ಅಮೇರಿಕಾದ ಉಟಾಹ್ ರಾಜ್ಯದಲ್ಲಿ ಎದ್ದ ಮರಳು ಬಿರುಗಾಳಿಯಿಂದ ಸರಣಿ ಆಪಘಾತ, 8 ಬಲಿ
ರವಿವಾರದಂದು, ಅಮೇರಿಕಾದ ಉಟಾಹ್ ರಾಜ್ಯದ ಕಾನೋಶ್ ಹೆಸರಿನ ಪಟ್ಟಣದಲ್ಲಿ ಉಂಟಾದ ಮರಳು ಬಿರುಗಾಳಿಗೆ ಸರಣಿ ಅಪಘಾತ ಸಂಭವಿಸಿ 4 ಮಕ್ಕಳೂ ಸೇರಿದಂತೆ 8 ಜನರು ಬಲಿಯಾಗಿದ್ದಾರೆ. ರಸ್ತೆ ಮೇಲೆ ಹೋಗುತ್ತಿದ್ದ ವಾಹನಗಳು ಬಿರುಗಾಳಿಗೆ ಸಿಕ್ಕ ಕಾರಣ ಸರಣಿ ಆಪಘಾತ ನಡೆದಿದೆ ಎಂದು ಉಟಾಹ್ ಹೆದ್ದಾರಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮರಳುಗಾಡಿನಲ್ಲಿ ಏಳುವ ಬಿರುಗಾಳಿ ಅನಾಹುತಗಳನ್ನು ಸೃಷ್ಟಿಸುವುದು ನಮಗೆ ಗೊತ್ತು. ಕೊಲ್ಲಿ ರಾಷ್ಟ್ರಗಳಲ್ಲಿ ಇಂಥ ಬಿರುಗಾಳಿಗಳು ಸಾಮಾನ್ಯ. ಕೊಲ್ಲಿ ರಾಷ್ಟ್ರಗಳೇ ಅಂತಲ್ಲ, ಮರಳುಗಾಡು ಇರುವ ಭೂಭಾಗಗಳಲ್ಲಿ ಸ್ಯಾಂಡ್ಸ್ಟಾರ್ಮ್ಗಳು ಬೀಸುತ್ತವೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಾನಿಯನ್ನುಂಟು ಮಾಡುತ್ತವೆ. ರವಿವಾರದಂದು, ಅಮೇರಿಕಾದ ಉಟಾಹ್ ರಾಜ್ಯದ ಕಾನೋಶ್ ಹೆಸರಿನ ಪಟ್ಟಣದಲ್ಲಿ ಉಂಟಾದ ಮರಳು ಬಿರುಗಾಳಿಗೆ ಸರಣಿ ಅಪಘಾತ ಸಂಭವಿಸಿ 4 ಮಕ್ಕಳೂ ಸೇರಿದಂತೆ 8 ಜನರು ಬಲಿಯಾಗಿದ್ದಾರೆ. ರಸ್ತೆ ಮೇಲೆ ಹೋಗುತ್ತಿದ್ದ ವಾಹನಗಳು ಬಿರುಗಾಳಿಗೆ ಸಿಕ್ಕ ಕಾರಣ ಸರಣಿ ಆಪಘಾತ ನಡೆದಿದೆ ಎಂದು ಉಟಾಹ್ ಹೆದ್ದಾರಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅಪಘಾತಕ್ಕೀಡಾದ ವಾಹನಗಳು ಹೆದ್ದಾರಿ ಮೇಲೆ ಜಮಾಗೊಂಡಿದ್ದರಿಂದ ಕಾನೋಶ್ ಪಟ್ಟಣದ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿ ಬಹಳ ಸಮಯದವರೆಗೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಪೊಲೀಸ್ ಮೂಲಗಳ ಪ್ರಕಾರ ಈ ಘಟನೆಯಲ್ಲಿ 10 ಜನ ಗಾಯಗೊಂಡಿದ್ದು ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ. ರಸ್ತೆ ಮತ್ತು ಏರ್ ಅಂಬ್ಯುಲೆನ್ಸ್ಗಳ ಮೂಲಕ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಉಟಾಹ್ ರಾಜ್ಯದ ಗವರ್ನರ್ ಸ್ಪೆನ್ಸರ್ ಜೆ ಕೌ ಅವರು ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.
‘ಮಿಲ್ಲಾರ್ಡ್ ಕೌಂಟಿ ಬಳಿ ಸಂಭವಿಸಿರುವ ಭಯಂಕರವ ಅಪಘಾತಗಳಿಂದ ನಮಗೆ ಆಘಾತ ಮತ್ತು ದುಃಖವಾಗಿದೆ. ಅಪಘಾತದಲ್ಲಿ ಬಲಿಯಾದವರಿಗೆ ಉಟಾಹ್ ಜನತೆ ಕಂಬನಿ ಮಿಡಿಯುತ್ತಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ,’ ಎಂದು ಅವರು ಕೌ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Viral Video: ಸೀರೆಯುಟ್ಟು ರೈಲಿನ ಕಿಟಕಿಯಲ್ಲೇ ಒಳನುಗ್ಗಿದ ಮಹಿಳೆ!; ಎಮರ್ಜೆನ್ಸಿ ಎಂಟ್ರಿಯ ವಿಡಿಯೋ ವೈರಲ್