CBSE Class 10 Result 2021: ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಪ್ರಕಟ; ಆನ್ಲೈನ್ ಮೂಲಕ ರಿಸಲ್ಟ್ ನೋಡಲು ಹೀಗೆ ಮಾಡಿ..
ಸಿಬಿಎಸ್ಸಿ ಫಲಿತಾಂಶ 2021: ಈ ಬಾರಿ ಕೊವಿಡ್ 19 ಕಾರಣದಿಂದ ಸಿಬಿಎಸ್ಇ ಪರೀಕ್ಷೆಯೇ ಇಲ್ಲದೆ ಕಾರಣ ಫಲಿತಾಂಶಕ್ಕೆ ಸಂಬಂಧಪಟ್ಟು ಗೊಂದಲಗಳು ಎದ್ದಿದ್ದವು. ಅಷ್ಟೇ ಅಲ್ಲ, ಫಲಿತಾಂಶದ ದಿನಾಂಕ ಕೂಡ ಪದೇಪದೆ ಮುಂದೂಡಲ್ಪಟ್ಟಿತ್ತು.
ಸಿಬಿಎಸ್ಇ 10ನೇ ತರಗತಿ ಫಲಿತಾಂಶ (CBSE Class 10 Result 2021) ಪ್ರಕಟವಾಗಿದೆ. ನಿನ್ನೆ ಆಗಸ್ಟ್ 2ರಂದೇ ಪ್ರಕಟವಾಗಲಿದೆ ಎಂದು ಹೇಳಲಾಗಿತ್ತು. ಆದರೆ ಮುಂದೂಡಲ್ಪಟ್ಟಿತ್ತು. ಇಂದು ಮಧ್ಯಾಹ್ನ 12 ಗಂಟೆ ಹೊತ್ತಿಗೆ 10ನೇ ತರಗತಿ ಫಲಿತಾಂಶ (CBSE Class 10 Result 2021) ಪ್ರಕಟಿಸುವುದಾಗಿ ಸಿಬಿಎಸ್ಇ(CBSE) ತನ್ನ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಅಪ್ಡೇಟ್ ಮಾಡಿತ್ತು. ಹಾಗೇ, ಇಂದು ಸುಮಾರು 20 ಲಕ್ಷ ವಿದ್ಯಾರ್ಥಿಗಳು ತಮ್ಮ ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು ಪಡೆದಿದ್ದಾರೆ. ಹಾಗೇ, ಈ ಫಲಿತಾಂಶವನ್ನು ಆನ್ಲೈನ್ ಮೂಲಕವೇ ವೀಕ್ಷಿಸಬಹುದಾಗಿದೆ. ಸಿಬಿಎಸ್ಇಯ ವೆಬ್ಸೈಟ್ಗಳು, ಆ್ಯಪ್ಗಳು, ಡಿಜಿಲಾಕರ್ ಮೂಲಕ ವಿದ್ಯಾರ್ಥಿಗಳಿಗೆ ರಿಸಲ್ಟ್ ನೋಡುವ ಅವಕಾಶ ಕಲ್ಪಿಸಲಾಗಿದೆ.
ಸಿಬಿಎಸ್ಇ 10ನೇ ತರಗತಿ ಫಲಿತಾಂಶ(CBSE Class 10 Result 2021)ವನ್ನು http://cbseresults.nic.in ವೆಬ್ಸೈಟ್ ಮೂಲಕ ವೀಕ್ಷಿಸುವ ವಿಧಾನ ಇಲ್ಲಿದೆ..ನೋಡಿ
1. ಮೊದಲು cbseresults.nic.in ವೆಬ್ಸೈಟ್ಗೆ ಭೇಟಿ ನೀಡಿ 2. ಅಲ್ಲಿ ಕಾಣಿಸುವ CBSE Class 10 ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. 3. ನಂತರ ನಿಮ್ಮ ರಿಜಿಸ್ಟರ್ ನಂಬರ್ ಮತ್ತು ರೋಲ್ನಂಬರ್ ಸೇರಿ, ಉಳಿದೆಲ್ಲ ವಿವರಗಳನ್ನೂ ದಾಖಲಿಸಿ ಲಾಗಿನ್ ಆಗಿ. 4. ಆಗ ಸ್ಕ್ರೀನ್ ಮೇಲೆ ನಿಮ್ಮ ಸಿಬಿಎಸ್ಇ 10ನೇ ತರಗತಿ ಫಲಿತಾಂಶ ಕಾಣಿಸುತ್ತದೆ 5. ಆ ಮಾರ್ಕ್ಶೀಟ್ನ್ನು ಡೌನ್ಲೋಡ್ ಮಾಡಿಕೊಳ್ಳಿ. ಪ್ರಿಂಟ್ ಕೂಡ ತೆಗೆದುಕೊಳ್ಳಿ
ಇದೇ ವಿಧಾನದಲ್ಲಿ cbse.nic.in ಮೂಲಕವೂ ನಿಮ್ಮ ರಿಸಲ್ಟ್ ನೋಡಬಹುದಾಗಿದೆ.
