ಒಂದೇ ಸಿನಿಮಾ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​-ಜಾನ್​ ಅಬ್ರಾಹಂ; ಮಲಯಾಳಂ ಚಿತ್ರಕ್ಕೆ ಸ್ಟಾರ್​ ನಟರು ಫಿದಾ

ಮಲಯಾಳಂ ಸೂಪರ್​ ಹಿಟ್​ ಚಿತ್ರವನ್ನು ರಿಮೇಕ್​ ಮಾಡಲು ಅಲ್ಲು ಅರ್ಜುನ್​ ಹಾಗೂ ಜಾನ್​ ಅಬ್ರಾಹಂ ಮುಗಿಬಿದ್ದಿದ್ದಾರೆ. ಇಬ್ಬರೂ ಬೇರೆ ಬೇರೆ ಭಾಷೆಯಲ್ಲಿ ರಿಮೇಕ್​ ಮಾಡಲು ಪ್ಲ್ಯಾನ್​ ಮಾಡಿಕೊಂಡಿದ್ದಾರೆ.

ಒಂದೇ ಸಿನಿಮಾ ಮೇಲೆ ಕಣ್ಣಿಟ್ಟ ಅಲ್ಲು ಅರ್ಜುನ್​-ಜಾನ್​ ಅಬ್ರಾಹಂ; ಮಲಯಾಳಂ ಚಿತ್ರಕ್ಕೆ ಸ್ಟಾರ್​ ನಟರು ಫಿದಾ
ಅಲ್ಲು ಅರ್ಜುನ್, ಜಾನ್ ಅಬ್ರಾಹಂ
Follow us
TV9 Web
| Updated By: ಮದನ್​ ಕುಮಾರ್​

Updated on:Aug 03, 2021 | 11:39 AM

ವಿಭಿನ್ನ ಸಿನಿಮಾಗಳನ್ನು ಮಾಡುವ ಮೂಲಕ ಮಲಯಾಳಂ ಚಿತ್ರರಂಗ ಬೆಳೆಯುತ್ತಿದೆ. ಸಿಂಪಲ್​ ಆದ ಮೇಕಿಂಗ್​, ಸಣ್ಣ ಬಜೆಟ್​ನಲ್ಲಿಯೇ ಅದ್ಭುತವಾದ ಚಿತ್ರಗಳನ್ನು ಕಟ್ಟಿಕೊಡುವಲ್ಲಿ ಮಾಲಿವುಡ್​ ನಿರ್ದೇಶಕರು ಯಶಸ್ವಿ ಆಗುತ್ತಿದ್ದಾರೆ. ಮಲಯಾಳಂನಲ್ಲಿ ಸೂಪರ್​ ಹಿಟ್​ ಆದ ಸಿನಿಮಾಗಳು ಬೇರೆ ಭಾಷೆಗಳಿಗೆ ರಿಮೇಕ್​ (Remake) ಆಗುವ ಮೂಲಕ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುತ್ತಿವೆ. ಅಂಥ ಒಂದು ಚಿತ್ರದ ಮೇಲೆ ಅಲ್ಲು ಅರ್ಜುನ್​ (Allu Arjun) ಮತ್ತು ಜಾನ್​ ಅಬ್ರಾಹಂ (John Abraham) ಕಣ್ಣಿಟ್ಟಿದ್ದಾರೆ. ಯಾವುದು ಆ ಚಿತ್ರ? ನಾಯಟ್ಟು! 

ಪೊಲೀಸ್​ ಇಲಾಖೆಗೆ ಸಂಬಂಧಿಸಿದ ರೋಚಕ ಕಥೆಯನ್ನು ಹೊಂದಿರುವ ‘ನಾಯಟ್ಟು’ ಚಿತ್ರ ಈ ವರ್ಷ ಏಪ್ರಿಲ್​ನಲ್ಲಿ ಬಿಡುಗಡೆ ಆಗಿತ್ತು. ರಾಜಕೀಯ ಪಿತೂರಿಯ ಕಾರಣದಿಂದ ಪೊಲೀಸ್​ ಇಲಾಖೆಯ ಅಧಿಕಾರಿಗಳು ತೊಂದರೆಗೆ ಒಳಗಾಗುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಆ ಚಿತ್ರವನ್ನು ರಿಮೇಕ್​ ಮಾಡಲು ಅಲ್ಲು ಅರ್ಜುನ್​ ಹಾಗೂ ಜಾನ್​ ಅಬ್ರಾಹಂ ಮುಗಿಬಿದ್ದಿದ್ದಾರೆ. ಹಾಗಂತ ಅವರಿಬ್ಬರ ನಡುವೆ ಪೈಪೋಟಿ ಶುರುವಾಗಿಲ್ಲ. ಇಬ್ಬರೂ ಬೇರೆ ಬೇರೆ ಭಾಷೆಯಲ್ಲಿ ರಿಮೇಕ್​ ಮಾಡಲು ಪ್ಲ್ಯಾನ್​ ಮಾಡಿಕೊಂಡಿದ್ದಾರೆ.

