಿದ್ದರೂ, ನಂತರದಲ್ಲಿ ಇದು ಸಿನಿ ಪ್ರೇಮಗಳ ಮನೆಮಾತಾಯಿತು. ಜೀವನ ಪ್ರೀತಿ ಉಳ್ಳವರ ಹೃದಯದ ಮಾತುಗಳನ್ನು ಈ ಚಿತ್ರ ತೆರೆದಿಡುತ್ತದೆ. ನೀವಿನ್ನೂ ನೋಡಿಲ್ಲವಾದರೆ ಮಿಸ್ ಮಾಡಲೇಬೇಡಿ.

2/10
ಮಣಿರತ್ನಂ ನಿರ್ದೇಶನದ ‘ಓಕೆ ಕಣ್ಮಣಿ’ ಚಿತ್ರ ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಂಡಿತ್ತು. ನಿತ್ಯಾ ಮೆನನ್, ಪ್ರಕಾಶ್ ರಾಜ್ ಮೊದಲಾದವರು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮಣಿರತ್ನಂ ನಿರ್ದೇಶನದ ವಿಭಿನ್ನ ಚಿತ್ರವಾಗಿ ಈ ಚಿತ್ರ ಗುರುತಿಸಿಕೊಂಡಿದ್ದು, ಅಪಾರ ಯಶಸ್ಸನ್ನೂ, ವಿಮರ್ಶಕರಿಂದ ಮೆಚ್ಚುಗೆಯನ್ನೂ ಪಡೆದಿತ್ತು.

3/10
‘ನೀಲಾಕಾಶಂ ಪಚ್ಚ ಕಡಲ್ ಚುವನ್ನಭೂಮಿ’ ಎಂಬ ಚಂದದ ಆದರೆ ದೊಡ್ಡ ಹೆಸರಿರುವ ಈ ಚಿತ್ರದ ಕತೆಯೂ ಇಡೀ ಭಾರತದ ಹರಹನ್ನು ಹೊಂದಿದೆ. ನೀಲಿ ಆಕಾಶ, ಹಸಿರು ಸಮುದ್ರ, ಕೆಂಪು ಭೂಮಿ ಎಂಬ ಹೆಸರಿಗೆ ತಕ್ಕಂತೆ ವಿವಿಧ ತಾಣಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರವು ಬೈಕ್​ನಲ್ಲಿ ಹಿಮಾಲಯಕ್ಕೆ ಹೊರಟ ಈರ್ವರ ಕತೆಯನ್ನು ಹೊಂದಿದೆ. ಕೊನೆಗೆ ಅವರ ಯಾತ್ರೆಯ ಮೂಲ ಉದ್ದೇಶ ಬದಲಾಗುತ್ತದೆ. ಅದು ಏಕೆ, ಹೇಗೆ, ನಂತರ ಅವರು ಎಲ್ಲಿಗೆ ಹೋಗುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೆ ನೀವು ಚಿತ್ರವನ್ನೇ ನೋಡಬೇಕು.

‘ಎನ್​ಪಿಸಿಬಿ’ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುವ ಈ ಚಿತ್ರವನ್ನು ಸಮೀರ್ ತಾಹಿರ್ ನಿರ್ದೇಶಿಸಿದ್ದಾರೆ.
4/10
‘100 ಡೇಸ್ ಆಫ್ ಲವ್’ ಈ ಚಿತ್ರ ಸಂಪೂರ್ಣವಾಗಿ ರೊಮ್ಯಾಂಟಿಕ ಮಾದರಿಯ ಚಿತ್ರ. ಅದ್ಭುತ ತಾಣಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ದುಲ್ಕರ್ ಜೊತೆಯಾಗಿ ನಿತ್ಯಾ ಮೆನನ್ ಕಾಣಿಸಿಕೊಂಡಿದ್ದಾರೆ. ಕತೆಯಲ್ಲಿ ಬಹಳ ಹೊಸತನವಿಲ್ಲದಿದ್ದರೂ ಚಿತ್ರ ತನ್ನ ನಿರೂಪಣೆಯಿಂದಾಗಿ, ಜೀವಂತಿಕೆಯಿಂದಾಗಿ ಗಮನ ಸೆಳೆಯುತ್ತದೆ.

