‘ಬಿಗ್ ಬಾಸ್‍ಗೆ ನಿಮ್ಮ ಸಹಾಯ ಬೇಕಾಗಿದೆ’ ಎಂದು ವೀಕ್ಷಕರ ಬಳಿ ಕೋರಿದ ಕಲರ್ಸ್ ಕನ್ನಡ ವಾಹಿನಿ
ಬಿಗ್ ಬಾಸ್ ಮನೆಯಲ್ಲಿ ಶುಭಾ ಒಮ್ಮೊಮ್ಮೆ ಚಿತ್ರ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ. ಅವರು ಇಡುವ ಡಿಮ್ಯಾಂಡ್ಗಳನ್ನು ಕೆಲವೊಮ್ಮೆ ಊಹಿಸಿಕೊಳ್ಳೋಕೂ ಸಾಧ್ಯವಾಗುವುದಿಲ್ಲ.
ಬಿಗ್ ಬಾಸ್ ಸೀಸನ್ 8ರಲ್ಲಿರುವ ಭಿನ್ನ ಸ್ಪರ್ಧಿ ಎಂದರೆ ಅದು ಶುಭಾ ಪೂಂಜಾ. ಸದಾ ಒಂದಿಲ್ಲೊಂದು ಕೀಟಲೆ ಮಾಡುತ್ತಾ ಕಾಲ ಕಳೆಯುತ್ತಾರೆ ಅವರು. ಅವರು ಬಿಗ್ ಬಾಸ್‍ಗೆ ಒಂದು ಸೀಕ್ರೆಟ್ ಹೇಳಿದ್ದಾರೆ. ಇದು ಬಿಗ್ ಬಾಸ್ಗೂ ಅರ್ಥವಾಗಿಲ್ಲ. ಹೀಗಾಗಿ, ಕಲರ್ಸ್ ಕನ್ನಡ ವಾಹಿನಿ ‘ಬಿಗ್ ಬಾಸ್‍ಗೆ ನಿಮ್ಮ ಸಹಾಯ ಬೇಕಾಗಿದೆ’ ಎಂದು ಪ್ರೋಮೋ ಒಂದನ್ನು ಹಂಚಿಕೊಂಡಿದೆ.
ಬಿಗ್ ಬಾಸ್ ಮನೆಯಲ್ಲಿ ಶುಭಾ ಒಮ್ಮೊಮ್ಮೆ ಚಿತ್ರ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ. ಅವರು ಇಡುವ ಡಿಮ್ಯಾಂಡ್ಗಳನ್ನು ಕೆಲವೊಮ್ಮೆ ಊಹಿಸಿಕೊಳ್ಳೋಕೂ ಸಾಧ್ಯವಾಗುವುದಿಲ್ಲ. ಈ ವಿಚಾರದ ಬಗ್ಗೆ ಸುದೀಪ್ ಕೂಡ ವೇದಿಕೆ ಮೇಲೆ ಸಾಕಷ್ಟು ಬಾರಿ ಮಾತನಾಡಿದ್ದರು. ‘ಶುಭಾ ಅವರೇ ನೀವಿಡುವ ಬೇಡಿಕೆ ಕೇಳಿ ಬಿಗ್ ಬಾಸ್ ಕಂಗಾಲಾಗಿದ್ದಾರೆ’ ಎಂದು ಅನೇಕ ಬಾರಿ ಹೇಳಿದ್ದರು. ಬಿಗ್ ಬಾಸ್ ಫಿನಾಲೆ ಸಮೀಪಿಸಿದೆ. ಆದಾಗ್ಯೂ ಶುಭಾ ತಮ್ಮ ಕೀಟಲೆ ನಿಲ್ಲಿಸಿಲ್ಲ.
ಕಲರ್ಸ್ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ‘ನಾನು ಬಿಗ್ ಬಾಸ್‍ಗೆ ಕೇಳಿದೀನಿ’ ಎಂದು ಹೇಳಿರುವ ಶುಭಾ ಚಿತ್ರವಿಚಿತ್ರವಾಗಿ ಮಾತನಾಡಿದ್ದಾರೆ. ‘ಇದರ ಅರ್ಥವನ್ನು ಸಂಜೆ ಐದು ಗಂಟೆ ಒಳಗೆ ಬಿಗ್ ಬಾಸ್ ಹೇಳಬೇಕು. ಹೇಳಿದ್ರೆ ಅವರಿಗೆ ಒಂದು ಪ್ರಶಸ್ತಿ ಕೊಡ್ತೀನಿ’ ಎಂದಿದ್ದಾರೆ ಶುಭಾ. ಇದನ್ನು ಕೇಳಿದ ದಿವ್ಯಾ ಚಕಿತಗೊಂಡಿದ್ದಾರೆ. ‘ಇಡೀ ವಿಶ್ವದಲ್ಲಿರುವ ಯಾರಿಗೂ ಇದರ ಅರ್ಥವನ್ನು ಹೇಳೋಕೆ ಸಾಧ್ಯವಿಲ್ಲ’ ಎಂದಿದ್ದಾರೆ. ‘ಬಿಗ್ ಬಾಸ್ ಇದಕ್ಕೆ ಉತ್ತರ ನೀಡಿಯೇ ನೀಡುತ್ತಾರೆ’ ಎಂದು ಶುಭಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
View this post on Instagram
ಶುಭಾ ಹೇಳಿದ್ದನ್ನು ಕೇಳಿದ ಮನೆ ಮಂದಿ ಹಾಗೂ ವೀಕ್ಷಕರು ತಲೆಕೆರೆದುಕೊಳ್ಳುತ್ತಿದ್ದಾರೆ. ಇದರ ಅರ್ಥವೇನು ಎಂಬುದು ನಮಗಂತೂ ತಿಳಿಯುತ್ತಿಲ್ಲ ಎಂದಿದ್ದಾರೆ. ಇನ್ನು, ಈ ಪ್ರೋಮೋಗೆ ‘ಬಿಗ್ ಬಾಸ್‍ಗೆ ನಿಮ್ಮ ಸಹಾಯ ಬೇಕಾಗಿದೆ’ ಎಂದು ಕ್ಯಾಪ್ಶನ್ ಕೊಟ್ಟಿರುವುದರಿಂದ ಬಿಗ್ ಬಾಸ್ಗೂ ಇದು ಅರ್ಥವಾಗಿಲ್ಲ ಅನ್ನೋದು ಸ್ಪಷ್ಟವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್ ಬ್ರೋ ಗೌಡ, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್ ಆಗಿ ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್ ಲಿಸ್ಟ್ನಲ್ಲಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯ ಪ್ರೇಮ್ ಕಹಾನಿಗಳು ನಿಜವೋ, ಸುಳ್ಳೋ? ಹೊರ ಬಿತ್ತು ಅಸಲಿ ಮಾಹಿತಿ