Dulquer Salmaan Birthday: ದುಲ್ಕರ್ ಸಲ್ಮಾನ್ ನಟಿಸಿರುವ ಈ ಚಿತ್ರಗಳನ್ನು ನೀವಿನ್ನೂ ನೋಡಿಲ್ಲವೇ? ಮಿಸ್ ಮಾಡಲೇಬೇಡಿ
Dqsalmaan: ಮಲಯಾಳಂನ ಖ್ಯಾತ ನಟ, ತಮ್ಮ ಚಿತ್ರಗಳಿಂದ ಭಾರತದಾದ್ಯಂತ ಗುರುತಿಸಿಕೊಂಡಿರುವ ದುಲ್ಕರ್ ಸಲ್ಮಾನ್ ಜನ್ಮದಿನವಿಂದು. ಅವರ ಮುಂದಿನ ಚಿತ್ರ ‘ಕುರುಪ್’ ಕನ್ನಡದಲ್ಲೂ ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ಬಂದಿದೆ. ಅದೇನೇ ಇದ್ದರೂ, ತಮ್ಮ ಅಭಿನಯದಿಂದ ಮನೆ ಮಾತಾಗಿರುವ ಅವರ ಅತ್ಯುತ್ತಮ ಚಿತ್ರಗಳ ಪಟ್ಟಿ ಇಲ್ಲಿದೆ.
Updated on:Jul 28, 2021 | 12:49 PM

Dulquer Salmaan Career best performances and best movie list

Dulquer Salmaan Career best performances and best movie list

‘ಎನ್ಪಿಸಿಬಿ’ ಎಂದು ಸಂಕ್ಷಿಪ್ತವಾಗಿ ಕರೆಯಲ್ಪಡುವ ಈ ಚಿತ್ರವನ್ನು ಸಮೀರ್ ತಾಹಿರ್ ನಿರ್ದೇಶಿಸಿದ್ದಾರೆ.

2015ರಲ್ಲಿ ತೆರೆಕಂಡ ಈ ಚಿತ್ರವನ್ನು ಮೊಹಮ್ಮದ್ ಮಜೀದ್ ನಿರ್ದೇಶಿಸಿದ್ದಾರೆ.

ಭಾರತದಾದ್ಯಂತ ಅಪಾರ ಪ್ರಶಂಸೆಗೊಳಗಾದ ಈ ಚಿತ್ರದಲ್ಲಿ ವಿಜಯ್ ದೇವರಕೊಂಡ, ಸಮಂತಾ ಅಕ್ಕಿನೇನಿ, ನಾಗಚೈತನ್ಯ, ಪ್ರಕಾಶ್ ರಾಜ್ ಮೊದಲಾದ ತಾರೆಯರು ಬಣ್ಣ ಹಚ್ಚಿದ್ದಾರೆ.

ಆಕರ್ಷ್ ಖುರಾನಾ ನಿರ್ದೇಶಿಸಿರುವ ‘ಕಾರವಾನ್’ ಚಿತ್ರ ಬಾಕ್ಸ್ ಆಫೀಸ್ನಲ್ಲೂ ಸದ್ದು ಮಾಡಿತ್ತು. ಈ ಚಿತ್ರ 2018ರಲ್ಲಿ ಬಿಡುಗಡೆಯಾಗಿದ್ದು, ಇರ್ಫಾನ್ ಖಾನ್ ಅಭಿನಯದ ಕೊನೆಯ ಚಿತ್ರಗಳಲ್ಲೊಂದಾಗಿದೆ.

‘ಉಸ್ತಾದ್ ಹೋಟೆಲ್’ ಚಿತ್ರ ಅಜ್ಜ- ಮೊಮ್ಮಗನ ಅಡುಗೆ ಮಾಡುವ ಕುರಿತು ಇರುವ ಪ್ರೀತಿಯ ಕತೆ ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿ ಹೋಟೆಲ್ ಇದೆ, ಸಮುದ್ರವಿದೆ, ಬೆಕ್ಕಿದೆ- ಎಲ್ಲವೂ ಇಲ್ಲಿ ಒಂದೊಂದು ಪಾತ್ರಗಳು. ಈ ಚಿತ್ರದ ಪಾತ್ರಗಳೆಲ್ಲವೂ ತಮ್ಮದೇ ಒಂದೊಂದು ಕನಸನ್ನು ಕಾಣುವವರು. ಅದನ್ನು ಹೇಗೆ ಸಾಕಾರಗೊಳಿಸಬೇಕು ಎಂಬ ಯೋಚನೆಯಲ್ಲೇ ಬದುಕು ಸಾಗಿಸುವವರು. ಅವೆಲ್ಲಾ ಸಾಧ್ಯವಾಗುತ್ತವೆಯೇ? ಯಾರ ಕನಸ ಸಾಕಾರಕ್ಕಾಗಿ ಮತ್ಯಾರೋ ತಮ್ಮ ಕನಸನ್ನು ಬಲಿ ಕೊಡುತ್ತಾರಾ? ಉತ್ತರಕ್ಕೆ ಚಿತ್ರವನನ್ನೇ ನೋಡಿ. ಹಾ ಚಿತ್ರದಲ್ಲಿ ಗೋಪಿ ಸುಂದರ್ ನೀಡಿರುವ ಹಿನ್ನೆಲೆ ಸಂಗೀತ ಬಹಳ ಕಾಲ ಕಿವಿಯಲ್ಲಿ ಅನುರಣಿಸುತ್ತಿರುವುದರಲ್ಲಿ ಸಂದೇಹವಿಲ್ಲ.