2015ರಲ್ಲಿ ತೆರೆಕಂಡ ಈ ಚಿತ್ರವನ್ನು ಮೊಹಮ್ಮದ್ ಮಜೀದ್ ನಿರ್ದೇಶಿಸಿದ್ದಾರೆ.
5/10
ದುಲ್ಕರ್ ಸಲ್ಮಾನ್ ವೃತ್ತಿ ಜೀವನದಲ್ಲಿ ನಿರ್ವಹಿಸಿದ ಅತ್ಯಂತ ವಿಭಿನ್ನ ಪಾತ್ರ ಇದು ಎಂದರೆ ತಪ್ಪಾಗಲಿಕ್ಕಿಲ್ಲ. ಕೀರ್ತಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ, ಖ್ಯಾತ ನಟಿ ಸಾವಿತ್ರಿ ಅವರ ಜೀವನ ಚಿತ್ರದಲ್ಲಿ ದುಲ್ಕರ್ ಜೆಮಿನಿ ಗಣೇಶನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ಧಾರೆ.

ಭಾರತದಾದ್ಯಂತ ಅಪಾರ ಪ್ರಶಂಸೆಗೊಳಗಾದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ, ಸಮಂತಾ ಅಕ್ಕಿನೇನಿ, ನಾಗಚೈತನ್ಯ, ಪ್ರಕಾಶ್ ರಾಜ್ ಮೊದಲಾದ ತಾರೆಯರು ಬಣ್ಣ ಹಚ್ಚಿದ್ದಾರೆ.
6/10
ಇರ್ಫಾನ್ ಖಾನ್, ಮಿಥಿಲಾ ಪಾಲ್ಕರ್ ಜೊತೆಗೆ ದುಲ್ಕರ್ ಕಾಣಿಸಿಕೊಂಡಿರುವ ಈ ಚಿತ್ರದಿಂದ ದುಲ್ಕರ್ ಸಲ್ಮಾನ್ ಬಾಲಿವುಡ್ ಪ್ರವೇಶಿಸಿದರು. ತಮಾಶೆಯ ಕಥಾ ಹಂದರ ಹೊಂದಿದ್ದರೂ ಜೀವನದ ಪಾಠಗಳನ್ನು ಈ ಚಿತ್ರ ಬಲುಸುಂದರವಾಗಿ ತೆರೆದಿಡುತ್ತದೆ. ಇದರಲ್ಲಿ ಇರ್ಫಾನ್ ಖಾನ್ ಅಭಿನಯ ನೋಡಿದವರಿಗೆ ಇರ್ಫಾನ್ ಪಾತ್ರ ವೈವಿಧ್ಯತೆಯ ಮತ್ತೊಂದು ಪರಿಚಯವೂ ಆಗುತ್ತದೆ. ಆಧುನಿಕ ಬದುಕು, ಸಾಂಪ್ರದಾಯಿಕ ಬದುಕು ಈ ನಡುವಿನ ಗೊಂದಲಗಳು, ವೃತ್ತಿ- ಪ್ರವೃತ್ತಿ ಈ ಎರಡರ ಆಯ್ಕೆಗಳು ಇವುಗಳನ್ನು ತಮಾಶೆಯ ಧಾಟಿಯಲ್ಲೇ ಚಿತ್ರ ಚರ್ಚಿಸುತ್ತದೆ.

ಆಕರ್ಷ್ ಖುರಾನಾ ನಿರ್ದೇಶಿಸಿರುವ ‘ಕಾರವಾನ್’ ಚಿತ್ರ ಬಾಕ್ಸ್ ಆಫೀಸ್​ನಲ್ಲೂ ಸದ್ದು ಮಾಡಿತ್ತು. ಈ ಚಿತ್ರ 2018ರಲ್ಲಿ ಬಿಡುಗಡೆಯಾಗಿದ್ದು, ಇರ್ಫಾನ್ ಖಾನ್ ಅಭಿನಯದ ಕೊನೆಯ ಚಿತ್ರಗಳಲ್ಲೊಂದಾಗಿದೆ.
7/10
ಅಂಜಲಿ ಮೆನನ್ ಕತೆ ಬರೆದು, ಅನ್ವರ್ ರಶೀದ್ ನಿರ್ದೇಶಿಸಿರುವ ಉಸ್ತಾದ್ ಹೋಟೆಲ್ ಚಿತ್ರ

‘ಉಸ್ತಾದ್ ಹೋಟೆಲ್’ ಚಿತ್ರ ಅಜ್ಜ- ಮೊಮ್ಮಗನ ಅಡುಗೆ ಮಾಡುವ ಕುರಿತು ಇರುವ ಪ್ರೀತಿಯ ಕತೆ ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿ ಹೋಟೆಲ್ ಇದೆ, ಸಮುದ್ರವಿದೆ, ಬೆಕ್ಕಿದೆ- ಎಲ್ಲವೂ ಇಲ್ಲಿ ಒಂದೊಂದು ಪಾತ್ರಗಳು. ಈ ಚಿತ್ರದ ಪಾತ್ರಗಳೆಲ್ಲವೂ ತಮ್ಮದೇ ಒಂದೊಂದು ಕನಸನ್ನು ಕಾಣುವವರು. ಅದನ್ನು ಹೇಗೆ ಸಾಕಾರಗೊಳಿಸಬೇಕು ಎಂಬ ಯೋಚನೆಯಲ್ಲೇ ಬದುಕು ಸಾಗಿಸುವವರು. ಅವೆಲ್ಲಾ ಸಾಧ್ಯವಾಗುತ್ತವೆಯೇ? ಯಾರ ಕನಸ ಸಾಕಾರಕ್ಕಾಗಿ ಮತ್ಯಾರೋ ತಮ್ಮ ಕನಸನ್ನು ಬಲಿ ಕೊಡುತ್ತಾರಾ? ಉತ್ತರಕ್ಕೆ ಚಿತ್ರವನನ್ನೇ ನೋಡಿ. ಹಾ ಚಿತ್ರದಲ್ಲಿ ಗೋಪಿ ಸುಂದರ್ ನೀಡಿರುವ ಹಿನ್ನೆಲೆ ಸಂಗೀತ ಬಹಳ ಕಾಲ ಕಿವಿಯಲ್ಲಿ ಅನುರಣಿಸುತ್ತಿರುವುದರಲ್ಲಿ ಸಂದೇಹವಿಲ್ಲ.
8/10
ಬೆಂಗಳೂರು ಡೇಸ್ ಚಿತ್ರದ ಪೋಸ್ಟರ್
ಬೆಂಗಳೂರು ಡೇಸ್ ಚಿತ್ರದ ಪೋಸ್ಟರ್
‘ಬೆಂಗಳೂರು ಡೇಸ್’ ಚಿತ್ರವನ್ನು ಬಹುಶಃ ನೋಡದವರು ಕಡಿಮೆ. ಕರ್ನಾಟಕದಲ್ಲೂ ಅಷ್ಟು ಜನಪ್ರಿಯಗೊಂಡ ಖ್ಯಾತಿ ಈ ಚಿತ್ರದ್ದು. ಅಷ್ಟಕ್ಕೂ ಕತೆ ನಡೆಯುವುದು ನಮ್ಮ ಬೆಂಗಳೂರಿನಲ್ಲೇ ಅಲ್ಲವೇ. ಕೇರಳಿಗರು ಬೆಂಗಳೂರಿನ ಬದುಕನ್ನು ಹೇಗೆ ಒಂದು ಸುಂದರ ಕನಸಾಗಿ ಬಾಲ್ಯದಿಂದಲೂ ಕಾಪಿಟ್ಟು ಬಂದಿರುತ್ತಾರೆ, ಅದರ ಸಾಕಾರವನ್ನು ಹೇಗೆ ಸಾಧಿಸುತ್ತಾರೆ ಎಂಬ ಕತೆ ಈ ಚಿತ್ರದ್ದು. ಚಿತ್ರದಲ್ಲಿ ಏನುಂಟು; ಏನಿಲ್ಲ. ಒಬ್ಬ ಪ್ರೇಕ್ಷಕನಿಗೆ ಕನೆಕ್ಟ್ ಆಗುವ ಹಲವಾರು ಅಂಶಗಳು ಚಿತ್ರದಲ್ಲಿವೆ. ನಜ್ರಿಯಾ, ನಿವಿನ್ ಪೌಲಿ, ಪಾರ್ವತಿ ಮೊದಲಾದವರ ಅಭಿನಯ ಬಹಳ ಕಾಲ ನೆನಪಿನಲ್ಲುಳಿಯುತ್ತದೆ.
9/10
ದುಲ್ಕರ್ ಸಲ್ಮಾನ್, ವಿನಾಯಕನ್ ನಟಿಸಿರುವ ‘ಕಮ್ಮಟ್ಟಿಪಾದಮ್’

