ನನ್ನ ಕರೀಯರ್, ಬದುಕು ಮತ್ತು ವ್ಯವಹಾರವನ್ನು ಮಣ್ಣು ಪಾಲು ಮಾಡಿಬಿಟ್ಟೆ ಅಂತ ಕುಂದ್ರಾ ಮೇಲೆ ಕೂಗಾಡಿದರು ಶಿಲ್ಪಾ ಶೆಟ್ಟಿ

ಮನೆಯ ಮಹಜರ್ ನಡೆಸಲು ಪೊಲೀಸರು ಕುಂದ್ರಾನನ್ನು ಶಿಲ್ಪಾ ಶೆಟ್ಟಿಯ ಮನೆಗೆ ಕರೆದುಕೊಂಡು ಹೋದಾಗ ಜೈಲುವಾಸಿಯಾಗಿರುವ ಪತಿಯನ್ನು ನೋಡಿ ಅವರ ಅಂತಃಕರಣ ಉಕ್ಕಿದ್ದು ನಿಜವಾದರೂ ಆತ ಮಾಡಿದ ಕೆಲಸ ನೆನೆಸಿಕೊಂಡು ಸಿಟ್ಟು ಸಹ ಉಕ್ಕಿ ಬಂತು. ಭಾವೋದ್ವೇಗ ಮತ್ತು ಕೋಪ ಜೊತೆಗೂಡಿದಾಗ ನಿಯಂತ್ರಿಸಲಾಗದೆ ಅವರು ಜೋರಾಗಿ ಅಳಲಾರಂಭಿಸಿದರೆಂದು ಪೊಲೀಸ್​ ಮೂಲಗಳು ಹೇಳಿವೆ.

ಕಳೆದ ಕೆಲ ದಿನಗಳಿಂದ ನಮ್ಮ ಕನ್ನಡದ ಹುಡುಗಿ ಮತ್ತು ಬಾಲಿವುಡ್​ ಪ್ರಖ್ಯಾತ ನಟಿ ಶಿಲ್ಪಾ ಶೆಟ್ಟಿ ಅನುಭವಿಸುತ್ತಿರುವ ನೋವು, ಆವಮಾನ, ಹಿಂಸೆ ಕೇವಲ ಅವರಿಗಷ್ಟೇ ಗೊತ್ತು. ನಿರ್ಲಜ್ಜ ಪತಿ ರಾಜ್ ಕುಂದ್ರಾ ಮಾಡಿರುವ ಮಾನಗೇಡಿ ಕೆಲಸಕ್ಕೆ ಆಕೆ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಿಂದ ಆಚೆ ಬರಲಾರದೆ ಮಕ್ಕಳನ್ನು ಹಿಡಿದುಕೊಂಡು ದಿನವಿಡೀ ರೋದಿಸುವುದೇ ಆಕೆಯ ಕೆಲಸವಾಗಿದೆ. ಬೇಕಾದಷ್ಟು ಆಸ್ತಿ, ಹಣ, ವ್ಯಾಪಾರ-ವಹಿವಾಟಿನ ಜೊತೆಗೆ ಕೈ ತುಂಬಾ ಸಂಪಾದಿಸುವ ಸುಂದರ ಪತ್ನಿ ಇದ್ದರೂ ಹಲ್ಕಾ ಕೆಲಸ ಮಾಡುವ ಬುದ್ಧಿ ಕುಂದ್ರಾಗೆ ಯಾಕೆ ಹುಟ್ಟಿಕೊಂಡಿತೋ? ಅವರು ಮಾಡಿರುವ ಪಾಪದ ಕೃತ್ಯಗಳಿಗೆ ಈಗ ಹೆಂಡತಿ ಮತ್ತು ಮುಂದಿನ ದಿನಗಳಲ್ಲಿ ಮಕ್ಕಳು ಅನುಭವಿಸಬೇಕಿದೆ.

ಮನೆಯ ಮಹಜರ್ ನಡೆಸಲು ಪೊಲೀಸರು ಕುಂದ್ರಾನನ್ನು ಶಿಲ್ಪಾ ಶೆಟ್ಟಿಯ ಮನೆಗೆ ಕರೆದುಕೊಂಡು ಹೋದಾಗ ಜೈಲುವಾಸಿಯಾಗಿರುವ ಪತಿಯನ್ನು ನೋಡಿ ಅವರ ಅಂತಃಕರಣ ಉಕ್ಕಿದ್ದು ನಿಜವಾದರೂ ಆತ ಮಾಡಿದ ಕೆಲಸ ನೆನೆಸಿಕೊಂಡು ಸಿಟ್ಟು ಸಹ ಉಕ್ಕಿ ಬಂತು. ಭಾವೋದ್ವೇಗ ಮತ್ತು ಕೋಪ ಜೊತೆಗೂಡಿದಾಗ ನಿಯಂತ್ರಿಸಲಾಗದೆ ಅವರು ಜೋರಾಗಿ ಅಳಲಾರಂಭಿಸಿದರೆಂದು ಪೊಲೀಸ್​ ಮೂಲಗಳು ಹೇಳಿವೆ.

ಕೋಪದಿಂದ ಕುಂದ್ರಾ ಮೇಲೆ ಚೀರಾಡಿದ ಶಿಲ್ಪಾ, ‘ನಿನ್ನಿಂದಾಗಿ ಮಾನ-ಮರ್ಯಾದೆ ಎಲ್ಲ ಬೀದಿ ಪಾಲಾಯಿತು, ನಮ್ಮ ಕುಟುಂಬದ ಯಾವ ಸದಸ್ಯನೂ ತಲೆ ಎತ್ತಿ ತಿರುಗದಂತೆ ಆಗಿದೆ. ನನ್ನ ಎಂಡಾರ್ಸ್​ಮೆಂಟ್​ಗಳು, ಸಿನಿಮಾ, ಎಲ್ಲ ವ್ಯವಹಾರಗಳು ಮಣ್ಣು ಮುಕ್ಕಿವೆ, ನಿನಗೆ ಇಂಥ ಬುದ್ಧಿ ಯಾಕೆ ಬಂತು? ನನ್ನ ಖ್ಯಾತಿ, ಮಾನ ಮೂರು ಕಾಸಿಗೆ ಹರಾಜಾಗುತ್ತಿದೆ,’ ಎಂದು ಶಿಲ್ಪಾ ಕೂಗಾಡಿದರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Viral News: ಕೈಕಾಲುಗಳನ್ನು ವಿಸ್ತರಿಸುವ ಮೂಲಕ ಮಾನವರನ್ನು 5.6 ಇಂಚು ಎತ್ತರವಾಗಿಸಬಹುದು! ವಿಲಕ್ಷಣ ಹೇಳಿಕೆ ನೀಡಿ ವೈರಲ್​ ಆದ ವೈದ್ಯ

Click on your DTH Provider to Add TV9 Kannada