CBSE 10th Results 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗುವುದಿಲ್ಲ; ಹೊಸ ದಿನಾಂಕ, ಸಮಯದ ಮಾಹಿತಿ ಇಲ್ಲಿದೆ

CBSE 10th Result Date, Time: ಸಿಬಿಎಸ್​ಇ 10ನೇ ತರಗತಿ ಫಲಿತಾಂಶವನ್ನು ಇಂದು ಪ್ರಕಟ ಮಾಡುತ್ತಿಲ್ಲ. ಈ ವಾರದೊಳಗೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಸಿಬಿಎಸ್​ಇ ಮಂಡಳಿ ವಕ್ತಾರ ರಾಮ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ.

CBSE 10th Results 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗುವುದಿಲ್ಲ; ಹೊಸ ದಿನಾಂಕ, ಸಮಯದ  ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Aug 02, 2021 | 12:48 PM

ಬೆಂಗಳೂರು: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿ ಪರೀಕ್ಷೆಯ ಫಲಿತಾಂಶ ಇಂದೇ ಪ್ರಕಟವಾಗಲಿದೆ ಎನ್ನಲಾಗಿತ್ತು. ಈಗಾಗಲೇ ಸಿಬಿಎಸ್​ಇ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಇಂದು 1ನೇ ತರಗತಿಯ ಪರೀಕ್ಷಾ ಫಲಿತಾಂಶ ಕೂಡ ಪ್ರಕಟವಾಗಲಿದೆ ಎನ್ನಲಾಗಿತ್ತು. ಆದರೆ, ಇಂದು 10ನೇ ತರಗತಿ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಸಿಬಿಎಸ್​ಇ ಬೋರ್ಡ್​ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹಾಗಾದರೆ, ಸಿಬಿಎಸ್​ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಯಾವಾಗ ಪ್ರಕಟವಾಗಲಿದೆ? ಇಲ್ಲಿದೆ ಮಾಹಿತಿ…

ಸಿಬಿಎಸ್​ಇ 10ನೇ ತರಗತಿ ಫಲಿತಾಂಶವನ್ನು ಇಂದು ಪ್ರಕಟ ಮಾಡುತ್ತಿಲ್ಲ. ಈ ವಾರದೊಳಗೆ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಸಿಬಿಎಸ್​ಇ ಮಂಡಳಿ ವಕ್ತಾರ ರಾಮ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. ಈ ಮೂಲಕ ತಮ್ಮ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಸಿಬಿಎಸ್​ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮತ್ತೆ ನಿರಾಸೆಯಾಗಿದೆ.

ಸಿಬಿಎಸ್​ಇ ಬೋರ್ಡ್​ 10ನೇ ತಗರತಿ ಫಲಿತಾಂಶದ ದಿನಾಂಕ, ಸಮಯದ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ, ಈ ವಾರದೊಳಗೆ ಪ್ರಕಟವಾಗಲಿದೆ ಎಂದು ತಿಳಿಸಿದೆ. ಈಗಾಗಿ, ಫಲಿತಾಂಶ ಪ್ರಕಟವಾದ ಕೂಡಲೆ ರಿಸಲ್ಟ್ ವೀಕ್ಷಿಸಲು ಹೀಗೆ ಮಾಡಿ…

ಸಿಬಿಎಸ್​ಇ 10ನೇ ತರಗತಿ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಲು cbseresults.nic.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ಹಾಗೇ, cbse.gov.in ಮತ್ತು cbse.nic.in ವೆಬ್​ಸೈಟ್​ನಲ್ಲಿ ಕೂಡ ಫಲಿತಾಂಶದ ಬಗ್ಗೆ ಮಾಹಿತಿ ಪಡೆಯಬಹುದು. ಜುಲೈ 31ರೊಳಗೆ ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ ಎನ್ನಲಾಗಿದ್ದು, ದಿನಾಂಕ ಹಾಗೂ ಸಮಯವನ್ನು ಇನ್ನೂ ಖಚಿತಗೊಳಿಸಿಲ್ಲ.

ಈಗಾಗಲೇ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಪ್ರತಿವರ್ಷ ಸಾಮಾನ್ಯವಾಗ 12ನೇ ತರಗತಿ ಫಲಿತಾಂಶ ಪ್ರಕಟವಾದ ಒಂದೆರಡು ದಿನಗಳ ನಂತರ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತಿತ್ತ್ತು. ಈ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಿಬಿಎಸ್​ಇ 10ನೇ ತರಗತಿಗೆ ಯಾವುದೇ ಪರೀಕ್ಷೆಗಳನ್ನೂ ನಡೆಸಿಲ್ಲ. ಪರೀಕ್ಷೆ ನಡೆಸದೆ ಫಲಿತಾಂಶ ನೀಡುವುದರಿಂದ 10ನೇ ತರಗತಿ ಪರೀಕ್ಷೆಯ ಫಲಿತಾಂಶ ಈಗಾಗಲೇ ಪ್ರಕಟವಾಗಬೇಕಿತ್ತು. ಆದರೆ, ಇನ್ನೂ ಪ್ರಕಟವಾಗಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ವಿದ್ಯಾರ್ಥಿಗಳು ಮೇಲೆ ನಮೂದಿಸಲ್ಪಟ್ಟ ವೆಬ್​ಸೈಟ್​ಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.

ಸಿಬಿಎಸ್​ಇ 10ನೇ ತರಗತಿಯ ಪರೀಕ್ಷೆ ಫಲಿತಾಂಶವನ್ನು ಆನ್​​ಲೈನ್​ನಲ್ಲಿ ಬಿಡುಗಡೆ ಮಾಡುವ ಜೊತೆಗೆ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ, ವಿದ್ಯಾರ್ಥಿಗಳ ಅಂಕಪಟ್ಟಿ (Mark Sheet)ಯನ್ನು ಡಿಜಿಲಾಕರ್​ (Digilocker)ನಲ್ಲೂ ಪ್ರಕಟಿಸಲಿದೆ. ಇಲ್ಲಿ ಫಲಿತಾಂಶವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ರೋಲ್ ​ನಂಬರ್​ ಅಗತ್ಯವಿರುವುದಿಲ್ಲ. ಆಧಾರ್​ ಕಾರ್ಡ್​ ನಂಬರ್​ ಮತ್ತು ಫೋನ್​ ನಂಬರ್​ ನಮೂದಿಸಿ ತಮ್ಮ ಫಲಿತಾಂಶ ನೋಡಬಹುದಾಗಿದೆ. ಹಾಗೇ, ಎಸ್​ಎಂಎಸ್ ಮೂಲಕವೂ ಪರೀಕ್ಷಾ ಫಲಿತಾಂಶವನ್ನು ತಿಳಿದುಕೊಳ್ಳಬಹುದು.

ಈ ವರ್ಷದ ದೇಶಾದ್ಯಂತ 18 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್​ಇ ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಗ್ರೇಡ್ ಮಾದರಿಯಲ್ಲಿ ಫಲಿತಾಂಶ ನೀಡಲಾಗುವುದು. ಸಿಬಿಎಸ್​ಇ 10ನೇ ತಗರತಿ ಫಲಿತಾಂಶವನ್ನು ನೋಡಲು ಅಧಿಕೃತ ವೆಬ್​ಸೈಟ್ cbse.gov.inಗೆ ಭೇಟಿ ನೀಡಬೇಕು. ಅದಕ್ಕೂ ಮೊದಲು ನಿಮ್ಮ ರೋಲ್ ನಂಬರ್ ಅನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ವೆಬ್​ಸೈಟ್ ಓಪನ್ ಮಾಡಿದಾಗ ಅಲ್ಲಿ ರೋಲ್​ ನಂಬರ್ ಫೈಂಡರ್ (Roll Number Finder) ಎಂಬ ಆಯ್ಕೆ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ಮುಂದುವರೆಸು (Continue) ಎಂದು ಇರುತ್ತದೆ. ಅಲ್ಲಿ 10ನೇ ತರಗತಿ ಎಂದು ಆಯ್ಕೆ ಮಾಡಿ, ಎಲ್ಲ ವಿವರಗಳನ್ನು ಭರ್ತಿ ಮಾಡಿದರೆ ಸರ್ಚ್ ಡೇಟಾ (Search Data) ಮೇಲೆ ಕ್ಲಿಕ್ ಮಾಡಿದರೆ ರೋಲ್ ನಂಬರ್ ಸಿಗುತ್ತದೆ. ಆ ರೋಲ್ ನಂಬರ್ ಅನ್ನು ನಮೂದಿಸಿ ನಿಮ್ಮ ಫಲಿತಾಂಶದ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: CBSE 10th Result 2021: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಆಗಸ್ಟ್​ 2ಕ್ಕೆ ಘೋಷಣೆ ಸಾಧ್ಯತೆ; ಇಲ್ಲಿದೆ ನೋಡಿ ಮಾಹಿತಿ

CBSE Class 12 Result 2021: ಸಿಬಿಎಸ್​ಇ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ

(CBSE 10th Exam Results 2021 Date, Time Updates CBSE Class 10th Board Result will not Releasing Today)

Published On - 12:38 pm, Mon, 2 August 21