ಡಿಜಿಲಾಕರ್ ಆ್ಯಪ್ ಮೂಲಕ ಫಲಿತಾಂಶ ವೀಕ್ಷಣೆ ಹೇಗೆ? ಇಲ್ಲಿದೆ ನೋಡಿ.. 1. ಡಿಜಿಲಾಕರ್ (DigiLocker) ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ 2. Access DigiLocker ಎಂದಿರುವಲ್ಲಿ ಕ್ಲಿಕ್ ಮಾಡಿ 3. ನಂತರ ಅಲ್ಲಿ ನಿಮ್ಮ ಹೆಸರು ನಮೂದಿಸಬೇಕು. ಆಧಾರ್ ಕಾರ್ಡ್ನಲ್ಲಿ ಹೇಗೆ ಹೆಸರು ಇದೆಯೋ, ಹಾಗೇ ನಮೂದಿಸಬೇಕು. 4. ಅದಾದ ಬಳಿಕ ಆಧಾರ್ಕಾರ್ಡ್ನಲ್ಲಿರುವಂತೆ, ನಿಮ್ಮ ಹುಟ್ಟಿದ ದಿನ, ಇಸ್ವಿ ನಮೂದಿಸಿ 5. ಪುರುಷ/ಮಹಿಳೆ..ಎಂಬಿರುವಲ್ಲಿ ನಿಮ್ಮ ಜಂಡರ್ ಯಾವುದೆಂದು ಆಯ್ಕೆ ಮಾಡಿ 6. ನಿಮ್ಮ ಮೊಬೈಲ್ ನಂಬರ್ ನಮೂದಿಸಿ 7. ಒಂದು ಸೆಕ್ಯೂರಿಟಿ ಪಿನ್ ಸೆಟ್ ಮಾಡಿಕೊಳ್ಳಿ 8. ಆಧಾರ್ ನಂಬರ್, ಇಮೇಲ್ ಐಡಿಗಳನ್ನೆಲ್ಲ ನಮೂದಿಸಿ, ಸಬ್ಮಿಟ್ ಮಾಡಿ. 9. ಅದಾದ ಬಳಿಕ ಯೂಸರ್ ನೇಮ್ ಸೆಟ್ ಮಾಡಿಕೊಳ್ಳಿ. ಇಷ್ಟಾದ ಬಳಿಕ ನೀವು ಸುಲಭವಾಗಿ ನಿಮ್ಮ ರಿಸಲ್ಟ್ ಪಡೆಯಬಹುದು.
ಈ ಬಾರಿ ಕೊವಿಡ್ 19 ಕಾರಣದಿಂದ ಸಿಬಿಎಸ್ಇ ಪರೀಕ್ಷೆಯೇ ಇಲ್ಲದೆ ಕಾರಣ ಫಲಿತಾಂಶಕ್ಕೆ ಸಂಬಂಧಪಟ್ಟು ಗೊಂದಲಗಳು ಎದ್ದಿದ್ದವು. ಅಷ್ಟೇ ಅಲ್ಲ, ಫಲಿತಾಂಶದ ದಿನಾಂಕ ಕೂಡ ಪದೇಪದೆ ಮುಂದೂಡಲ್ಪಟ್ಟಿತ್ತು. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಜು.20ರಂದು ಫಲಿತಾಂಶವನ್ನು ಬಿಡುಗಡೆ ಮಾಡಬೇಕಿತ್ತು. ಆದರೆ ಈ ಬಾರಿ ಆಂತರಿಕ ಮೌಲ್ಯಮಾಪನದ ಆಧಾರದಲ್ಲಿ ಅಂಕ ಕೊಡುವ ಕಾರಣ, ಶಾಲೆಗಳಿಂದ ಅಂಕಗಳು ತಲುಪುವುದು ವಿಳಂಬವಾಯಿತು. ಈ ಮಧ್ಯೆ ಸಿಬಿಎಸ್ಇ 12ನೇ ತರಗತಿ ಫಲಿತಾಂಶವನ್ನು ಜು.31ರೊಳಗೆ ನೀಡಬೇಕು ಎಂದು ಸುಪ್ರೀಂಕೋರ್ಟ್ ಗಡುವು ನೀಡಿದ್ದರಿಂದ, ಶುಕ್ರವಾರ ಅದನ್ನು ಪ್ರಕಟಿಸಿ, 10ನೇ ತರಗತಿ ಫಲಿತಾಂಶವನ್ನು ಮತ್ತೆ ಮುಂದೂಡಲಾಗಿತ್ತು.
ಇದನ್ನೂ ಓದಿ: ತಣ್ಣೀರು ತರಲು ಚಿತಾಗಾರಕ್ಕೆ ಹೋದ 7 ವರ್ಷದ ಬಾಲಕಿ; ಮುಂದಾಗಿದ್ದೆಲ್ಲ ಊಹಿಸಲಾರದಷ್ಟು ಭೀಕರ
ಒಂದೇ ಸಿನಿಮಾ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್-ಜಾನ್ ಅಬ್ರಾಹಂ; ಮಲಯಾಳಂ ಚಿತ್ರಕ್ಕೆ ಸ್ಟಾರ್ ನಟರು ಫಿದಾ
Published On - 12:01 pm, Tue, 3 August 21