‘ಕಮ್ಮಟ್ಟಿಪಾದಮ್’ ಈ ಚಿತ್ರ ಕೇರಳದ ಸಣ್ಣ ಪಟ್ಟಣವೊಂದರ ಭೂಗತ ಜಗತ್ತಿನ ಕತೆ. ಭೂಗತ ಎಂದರೆ ಜನಜೀವನದಲ್ಲಿದ್ದುಕೊಂಡೇ ಸಹಜವಾಗಿ ಅಪರಾಧ ಪ್ರಕರಣಗಳಲ್ಲಿ ಹೇಗೆ ಭಾಗಿಯಾಗುತ್ತಾರೆ, ಅವರ ಜೀವನ ಹೇಗಿರುತ್ತದೆ ಎಂಬುದನ್ನೆಲ್ಲಾ ಒಂದು ಕಾದಂಬರಿಯಂತೆ ಚಿತ್ರಿಸಿರುವ ವಿಶೇಷ ಚಿತ್ರವಿದು. ದುಲ್ಕರ್ ಜೊತೆಗೆ ವಿನಾಯಕನ್ ಮುಖ್ಯ ಪಾತ್ರವನ್ನು ನಿಭಾಯಿಸಿದ್ದು, ಚಿತ್ರದಲ್ಲಿ ಹಲವು ಹೊಸ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ ನೋಡುಗನಿಗೂ ಯಾವುದೋ ಒಂದು ಪಟ್ಟಣದ ಕತೆಯೆಂದು ಅನ್ನಿಸದೇ ತಮ್ಮ ಸುತ್ತ ನಡೆಯುತ್ತಿರುವ ಕತೆಯಂತೆಯೇ ಚಿತ್ರ ಭಾಸವಾಗುತ್ತದೆ. ಇದರಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.
10/10
ನೆಟ್​ಫ್ಲಿಕ್ಸ್​ನಲ್ಲಿ ಲಭ್ಯವಿರುವ ‘ವರನೆ ಅವಶ್ಯಮುಂಡು’ ಚಿತ್ರ.

ಇತ್ತೀಚೆಗೆ ಬಿಡುಗಡೆಯಾದ ‘ವರನೆ ಅವಶ್ಯಮುಂಡು’ ಚಿತ್ರದಲ್ಲಿ ದುಲ್ಕರ್​ಗೆ ಜೊತೆಯಾಗಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದಾರೆ. ಬಹಳ ಕಾಲದ ನಂತರ ಸುರೇಶ್ ಗೋಪಿ ಹಾಗೂ ಶೋಬನಾ ನಟಿಸಿದ್ದು ಚಿತ್ರದ ಕತಾ ಹಂದರದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

Click on your DTH Provider to Add TV9 Kannada