ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಅಲ್ಲು ಅರ್ಜುನ್​ ಮಗಳು; ಸಮಂತಾ ಜೊತೆ ಅಲ್ಲು ಅರ್ಹಾ ನಟನೆ

Allu Arjun daughter Allu Arha: ಕಾಳಿದಾಸ ಬರೆದ ಶಕುಂತಲಾ ನಾಟಕ ಆಧರಿಸಿ ‘ಶಾಕುಂತಲಂ’ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರತಂಡದಿಂದ ಅಲ್ಲು ಅರ್ಹಾಗೆ ಸ್ವಾಗತ ಕೋರಲಾಗಿದೆ.

ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ ಅಲ್ಲು ಅರ್ಜುನ್​ ಮಗಳು; ಸಮಂತಾ ಜೊತೆ ಅಲ್ಲು ಅರ್ಹಾ ನಟನೆ
ಅಲ್ಲು ಅರ್ಜುನ್​

ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್​ (Allu Arjun) ಅಭಿಮಾನಿಗಳಿಗೆ ಇದು ಗುಡ್​ ನ್ಯೂಸ್​. ಅವರ ಇಡೀ ಕುಟುಂಬವೇ ಹಲವು ದಶಕಗಳಿಂದ ಸಿನಿಮಾ ಕೆಲಸಗಳಲ್ಲಿ ನಿರತವಾಗಿದೆ. ಈಗ ಅಲ್ಲು​ ಫ್ಯಾಮಿಲಿಯ ನಾಲ್ಕನೇ ತಲೆಮಾರಿನ ಪ್ರತಿಭೆ, ಅಂದರೆ ಅಲ್ಲು ಅರ್ಜುನ್​ ಅವರ ಪುತ್ರಿ ಅಲ್ಲು ಅರ್ಹಾ (Allu Arha) ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ. ಈ ಕುರಿತಂತೆ ಹಲವು ದಿನಗಳಿಂದ ಗುಸುಗುಸು ಕೇಳಿಬರುತ್ತಿತ್ತು. ಈಗ ಅಧಿಕೃತವಾಗಿ ಅಲ್ಲು ಅರ್ಜುನ್​ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಮಗಳು ಸಿನಿಮಾ ರಂಗಕ್ಕೆ ಕಾಲಿಡುತ್ತಿರುವುದು ನಿಜ ಎಂದು ಅವರು ಹೇಳಿದ್ದಾರೆ.

ಅಲ್ಲು ಅರ್ಜುನ್​ ಪುತ್ರಿ ಅಲ್ಲು ಅರ್ಹಾಗೆ ಇನ್ನೂ 4ರ ಪ್ರಾಯ. ಈ ಪುಟಾಣಿಗೆ ಸಮಂತಾ ಅಕ್ಕಿನೇನಿ ನಟನೆಯ ‘ಶಾಕುಂತಲಂ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಪೌರಾಣಿಕ ಕಥಾಹಂದರ ಇರುವ ಈ ಸಿನಿಮಾದಲ್ಲಿ ಸಮಂತಾ ಅವರು ಶಕುಂತಲೆಯ ಪಾತ್ರ ಮಾಡಲಿದ್ದು, ಶಕುಂತಲೆ ಪುತ್ರ ಭರತನ ಪಾತ್ರಕ್ಕೆ ಅಲ್ಲು ಅರ್ಹಾ ಬಣ್ಣ ಹಚ್ಚಲಿದ್ದಾಳೆ. ಇದು ಇಡೀ ಅಲ್ಲು ಕುಟುಂಬಕ್ಕೆ ಸಂತಸ ತಂದಿರುವ ವಿಚಾರ.

‘ಶಾಕುಂತಲಂ ಸಿನಿಮಾ ಮೂಲಕ ಅಲ್ಲು ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರಕ್ಕೆ ಕಾಲಿಡುತ್ತಿರುವುದು ನಮಗೆ ಹೆಮ್ಮೆಯ ಕ್ಷಣ. ಇಂಥ ಸುಂದರ ಸಿನಿಮಾದಲ್ಲಿ ನನ್ನ ಮಗಳಿಗೆ ಚೊಚ್ಚಲ ಅವಕಾಶ ನೀಡಿರುವುದಕ್ಕೆ ನಿರ್ದೇಶಕ ಗುಣಶೇಖರ್ ಅವರಿಗೆ ಧನ್ಯವಾದಗಳು. ನನ್ನ ಮಗಳು ಮೊದಲ ಸಿನಿಮಾದಲ್ಲೇ ಸಮಂತಾ ಅಕ್ಕಿನೇನಿ ಜೊತೆ ಅಭಿನಯಿಸಿದ್ದನ್ನು ನೋಡಲು ಖುಷಿ ಆಗುತ್ತದೆ. ಶಾಕುಂತಲಂ ತಂಡದ ಎಲ್ಲ ಕಲಾವಿದರು ಮತ್ತು ತಾಂತ್ರಿಕ ವರ್ಗಕ್ಕೆ ನನ್ನ ಶುಭ ಹಾರೈಕೆಗಳು’ ಎಂದು ಅಲ್ಲು ಅರ್ಜುನ್​ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

ಕಾಳಿದಾಸ ಬರೆದ ಶಕುಂತಲಾ ನಾಟಕ ಆಧರಿಸಿ ಈ ಸಿನಿಮಾ ಮೂಡಿಬರುತ್ತಿದೆ. ದುಷ್ಯಂತನ ಪಾತ್ರದಲ್ಲಿ ದೇವ್​ ಮೋಹನ್​ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮಣಿಶರ್ಮಾ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲು ಅರ್ಹಾಗೆ ಇಡೀ ‘ಶಾಕುಂತಲಂ’ ತಂಡ ಸೋಶಿಯಲ್​ ಮೀಡಿಯಾ ಮೂಲಕ ಸ್ವಾಗತ ಕೋರಿದೆ.

ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅದರಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಎರಡು ಪಾರ್ಟ್​ಗಳಲ್ಲಿ ಈ ಚಿತ್ರ ಮೂಡಿಬರಲಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:

ಮುಖಾಮುಖಿ ಆಗಲಿದ್ದಾರಾ ಯಶ್​-ಅಲ್ಲು ಅರ್ಜುನ್​? ಪ್ಯಾನ್​ ಇಂಡಿಯಾ ಸ್ಟಾರ್​ಗಳ ಹೊಸ ಹಣಾಹಣಿ

ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್​ 2; ಯಶ್​-ಅಲ್ಲು ಅರ್ಜುನ್​ ನಡುವೆ​ ಭಾರಿ ಪೈಪೋಟಿ