‘ಬೆಂಗಳೂರು ಡೇಸ್’ ಚಿತ್ರವನ್ನು ಬಹುಶಃ ನೋಡದವರು ಕಡಿಮೆ. ಕರ್ನಾಟಕದಲ್ಲೂ ಅಷ್ಟು ಜನಪ್ರಿಯಗೊಂಡ ಖ್ಯಾತಿ ಈ ಚಿತ್ರದ್ದು. ಅಷ್ಟಕ್ಕೂ ಕತೆ ನಡೆಯುವುದು ನಮ್ಮ ಬೆಂಗಳೂರಿನಲ್ಲೇ ಅಲ್ಲವೇ. ಕೇರಳಿಗರು ಬೆಂಗಳೂರಿನ ಬದುಕನ್ನು ಹೇಗೆ ಒಂದು ಸುಂದರ ಕನಸಾಗಿ ಬಾಲ್ಯದಿಂದಲೂ ಕಾಪಿಟ್ಟು ಬಂದಿರುತ್ತಾರೆ, ಅದರ ಸಾಕಾರವನ್ನು ಹೇಗೆ ಸಾಧಿಸುತ್ತಾರೆ ಎಂಬ ಕತೆ ಈ ಚಿತ್ರದ್ದು. ಚಿತ್ರದಲ್ಲಿ ಏನುಂಟು; ಏನಿಲ್ಲ. ಒಬ್ಬ ಪ್ರೇಕ್ಷಕನಿಗೆ ಕನೆಕ್ಟ್ ಆಗುವ ಹಲವಾರು ಅಂಶಗಳು ಚಿತ್ರದಲ್ಲಿವೆ. ನಜ್ರಿಯಾ, ನಿವಿನ್ ಪೌಲಿ, ಪಾರ್ವತಿ ಮೊದಲಾದವರ ಅಭಿನಯ ಬಹಳ ಕಾಲ ನೆನಪಿನಲ್ಲುಳಿಯುತ್ತದೆ.

‘ಕಮ್ಮಟ್ಟಿಪಾದಮ್’ ಈ ಚಿತ್ರ ಕೇರಳದ ಸಣ್ಣ ಪಟ್ಟಣವೊಂದರ ಭೂಗತ ಜಗತ್ತಿನ ಕತೆ. ಭೂಗತ ಎಂದರೆ ಜನಜೀವನದಲ್ಲಿದ್ದುಕೊಂಡೇ ಸಹಜವಾಗಿ ಅಪರಾಧ ಪ್ರಕರಣಗಳಲ್ಲಿ ಹೇಗೆ ಭಾಗಿಯಾಗುತ್ತಾರೆ, ಅವರ ಜೀವನ ಹೇಗಿರುತ್ತದೆ ಎಂಬುದನ್ನೆಲ್ಲಾ ಒಂದು ಕಾದಂಬರಿಯಂತೆ ಚಿತ್ರಿಸಿರುವ ವಿಶೇಷ ಚಿತ್ರವಿದು. ದುಲ್ಕರ್ ಜೊತೆಗೆ ವಿನಾಯಕನ್ ಮುಖ್ಯ ಪಾತ್ರವನ್ನು ನಿಭಾಯಿಸಿದ್ದು, ಚಿತ್ರದಲ್ಲಿ ಹಲವು ಹೊಸ ಕಲಾವಿದರನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ ನೋಡುಗನಿಗೂ ಯಾವುದೋ ಒಂದು ಪಟ್ಟಣದ ಕತೆಯೆಂದು ಅನ್ನಿಸದೇ ತಮ್ಮ ಸುತ್ತ ನಡೆಯುತ್ತಿರುವ ಕತೆಯಂತೆಯೇ ಚಿತ್ರ ಭಾಸವಾಗುತ್ತದೆ. ಇದರಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಇತ್ತೀಚೆಗೆ ಬಿಡುಗಡೆಯಾದ ‘ವರನೆ ಅವಶ್ಯಮುಂಡು’ ಚಿತ್ರದಲ್ಲಿ ದುಲ್ಕರ್ಗೆ ಜೊತೆಯಾಗಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದಾರೆ. ಬಹಳ ಕಾಲದ ನಂತರ ಸುರೇಶ್ ಗೋಪಿ ಹಾಗೂ ಶೋಬನಾ ನಟಿಸಿದ್ದು ಚಿತ್ರದ ಕತಾ ಹಂದರದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
Published On - 11:57 am, Wed, 28 July 21




