ಶಮಂತ್​ಗೆ ಬಿಗ್​ ಬಾಸ್​ ನೀಡಿದ್ರು ಸರ್​ಪ್ರೈಸ್​ ಗಿಫ್ಟ್​; ಭಾವುಕರಾದ ಬ್ರೋ ಗೌಡ

ಶಮಂತ್​ಗೆ ಬಿಗ್​ ಬಾಸ್​ ನೀಡಿದ್ರು ಸರ್​ಪ್ರೈಸ್​ ಗಿಫ್ಟ್​; ಭಾವುಕರಾದ ಬ್ರೋ ಗೌಡ
ಶಮಂತ್​ ಬ್ರೋ ಗೌಡ

ಅದೃಷ್ಟದ ಜತೆಗೆ ಶಮಂತ್​ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ಸಾಕಷ್ಟು ಹಾಡುಗಳನ್ನು ಬರೆದು ಅವರು ಹಾಡಿದ್ದಾರೆ.

TV9kannada Web Team

| Edited By: Madan Kumar

Jul 30, 2021 | 7:28 AM


‘ಬಿಗ್​ ಬಾಸ್​ ಸೀಸನ್​ 8’ ಮೊದಲ ಇನ್ನಿಂಗ್ಸ್​ನ ಎಲಿಮಿನೇಷನ್​ನಿಂದ ಅದೃಷ್ಟದ ರೀತಿಯಲ್ಲಿ ಪಾರಾಗಿದ್ದ ಶಮಂತ್​ ಬ್ರೋ ಗೌಡ ನಂತರ ಒಳ್ಳೆಯ ಮೈಲೇಜ್​ ಪಡೆದುಕೊಂಡರು. ಈಗ ಅವರು ಬಿಗ್​ ಬಾಸ್​ ಫಿನಾಲೆ ಹಂತ ತಲುಪಿದ್ದಾರೆ. ಫಿನಾಲೆಗೆ ಒಂದು ವಾರ ಮೊದಲು ಶಮಂತ್​ಗೆ ಸರ್​ಪ್ರೈಸ್​ ಸಿಕ್ಕಿದೆ. ಈ ಸರ್​ಪ್ರೈಸ್​ ನೋಡಿ ಶಮಂತ್​ ಭಾವುಕರಾದರು.

ಶಮಂತ್​ ಬ್ರೋ ಗೌಡ ಮನೆಯಲ್ಲಿ ಸತತ ಎರಡು ವಾರ ಕ್ಯಾಪ್ಟನ್​ ಆದರು. ಇದಕ್ಕೆ ಮನೆಯವರ ಬೆಂಬಲ ಕೂಡ ಇತ್ತು. ನಂತರ, ಶಮಂತ್​ಗೋಸ್ಕರ ಬೆಡ್​ ರೂಮ್​ ಬಿಟ್ಟುಕೊಡೋ ಸಮಯ ಬಂದಾಗ ಎಲ್ಲರೂ ಇದನ್ನು ಬೆಂಬಲಿಸಿ, ಲಿವಿಂಗ್​ ಏರಿಯಾದಲ್ಲಿ ಮಲಗಿದ್ದರು. ಇನ್ನು, ಅವರು ಬಿಗ್​ಬಾಸ್​ನಿಂದ ಎಲಿಮಿನೇಟ್​ ಆಗಿದ್ದರು. ಆದರೆ, ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಪಡೆದ ವೈಜಯಂತಿ ಅಡಿಗ ತಾವು ಬಿಗ್​ ಬಾಸ್​ ಮನೆಯಿಂದ ಹೊರ ಹೋಗುತ್ತೇವೆ ಎಂದು ಶಮಂತ್​ ಅವರನ್ನು ಸೇವ್​ ಮಾಡಿದ್ದರು. ಇದಾದ ನಂತರದಲ್ಲಿ ಶಮಂತ್​ ಲಕ್ಕಿ ಬಾಯ್​ ಎಂದೇ ಕರೆಯಲ್ಪಟ್ಟಿದ್ದರು.

ಅದೃಷ್ಟದ ಜತೆಗೆ ಶಮಂತ್​ ತಮ್ಮ ಸಾಮರ್ಥ್ಯ ಏನು ಎಂಬುದನ್ನು ತೋರಿಸಿದ್ದಾರೆ. ಸಾಕಷ್ಟು ಹಾಡುಗಳನ್ನು ಬರೆದು ಅವರು ಹಾಡಿದ್ದಾರೆ. ಶಮಂತ್​ ಬಿಗ್​ ಬಾಸ್​ ಮನೆ ಒಳಗೆ ಬರುವುದಕ್ಕೂ ಮೊದಲು ‘ಕಣ್ಣೊಳಗೆ..’ ವಿಡಿಯೋ ಸಾಂಗ್​ ನಿರ್ದೇಶನ ಮಾಡಿ ಹಾಡಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಜುಲೈ 29ರ ಎಪಿಸೋಡ್​ನಲ್ಲಿ ಬೆಳಗ್ಗೆಈ ಹಾಡು ಮೊಳಗಿದೆ. ಇದನ್ನು ಕೇಳಿ ಶಮಂತ್ ಸ್ವಲ್ಪ ಭಾವುಕರಾದಂತೆ ಕಂಡುಬಂತು.

ಆನಂದ್​ ಆಡಿಯೋ ಪಾಪ್ಯುಲರ್ ಯೂಟ್ಯೂಬ್​​ ಚಾನೆಲ್​ನಲ್ಲಿ ‘ಕಣ್ಣೊಳಗೆ..’ ಹಾಡು 2019ರಲ್ಲಿ ರಿಲೀಸ್​ ಆಗಿತ್ತು. ಈ ಹಾಡು ಇಲ್ಲಿವರೆಗೆ 10 ಲಕ್ಷ ವೀಕ್ಷಣೆ ಕಂಡಿದೆ. ಬಿಗ್​ ಬಾಸ್​ನಲ್ಲಿ ಶಮಂತ್​ ಈ ಹಾಡನ್ನು ಸಾಕಷ್ಟು ಬಾರಿ ಹಾಡಿದ್ದರು.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಿಂದ ಶಮಂತ್​ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ

Follow us on

Related Stories

Most Read Stories

Click on your DTH Provider to Add TV9 Kannada