AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿನಾಲೆ ಹಿಂದಿನ ವಾರದಲ್ಲಿ ಪ್ರಶಾಂತ್​ ಕಮ್​ಬ್ಯಾಕ್​; ಮಂಜು, ಅರವಿಂದ್​ ಹಿಂದಿಕ್ಕಿದ ಸಂಬರಗಿ

ಮನೆಯಲ್ಲಿ ಗುಂಪುಗಾರಿಕೆ ಇದೆ, ಅನ್ಯಾಯ ಇದೆ ಎಂದೆಲ್ಲ ಧ್ವನಿ ಎತ್ತಿದವರು ಪ್ರಶಾಂತ್​. ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರಿಂದ ಅವರಿಗೆ ಮನೆಯಲ್ಲಿ ಕೆಲವರು ಹೆದರಿದ್ದೂ ಇದೆ.

ಫಿನಾಲೆ ಹಿಂದಿನ ವಾರದಲ್ಲಿ ಪ್ರಶಾಂತ್​ ಕಮ್​ಬ್ಯಾಕ್​; ಮಂಜು, ಅರವಿಂದ್​ ಹಿಂದಿಕ್ಕಿದ ಸಂಬರಗಿ
ಅರವಿಂದ್​-ಪ್ರಶಾಂತ್​
TV9 Web
| Edited By: |

Updated on: Jul 31, 2021 | 3:33 PM

Share

ಬಿಗ್​ ಬಾಸ್​ ಮನೆ ಸೇರಿದ ನಂತರದಲ್ಲಿ ಪ್ರಶಾಂತ್​ ಸಂಬರಗಿ ಖ್ಯಾತಿ ತುಂಬಾನೇ ಹೆಚ್ಚಿದೆ. ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಿದ ಅವರು, ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಗುರುತಿಸಿಕೊಂಡರು. ಫಿನಾಲೆ ಸಮೀಪಿಸುತ್ತಿದ್ದಂತೆ ಪ್ರಶಾಂತ್ ಕಮ್​ಬ್ಯಾಕ್​ ಮಾಡಿದ್ದಾರೆ. ಅವರ ಆಟ ನೋಡಿ ನಿಜಕ್ಕೂ ವೀಕ್ಷಕರು ಅಚ್ಚರಿಗೊಂಡಿದ್ದಾರೆ.

ಮನೆಯಲ್ಲಿ ಗುಂಪುಗಾರಿಕೆ ಇದೆ, ಅನ್ಯಾಯ ಇದೆ ಎಂದೆಲ್ಲ ಧ್ವನಿ ಎತ್ತಿದವರು ಪ್ರಶಾಂತ್​. ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರಿಂದ ಅವರಿಗೆ ಮನೆಯಲ್ಲಿ ಕೆಲವರು ಹೆದರಿದ್ದೂ ಇದೆ. ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟ ಚಕ್ರವರ್ತಿ ಚಂದ್ರಚೂಡ್ ಜತೆ ಸೇರಿದ ನಂತರದಲ್ಲಿ ಪ್ರಶಾಂತ್​ ಸಂಬರಗಿ ಯೋಚನಾ ಲಹರಿ ಬದಲಾಯಿತು. ಸದಾ ಮನೆಯವರ ಬಗ್ಗೆ ಮಾತನಾಡಿಕೊಂಡು ಇಬ್ಬರೂ ಕಾಲ ಕಳೆಯುತ್ತಿದ್ದರು.

ಪ್ರಶಾಂತ್​ ಸಂಬರಗಿ ಮುಂದೊಂದು ಮಾತನಾಡುತ್ತಾರೆ, ಹಿಂದೊಂದು ರೀತಿ ನಡೆದುಕೊಳ್ಳುತ್ತಾರೆ ಅನ್ನೋದು ಎಲ್ಲರ ಆರೋಪವಾಗಿತ್ತು. ಈ ಬಗ್ಗೆ ಸುದೀಪ್​ ಅವರಿಂದಲೂ ಪ್ರಶಾಂತ್​ ಕಿವಿಮಾತು ಹೇಳಿಸಿಕೊಂಡಿದ್ದಾರೆ. ನಂತರದಲ್ಲಿ ಪ್ರಶಾಂತ್​ ಕೊಂಚ ಬದಲಾಗಿದ್ದಾರೆ. ಈ ವಾರ ಅವರ ಪ್ರದರ್ಶನ ಅದ್ಭುತವಾಗಿತ್ತು.

ಬಿಗ್​ ಬಾಸ್​ ಮನೆಯಲ್ಲಿ ಈ ವಾರ ವೈಯಕ್ತಿಕ ಟಾಸ್ಕ್​ಗಳನ್ನು ನೀಡಲಾಯಿತು. ಪ್ರಶಾಂತ್​ ಎಲ್ಲರಿಗೂ ಟಫ್​ ಕಾಂಪಿಟೇಷನ್​ ನೀಡಿದರು. ಕಳೆದ ವಾರದ ಟಾಸ್ಕ್​ನಲ್ಲಿ ಪ್ರಶಾಂತ್​ ಸಾಕಷ್ಟು ಬಾರಿ ಎಡವಿದ್ದರು. ಇದಕ್ಕೆ ಅವರು ದೇಹ ಸಹಕರಿಸುತ್ತಿಲ್ಲ ಎನ್ನುವ ಕಾರಣ ನೀಡಿದ್ದರು. ಆದರೆ, ಈ ಬಾರಿ ಅವರು ದೊಡ್ಡ ಮಟ್ಟದಲ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ.

ಪ್ರತಿ ವಾರ ಅತ್ಯುತ್ತಮ ಹಾಗೂ ಕಳಪೆ ಯಾರು ಎಂಬುದನ್ನು ಸ್ಪರ್ಧಿಗಳು ನಿರ್ಧರಿಸುತ್ತಾರೆ. ಈ ವೇಳೆ ಪ್ರಶಾಂತ್​ ಅವರಿಗೆ ಅತ್ಯುತ್ತಮ ಕಿರೀಟ ಸಿಕ್ಕಿದೆ. ಅಚ್ಚರಿ ಎಂದರೆ, ಕಳೆದ ವಾರ ಟಾಸ್ಕ್​ ಅತ್ಯುತ್ತಮವಾಗಿ ಆಡಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಕಳಪೆ ನೀಡಲಾಗಿತ್ತು. ಅದರ ಮರುವಾರವೇ ಟಾಸ್ಕ್​ಗಳನ್ನು ಅತ್ಯುತ್ತಮವಾಗಿ ಆಡಿ ಪ್ರಶಾಂತ್​ ಅತ್ಯುತ್ತಮ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕೊನೆಯ ವಾರದಲ್ಲಿ ಮಂಜು ಪಾವಗಡ ಹಾಗೂ ಅರವಿಂದ್ ಅವರನ್ನೂ ಪ್ರಶಾಂತ್​ ಹಿಂದಿಕ್ಕಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಆಗಸ್ಟ್​ 8ರಂದು ಫಿನಾಲೆ ನಡೆಯುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿರುವ ಎಂಟು ಸ್ಪರ್ಧಿಗಳ ಪೈಕಿ ಹೊರ ಹೋಗುವ ಆ ಮೂವರು ಯಾರು?

Follow Us
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