AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗೆ ಗುಡ್​ ಬೈ ಹೇಳಿದ ರಣಬೀರ್​; ಕಾರಣವೇನು?

ರಾಜ್​ಕುಮಾರ್​ ಹಿರಾನಿ ನಿರ್ದೇಶನದ ‘ಸಂಜು’ ಸಿನಿಮಾದಲ್ಲಿ ನಟಿಸಿದ್ದರು ರಣಬೀರ್​ ಕಪೂರ್​. 2018ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ನಟ ಸಂಜಯ್​ ದತ್​ ಪಾತ್ರದಲ್ಲಿ ರಣಬೀರ್ ಕಾಣಿಸಿಕೊಂಡಿದ್ದರು.

ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗೆ ಗುಡ್​ ಬೈ ಹೇಳಿದ ರಣಬೀರ್​; ಕಾರಣವೇನು?
ರಣಬೀರ್ ಕಪೂರ್
TV9 Web
| Edited By: |

Updated on: Jul 18, 2021 | 2:29 PM

Share

ನಟ ರಣಬೀರ್​ ಕಪೂರ್​ ಸದ್ಯ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ಪ್ರೇಯಸಿ ಆಲಿಯಾ ಭಟ್​ ಜತೆ ರಣಬೀರ್​ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇವರ ಕಾಂಬಿನೇಷನ್​ ನೋಡೋಕೆ ಅಭಿಮಾನಿಗಳು ತುದಿಗಾಲಿನಲ್ಲಿದ್ದಾರೆ. ಈ ಮಧ್ಯೆ ರಣಬೀರ್​ ಫ್ಯಾನ್ಸ್​ಗೆ ಕಹಿ ಸುದ್ದಿಯೊಂದು ಸಿಕ್ಕಿದೆ. 2019ರಲ್ಲಿ ಘೋಷಣೆ ಆದ ‘ಬೈಜು ಬವ್ರಾ’ ಸಿನಿಮಾದಿಂದ ರಣಬೀರ್​ ಹಿಂದೆ ಸರಿದಿದ್ದಾರಂತೆ. ಈ ಮೂಲಕ ಸಂಜಯ್​ ಲೀಲಾ ಬನ್ಸಾಲಿ ಸಿನಿಮಾಗೆ ರಣಬೀರ್​ ಗುಡ್​ಬೈ ಹೇಳಿದ್ದಾರೆ ಎನ್ನುವ ಮಾತು ಹರಿದಾಡಿದೆ.

ರಾಜ್​ಕುಮಾರ್​ ಹಿರಾನಿ ನಿರ್ದೇಶನದ ‘ಸಂಜು’ ಸಿನಿಮಾದಲ್ಲಿ ನಟಿಸಿದ್ದರು ರಣಬೀರ್​ ಕಪೂರ್​. 2018ರಲ್ಲಿ ತೆರೆಗೆ ಬಂದ ಈ ಚಿತ್ರದಲ್ಲಿ ನಟ ಸಂಜಯ್​ ದತ್​ ಪಾತ್ರದಲ್ಲಿ ರಣಬೀರ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಕಾರಣಕ್ಕೆ ರಣಬೀರ್​ ಸಿನಿಮಾ ಆಯ್ಕೆಯಲ್ಲಿ ತುಂಬಾನೇ ಎಚ್ಚರಿಕೆ ವಹಿಸುತ್ತಿದ್ದಾರೆ.

ಯಂಗ್​ ಮ್ಯೂಸೀಷಿಯನ್ ಬೈಜು ಬವ್ರಾ ಅವರ ಬಯೋಪಿಕ್​​ಗೆ​ ‘ಬೈಜು ಬವ್ರಾ’ ಎಂದು ಹೆಸರಿಡಲಾಗದೆ. ಈ ಚಿತ್ರದಲ್ಲಿ ರಣಬೀರ್​ ಹಾಗೂ ಸಂಜಯ್​ ದತ್​ ಒಟ್ಟಾಗಿ ಕೆಲಸ ಮಾಡಬೇಕಿತ್ತು. ಆದರೆ, ಸಿನಿಮಾದ ಸ್ಕ್ರಿಪ್ಟ್​ ರಣಬೀರ್​ಗೆ ಇಷ್ಟವಾಗಿಲ್ಲ. ಈ ಕಾರಣಕ್ಕೆ ಅವರು ಸಿನಿಮಾದಿಂದ ಹೊರಗುಳಿದಿದ್ದಾರೆ ಎನ್ನಲಾಗುತ್ತಿದೆ.

