ಬಿಗ್​ ಬಾಸ್​ ಮನೆಯಲ್ಲಿರುವ ಎಂಟು ಸ್ಪರ್ಧಿಗಳ ಪೈಕಿ ಹೊರ ಹೋಗುವ ಆ ಮೂವರು ಯಾರು?

Bigg Boss Kannada 8 Elimination: ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿರುವ ಎಂಟು ಸ್ಪರ್ಧಿಗಳ ಪೈಕಿ ಹೊರ ಹೋಗುವ ಆ ಮೂವರು ಯಾರು?
ಸುದೀಪ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 31, 2021 | 2:37 PM

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಹಂತ ತಲುಪಿದೆ. ಮುಂದಿನ ವಾರ ಗ್ರ್ಯಾಂಡ್​ ಫಿನಾಲೆ ನಡೆಯಲಿದೆ. ಕಿಚ್ಚ ಸುದೀಪ್​ ಅವರು ಒಬ್ಬರನ್ನು ವಿಜೇತರೆಂದು ಘೋಷಿಸಿದರೆ, ಮತ್ತೊಬ್ಬರು ರನ್ನರ್​ ಅಪ್​ ಆಗಲಿದ್ದಾರೆ. ಅದಕ್ಕೂ ಮೊದಲು ಅಂದರೆ ಈ ವಾರ ಕೆಲವರು ಎಲಿಮಿನೇಟ್​ ಆಗಲಿದ್ದಾರೆ. ಅವರು ಯಾರು ಅನ್ನೋ ಕುತೂಹಲ ವೀಕ್ಷಕರಲ್ಲಿ ಕಾಡುತ್ತಿದೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿದ್ದರಿಂದ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಬಿಗ್​ ಬಾಸ್​ ಫಿನಾಲೆ ವಾರದಲ್ಲಿ ಐವರು ಉಳಿದುಕೊಳ್ಳುತ್ತಾರೆ. ಇದು ಬಿಗ್​ ಬಾಸ್​ ಸಂಪ್ರದಾಯ. ಅಂದರೆ, ಫಿನಾಲೆ ಬರುವುದರೊಳಗೆ ಬಿಗ್​ ಬಾಸ್​ ಮನೆಯಿಂದ ಮೂವರು ಎಲಿಮಿನೇಷನ್​ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಆ ಮೂವರು ಸ್ಪರ್ಧಿಗಳು ಯಾರು ಅನ್ನೋದು ಸದ್ಯದ ಕುತೂಹಲ.

ಮಂಜು ಪಾವಗಡ, ಅರವಿಂದ್​ ಕೆ.ಪಿ. ಹಾಗೂ ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಸ್ಟ್ರಾಂಗ್​ ಕಂಟೆಸ್ಟೆಂಟ್ಸ್​​ ಎನಿಸಿಕೊಂಡಿದ್ದಾರೆ. ಇವರು ಫಿನಾಲೆ ವೀಕ್​ನಲ್ಲಿ ಉಳಿಯೋದು ಬಹುತೇಕ ಖಚಿತ. ಟಾಸ್ಕ್​ ವಿಚಾರಕ್ಕಿರಲಿ ಅಥವಾ ಮನೆಯಲ್ಲಿ ಹೊಂದಿಕೊಂಡು ಹೋಗುವ ವಿಚಾರದಲ್ಲಿರಲಿ ಈ ಮೂವರು ಮುಂದಿರುತ್ತಾರೆ.

ಇನ್ನು ದಿವ್ಯಾ ಉರುಡುಗ ಕೂಡ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಇವರು ಕೂಡ ಸ್ಟ್ರಾಂಗ್​ ಎನಿಸಿಕೊಂಡಿದ್ದಾರೆ. ಅರವಿಂದ್​ ಹಾಗೂ ದಿವ್ಯಾ ಕೆಮಿಸ್ಟ್ರಿ ಎಲ್ಲರಿಗೂ ಇಷ್ಟವಾಗಿದೆ. ಈ ಕಾರಣಕ್ಕೆ ದಿವ್ಯಾ ಪ್ರಮುಖ ಎನಿಸಿಕೊಂಡಿದ್ದಾರೆ. ಈ ವಾರ ಕ್ಯಾಪ್ಟನ್​ ಕೂಡ ಆಗಿರುವುದರಿಂದ ಟಾಪ್​ 5ನಲ್ಲಿ ದಿವ್ಯಾ ಕಾಣಿಸಿಕೊಂಡರೂ ಅಚ್ಚರಿ ಇಲ್ಲ.

ಇನ್ನು ಐದನೇ ಸ್ಥಾನಕ್ಕೆ ಯಾರು ಅನ್ನೋದು ಸದ್ಯದ ಕುತೂಹಲ. ಶುಭಾ, ಪ್ರಶಾಂತ್​, ಶಮಂತ್​ ಹಾಗೂ ದಿವ್ಯಾ ಸುರೇಶ್ ಈ ನಾಲ್ವರ ನಡುವೆ ಟಫ್​ ಕಾಂಪಿಟೇಷನ್​ ಇದೆ. ಫಿನಾಲೆಗೂ ಮೊದಲು ಈ ನಾಲ್ವರಲ್ಲಿ ಮೂವರು ಹೊರಹೋಗಬಹುದು ಎಂಬುದು ವೀಕ್ಷಕರ ಲೆಕ್ಕಾಚಾರ.

ಇದನ್ನೂ ಓದಿ: ಹಗಲಿನಲ್ಲಿ ನಿದ್ದೆ ಮಾಡೋಕೆ ಮುಂದಾದ ಮಂಜು-ವೈಷ್ಣವಿಗೆ ಕಠಿಣ ಶಿಕ್ಷೆ; ಉಳಿದ ಸ್ಪರ್ಧಿಗಳಿಗೆ ಎಚ್ಚರಿಕೆ ಗಂಟೆ

ಶಮಂತ್​ಗೆ ಬಿಗ್​ ಬಾಸ್​ ನೀಡಿದ್ರು ಸರ್​ಪ್ರೈಸ್​ ಗಿಫ್ಟ್​; ಭಾವುಕರಾದ ಬ್ರೋ ಗೌಡ

Published On - 2:36 pm, Sat, 31 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