‘ನಾಯಟ್ಟು’ ಚಿತ್ರವನ್ನು ತೆಲುಗಿನಲ್ಲಿ ಅಲ್ಲು ಅರ್ಜುನ್​ ನಿರ್ಮಿಸಲಿದ್ದಾರೆ. ಹಿಂದಿಯಲ್ಲಿ ಜಾನ್​ ಅಬ್ರಾಹಂ ನಿರ್ಮಿಸಲಿದ್ದಾರೆ. ಇಬ್ಬರೂ ಕೂಡ ರಿಮೇಕ್​ ಹಕ್ಕುಗಳನ್ನು ಖರೀದಿಸಿದ್ದಾರೆ. ಈ ವಿಚಾರವನ್ನು ‘ನಾಯಟ್ಟು’ ನಿರ್ದೇಶಕ ಮಾರ್ಟಿನ್​ ಪ್ರಕಟ್​ ಬಹಿರಂಗಪಡಿಸಿದ್ದಾರೆ. ಆದರೆ ಅಧಿಕೃತವಾಗಿ ಜಾನ್​ ಆಗಲಿ, ಅಲ್ಲು ಅರ್ಜುನ್​ ಆಗಲಿ ಏನನ್ನೂ ಬಾಯಿ ಬಿಟ್ಟಿಲ್ಲ. ರಿಮೇಕ್​ನಲ್ಲಿ ಯಾವ ಕಲಾವಿದರು ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಥಿಯೇಟರ್​ನಲ್ಲಿ ‘ನಾಯಟ್ಟು’ ಚಿತ್ರ ತೆರೆಕಂಡಾಗ ಕೊರೊನಾ ಹಾವಳಿ ಇತ್ತು. ಹಾಗಾಗಿ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಕಲೆಕ್ಷನ್​ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ನೆಟ್​ಫ್ಲಿಕ್ಸ್​ ಮೂಲಕ ಬಿಡುಗಡೆ ಮಾಡಲಾಯಿತು. ಅದರಿಂದ ಹೆಚ್ಚು ಜನರನ್ನು ತಲುಪಿತು. ಈಗ ರಿಮೇಕ್​ ಆಗುವ ಮೂಲಕ ಇನ್ನಿತರ ಭಾಷೆಯ ಪ್ರೇಕ್ಷಕರನ್ನೂ ಈ ಕಥೆ ಸೆಳೆದುಕೊಳ್ಳಲು ಪ್ರಯತ್ನಿಸಲಿದೆ. ಜಾನ್​ ಅಬ್ರಾಹಂ ರಿಮೇಕ್​ ಮಾಡುತ್ತಿರುವ ಎರಡನೇ ಮಾಲಿವುಡ್​ ಸಿನಿಮಾ ಇದಾಗಿದೆ. ಈ ಮೊದಲು ಅವರು ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ರಿಮೇಕ್​ ಹಕ್ಕುಗಳನ್ನು ಕೂಡ ಖರೀದಿಸಿದ್ದು, ಅದರ ಕೆಲಸಗಳು ಪ್ರಗತಿಯಲ್ಲಿವೆ.

ಇದನ್ನೂ ಓದಿ:

ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಅಲ್ಲು ಅರ್ಜುನ್​ ಮಗಳು; ಸಮಂತಾ ಜೊತೆ ಅಲ್ಲು ಅರ್ಹಾ ನಟನೆ

ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್​ 2; ಯಶ್​-ಅಲ್ಲು ಅರ್ಜುನ್​ ನಡುವೆ​ ಭಾರಿ ಪೈಪೋಟಿ

Published On - 11:09 am, Tue, 3 August 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