ಮಕ್ಕಳಂತೆ ವರ್ತಿಸಬೇಡಿ, ಅದು ಕ್ಯೂಟ್​ ಅಲ್ಲ, ಕಿರಿಕಿರಿ; ಶುಭಾಗೆ ಮನವಿ ಮಾಡಿದ ವೀಕ್ಷಕರು

ಶುಭಾ ಪೂಂಜಾ ಅವರು ಹೇಗೆ? ಅವರು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ವೀಕ್ಷಕರಿಗೆ ಗೊತ್ತಿರಲಿಲ್ಲ. ಅವರನ್ನು ಕೇವಲ ಸಿನಿಮಾದಲ್ಲಿ ನೋಡಿದವರಿಗೆ ಬಿಗ್​ ಬಾಸ್​ ಮನೆಯಲ್ಲಿ ಬೇರೆಯದೇ ಶುಭಾ ಪೂಂಜಾ ಪರಿಚಯವಾದರು.

ಮಕ್ಕಳಂತೆ ವರ್ತಿಸಬೇಡಿ, ಅದು ಕ್ಯೂಟ್​ ಅಲ್ಲ, ಕಿರಿಕಿರಿ; ಶುಭಾಗೆ ಮನವಿ ಮಾಡಿದ ವೀಕ್ಷಕರು
ಶುಭಾ ಫೂಂಜಾ
TV9kannada Web Team

| Edited By: Rajesh Duggumane

Jul 30, 2021 | 2:34 PM

ಶುಭಾ ಪೂಂಜಾ ಬಿಗ್​ ಬಾಸ್​ ಮನೆಯಲ್ಲಿ ಸಣ್ಣ ಮಗುವಿನಂತೆ ವರ್ತಿಸುತ್ತಿದ್ದಾರೆ. ಸಣ್ಣ ಮಕ್ಕಳ  ಧ್ವನಿಯಲ್ಲಿ ಮಾತನಾಡುತ್ತಾರೆ. ಅವರ ನಡೆ ಕೂಡ ಹಾಗೆಯೇ ಇದೆ. ಇದು ಅನೇಕರಿಗೆ ಕಿರಿಕಿರಿ ಉಂಟು ಮಾಡಿದೆ. ಸಾಕಷ್ಟು ಟ್ರೋಲ್​ ಪೇಜ್​ಗಳು ಈ ಬಗ್ಗೆ ಮೀಮ್​ಗಳನ್ನು ಮಾಡಿ ಹರಿದುಬಿಡುತ್ತಿವೆ. ಅಷ್ಟೇ ಅಲ್ಲ, ಮಕ್ಕಳಂತೆ ಆಡಬೇಡಿ, ಅದು ಕ್ಯೂಟ್​ ಅಲ್ಲ ಕಿರಿಕಿರಿ ಎಂದು ಮನವಿ ಮಾಡಿದ್ದಾರೆ.

ಶುಭಾ ಪೂಂಜಾ ಅವರು ಹೇಗೆ? ಅವರು ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ಎಂಬ ಬಗ್ಗೆ ವೀಕ್ಷಕರಿಗೆ ಗೊತ್ತಿರಲಿಲ್ಲ. ಅವರನ್ನು ಕೇವಲ ಸಿನಿಮಾದಲ್ಲಿ ನೋಡಿದವರಿಗೆ ಬಿಗ್​ ಬಾಸ್​ ಮನೆಯಲ್ಲಿ ಬೇರೆಯದೇ ಶುಭಾ ಪೂಂಜಾ ಪರಿಚಯವಾದರು. ಶುಭಾ ಈ ರೀತಿಯೂ ನಡೆದುಕೊಳ್ಳುತ್ತಾರಾ ಎಂದು ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಇನ್ನು, ಶುಭಾ ಪೂಂಜಾ ಬಗ್ಗೆ ನಾನು ತಪ್ಪು ತಿಳಿದುಕೊಂಡಿದ್ದೆ ಎಂದು ರಘು ಗೌಡ ಕ್ಷಮೆ ಕೇಳಿದ್ದರು. ಈ ಎಲ್ಲಾ ಬೆಳವಣಿಗೆ ಮಧ್ಯೆ ಶುಭಾ ಮಕ್ಕಳಂತೆ ವರ್ತಿಸೋದು ಹೆಚ್ಚಾಗಿದೆ.

ಬಿಗ್​ ಬಾಸ್​ ಫಿನಾಲೆಗೆ 10 ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ, ಬಿಗ್​ ಬಾಸ್​ ಮನೆಯಲ್ಲಿ ಯಾವುದೇ ಟಾಸ್ಕ್​ ನೀಡುತ್ತಿಲ್ಲ. ಲಕ್ಸುರಿ ಬಜೆಟ್​ ಪಡೆಯೋಕೆ ಒಂದೆರಡು ಟಾಸ್ಕ್​ ಬಿಟ್ಟು ಮತ್ತಿನ್ನೇನನ್ನೂ ಬಿಗ್​ ಬಾಸ್​ ನೀಡುತ್ತಿಲ್ಲ. ಹೀಗಾಗಿ, ಎಲ್ಲಾ ಸ್ಪರ್ಧಿಗಳಿಗೆ ಹೆಚ್ಚಿನ ಸಮಯ ಸಿಗುತ್ತಿದೆ. ಈ ಸಂದರ್ಭದಲ್ಲಿ ಶುಭಾ ಚಿಕ್ಕ ಮಕ್ಕಳಂತೆ ವರ್ತಿಸೋದು ಜಾಸ್ತಿ ಆಗಿದೆ.

ಮಂಜು ಪಾವಗಡಗೆ ಶುಭಾ ಹೆಚ್ಚೆಚ್ಚು ಹಿಂಸೆ ಕೊಡುತ್ತಿದ್ದಾರೆ. ಅರ್ಥವಾಗದ ಭಾಷೆಯಲ್ಲಿ ಅವರು ಮಾತನಾಡುತ್ತಿದ್ದಾರೆ. ಇದು ಒಂದು ವರ್ಗದ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಹೀಗಾಗಿ, ‘ದಯವಿಟ್ಟು ಮಕ್ಕಳಂತೆ ಆಡಬೇಡಿ’ ಎಂದು ಕೆಲವರು ಕೋರಿದ್ದಾರೆ. ಇನ್ನೂ ಕೆಲವರು ಶುಭಾ ಅವರನ್ನು ಬೆಂಬಲಿಸಿದ್ದಾರೆ. ‘ಇಷ್ಟೊಂದು ದಿನ ನಾಟಕ ಮಾಡಿಕೊಂಡು ಇರೋಕೆ ಸಾಧ್ಯವಿಲ್ಲ. ಅವರು ಇರೋದೇ ಹಾಗೆ’ ಎಂದು ಕೆಲವರು ಅಭಿಪ್ರಾಯ ಹೊರ ಹಾಕಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಇದನ್ನೂ ಓದಿ: ದಿವ್ಯಾ ಉರುಡುಗ-ಅರವಿಂದ್ ಒಡನಾಟದಿಂದ ಮನೆಯವರಿಗೆ ಕಿರಿಕಿರಿ; ಎಲ್ಲರೆದುರು ಅಸಮಾಧಾನ ಹೊರಹಾಕಿದ ಶುಭಾ

ಶಮಂತ್​ಗೆ ಬಿಗ್​ ಬಾಸ್​ ನೀಡಿದ್ರು ಸರ್​ಪ್ರೈಸ್​ ಗಿಫ್ಟ್​; ಭಾವುಕರಾದ ಬ್ರೋ ಗೌಡ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada