ಹಗಲಿನಲ್ಲಿ ನಿದ್ದೆ ಮಾಡೋಕೆ ಮುಂದಾದ ಮಂಜು-ವೈಷ್ಣವಿಗೆ ಕಠಿಣ ಶಿಕ್ಷೆ; ಉಳಿದ ಸ್ಪರ್ಧಿಗಳಿಗೆ ಎಚ್ಚರಿಕೆ ಗಂಟೆ

ಜುಲೈ 30ರ ಎಪಿಸೋಡ್​ನಲ್ಲಿ ವೈಷ್ಣವಿ ಹಾಗೂ ಮಂಜು ಒಂದು ಕಡೆ ಕೂತಿದ್ದರು. ಅವರಿಗೆ ನಿದ್ದೆ ಬರುತ್ತಿದೆ ಅನ್ನೋದು ಅವರು ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಗೊತ್ತಾಗುತ್ತಿತ್ತು.

ಹಗಲಿನಲ್ಲಿ ನಿದ್ದೆ ಮಾಡೋಕೆ ಮುಂದಾದ ಮಂಜು-ವೈಷ್ಣವಿಗೆ ಕಠಿಣ ಶಿಕ್ಷೆ; ಉಳಿದ ಸ್ಪರ್ಧಿಗಳಿಗೆ ಎಚ್ಚರಿಕೆ ಗಂಟೆ
ವೈಷ್ಣವಿ -ಮಂಜು
TV9kannada Web Team

| Edited By: Madan Kumar

Jul 31, 2021 | 7:17 AM

ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಈ ವಾರ ಯಾವುದೇ ಟಾಸ್ಕ್​ ಇಲ್ಲದ ಕಾರಣ ಸ್ಪರ್ಧಿಗಳು ಮನೆಯಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ ಟಾಸ್ಕ್​ ಇಲ್ಲದ ಕಾರಣ ಸ್ಪರ್ಧಿಗಳು ಮನೆಯಲ್ಲಿ ಟೈಮ್​ ಪಾಸ್​ಗೆ ದಾರಿ ಸಿಗುತ್ತಿಲ್ಲ. ಹೀಗಾಗಿ, ಕೆಲ ಸ್ಪರ್ಧಿಗಳಿಗೆ ತೂಕಡಿಕೆ ಬರುತ್ತಿದೆ. ಮನೆಯಲ್ಲಿ ನಿದ್ದೆ ಮಾಡೋಕೆ ಹೋದ ವೈಷ್ಣವಿ ಹಾಗೂ ಮಂಜುಗೆ ಬಿಗ್​ ಬಾಸ್​ ಶಿಕ್ಷೆ ನೀಡಿದ್ದಾರೆ!

ಜುಲೈ 30ರ ಎಪಿಸೋಡ್​ನಲ್ಲಿ ವೈಷ್ಣವಿ ಹಾಗೂ ಮಂಜು ಒಂದು ಕಡೆ ಕೂತಿದ್ದರು. ಅವರಿಗೆ ನಿದ್ದೆ ಬರುತ್ತಿದೆ ಅನ್ನೋದು ಅವರು ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಗೊತ್ತಾಗುತ್ತಿತ್ತು. ಈ ವೇಳೆ ಬಿಗ್​ ಬಾಸ್​ ಕಡೆಯಿಂದ ಕರೆ ಬಂದಿದೆ. ಮಂಜು ಪಾವಗಡ ಹೋಗಿ ಕಾಲ್​ ಎತ್ತಿದ್ದಾರೆ.

‘ಮಂಜು ನಿಮಗೆ ನಿದ್ದೆ ಬರ್ತಿದೆಯಾ?’ ಎಂದು ಬಿಗ್​ ಬಾಸ್​ ಪ್ರಶ್ನೆ ಮಾಡಿದರು. ಇದಕ್ಕೆ ಹೌದು ಎನ್ನುವ ಉತ್ತರ ಮಂಜು ಕಡೆಯಿಂದ ಬಂತು. ಅಲ್ಲದೆ, ನಿದ್ರೆ ಮಾಡೋಕೆ ಏನಾದರೂ ಅವಕಾಶ ಕೊಡ್ತೀರಾ ಎಂದು ಬಿಗ್​ ಬಾಸ್​ಗೆ ಮಂಜು ಕೇಳಿದರು. ಆಗ ಬಿಗ್​ ಬಾಸ್​ ‘ಇಲ್ಲ, ನಿಮಗೊಂದು ಟಾಸ್ಕ್​ ಕೊಡ್ತೀವಿ, ನಿದ್ದೆ ಹೋಗಲಿದೆ’ ಎಂದರು.

ಅಂತೆಯೇ ಬಿಗ್​ ಬಾಸ್​ ಮಂಜು ಹಾಗೂ ವೈಷ್ಣವಿಗೆ ಟಾಸ್ಕ್​ ಒಂದನ್ನು ನೀಡಿದರು. ಇದರ ಪ್ರಕಾರ ಅಕ್ಕಿ ಹಾಗೂ ಜೀರಿಗೆ ಸೇರಿಕೊಂಡಿರುತ್ತದೆ. ಇದನ್ನು ಬೇರ್ಪಡಿಸಬೇಕು. ಇದನ್ನು ನೋಡಿ ಮಂಜು ಶಾಕ್​ ಆಗಿದ್ದಾರೆ. ‘ಬಿಗ್​ ಬಾಸ್​ ಯಾಕಿಷ್ಟು ಕಠಿಣ ಶಿಕ್ಷೆ ನೀಡಿದ್ದೀರ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು, ‘ನನಗೆ ನಿದ್ದೆಯಲ್ಲಿ, ಹೋಯಿತು. ಇನ್ನೂ ಯಾವಾಗೂ ಬರಲ್ಲ ಎಂದಿದ್ದಾರೆ’ ವೈಷ್ಣವಿ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಇದನ್ನೂ ಓದಿ:

ಶಮಂತ್​ಗೆ ಬಿಗ್​ ಬಾಸ್​ ನೀಡಿದ್ರು ಸರ್​ಪ್ರೈಸ್​ ಗಿಫ್ಟ್​; ಭಾವುಕರಾದ ಬ್ರೋ ಗೌಡ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada