CBSE 10th Result 2021: ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಆಗಸ್ಟ್ 2ಕ್ಕೆ ಘೋಷಣೆ ಸಾಧ್ಯತೆ; ಇಲ್ಲಿದೆ ನೋಡಿ ಮಾಹಿತಿ
ಕೊವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಿಲ್ಲ. ಬದಲಾಗಿ ಆಂತರಿಕ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತಿದೆ.
ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಘೋಷಣೆಯಾಗಿದ್ದು, ಇನ್ನು ಸಿಬಿಎಸ್ಇ 10ನೇ ತರಗತಿ ಫಲಿತಾಂಶ (CBSE 10th Result) ಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಆಗಸ್ಟ್ 2ರಂದು ಅಂದರೆ ನಾಳೆಯೇ ಪ್ರಕಟಿಸಲಿದೆ ಎನ್ನಲಾಗಿದೆ. ಹಾಗೊಮ್ಮೆ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ನಾಳೆ ಪ್ರಕಟವಾದರೆ ವಿದ್ಯಾರ್ಥಿಗಳು cbseresults.nic.in ಮತ್ತು cbse.gov.in. ವೆಬ್ಸೈಟ್ಗಳ ಮೂಲಕವೇ ತಮ್ಮ ಅಂಕವನ್ನು ನೋಡಬಹುದಾಗಿದೆ. ಶುಕ್ರವಾರ ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು, ಈ ವೇಳೆ ಮಾತನಾಡಿದ್ದ ಪರೀಕ್ಷೆಗಳ ಕಂಟ್ರೋಲರ್ ಸನ್ಯಂ ಭಾರದ್ವಾಜ್, 10ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಮುಂದಿನವಾರ ಪ್ರಕಟಿಸಲಾಗುವುದು ಎಂದಿದ್ದರು. ಇದೀಗ ಬಂದಿರುವ ಮಾಹಿತಿ ಪ್ರಕಾರ ನಾಳೆಯೇ ರಿಸಲ್ಟ್ ಬರಲಿದೆ.
ಕೊವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಸಿಬಿಎಸ್ಇ 10 ಮತ್ತು 12ನೇ ತರಗತಿಗಳ ಪರೀಕ್ಷೆಗಳನ್ನು ನಡೆಸಿಲ್ಲ. ಬದಲಾಗಿ ಆಂತರಿಕ ಮೌಲ್ಯಮಾಪನದ ಮೂಲಕ ವಿದ್ಯಾರ್ಥಿಗಳಿಗೆ ಅಂಕ ನೀಡಲಾಗುತ್ತಿದೆ. ಈಗ ನೀಡುವ ಫಲಿತಾಂಶದಿಂದ ತೃಪ್ತಿಯಾಗದಿದ್ದರೆ ವಿದ್ಯಾರ್ಥಿಗಳ ಎದುರು ಒಂದು ದಾರಿಯಿದೆ. ಕೊವಿಡ್ 19 ಸಂದರ್ಭ ಸಾಮಾನ್ಯ ಸ್ಥಿತಿಗೆ ಮರಳಿದ ಮೇಲೆ ನಡೆಸಲಾಗುವ ಪರೀಕ್ಷೆಗಳಿಗೆ ಹಾಜರಾಗಲು ತಮ್ಮ ಶಾಲೆಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನೀವು ಈ ವಿಧಾನಗಳನ್ನು ಅನುಸರಿಸುವ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.. 1. cbseresults.nic.in ಅಥವಾ cbse.nic.in ವೆಬ್ಸೈಟ್ಗೆ ಭೇಟಿ ನೀಡಿ 2. ಅದರಲ್ಲಿ ಪರೀಕ್ಷಾ ಫಲಿತಾಂಶ ಎಂದಿರುವಲ್ಲಿ ಕ್ಲಿಕ್ ಮಾಡಿ..ನಿಮ್ಮ ರೋಲ್ ನಂಬರ್, ಹುಟ್ಟಿದ ದಿನದ ವಿವರಗಳನ್ನು ಸಲ್ಲಿಸಿ 3. ಅದೆಲ್ಲ ಆದ ಬಳಿಕ ನಿಮ್ಮ ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು ವೀಕ್ಷಿಸಬಹುದು. 4. ಸ್ಕ್ರೀನ್ ಮೇಲೆ ಕಾಣುವ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಂಡು, ಪ್ರಿಂಟ್ ತೆಗೆದುಕೊಳ್ಳಿ.
ಇದನ್ನೂ ಓದಿ: ಟಿವಿ9 ಕನ್ನಡ ಫಲಶ್ರುತಿ: ಪುಸ್ತಕ, ಆಟಿಕೆ ಸಾಮಗ್ರಿ ಕಳೆದುಕೊಂಡಿದ್ದ ಬಾಲಕಿಯ ಕಣ್ಣಿರಿಗೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ
CBSE 10th Result 2021 Date And Time check here to know more information
Published On - 6:27 pm, Sun, 1 August 21