‘ರಣಬೀರ್​ ಕಪೂರ್​ ಅವರು ಸಂಜಯ್​ ಲೀಲಾ ಬನ್ಸಾಲಿ ಹಾಗೂ ಅವರ ಟೀಮ್​ ಬಗ್ಗೆ ಸಾಕಷ್ಟು ಕನ್​ಫ್ಯೂಷನ್​ ಹೊಂದಿದ್ದಾರೆ.  ಇದು ಪರಿಹಾರವಾಗದ ಕಾರಣ ಸಿನಿಮಾದಿಂದ ಹಿಂದೆ ಸರಿಯುವ ನಿರ್ಧಾರವನ್ನು ರಣಬೀರ್​ ತೆಗೆದುಕೊಂಡಿದ್ದಾರೆ ಎನ್ನುತ್ತಿವೆ ಮೂಲಗಳು.

ರಣಬೀರ್​ ಕಪೂರ್​ ಮೊದಲ ಸಿನಿಮಾ ‘ಸಾವರಿಯಾ’ಗೆ ಬನ್ಸಾಲಿ ನಿರ್ದೇಶನ ಮಾಡಿದ್ದರು. ಈ ಸಿನಿಮಾ ಹೇಳಿಕೊಳ್ಳುವಂತಹ ಹೆಸರು ಮಾಡಿರಲಿಲ್ಲ. ಈಗ ಮತ್ತೊಮ್ಮೆ ಇಬ್ಬರೂ ಒಂದಾಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ.

ಇನ್ನು, ಈ ಚಿತ್ರಕ್ಕೆ ನಟ ಕಾರ್ತಿಕ್​ ಆರ್ಯನ್​ ಅವರು ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಬನ್ಸಾಲಿ ಆಫೀಸ್​ಗೆ ಕಾರ್ತಿಕ್​ ಆರ್ಯನ್​ ಭೇಟಿ ಮಾಡಿದ್ದರು. ಇದು ಈ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಸದ್ಯ, ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ ಎನ್ನಲಾಗಿದೆ.

ಇದನ್ನೂ ಓದಿ: Sourav Ganguly Biopic: ಬಯೋಪಿಕ್​ಗೆ ​ಅನುಮತಿ ನೀಡಿದ ಸೌರವ್​ ಗಂಗೂಲಿ; ದಾದಾ ಪಾತ್ರಕ್ಕೆ ರಣಬೀರ್​ ಕಪೂರ್​?

ರಣಬೀರ್- ಆಲಿಯಾ ಡಿವೋರ್ಸ್?; ಮದುವೆ ಮುನ್ನವೇ ಶಾಕಿಂಗ್ ಭವಿಷ್ಯ ನುಡಿದ ಕಮಾಲ್ ಆರ್ ಖಾನ್

Follow Us
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ಗುರು ಪೂರ್ಣಿಮೆ 2026: ಸಾಯಿಬಾಬಾ ದರ್ಶನಕ್ಕೆ ಭಕ್ತ ಸಾಗರ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ದೆಹಲಿಗೆ ತೆರಳಿದ ಜಮೀರ್​; ರಾಹುಲ್ ಗಾಂಧಿ ಭೇಟಿ ಸಾಧ್ಯತೆ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ನೀರು ಬಿಡುವಂತೆ ಆದೇಶಿಸಿದ್ದು ಸರಿಯಲ್ಲ: ದರ್ಶನ ಪುಟ್ಟಣಯ್ಯ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಅನ್ನದಾತರ ಆಕ್ರೋಶ
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಕಾಣಿಕೆ ಸಂಗ್ರಹ!
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಕಾವೇರಿ ವಿವಾದ: ಮಂಡ್ಯದಲ್ಲಿ ರೈತರ ಆಕ್ರೋಶ, ರಾತ್ರಿ ಪಂಜಿನ ಪ್ರತಿಭಟನೆ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
‘ಅವರು ಭಯೋತ್ಪಾದಕರಾ?’; ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಗನ್ ದಾಳಿಗೆ ಪ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ವಿದ್ಯಾರ್ಥಿ ಪ್ರತಿಭಟನೆ ವೇಳೆ ಹಿಂಸಾಚಾರ; SIT ತನಿಖೆಗೆ ಸುಪ್ರೀಂ ಸೂಚನೆ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