AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ಒಂದು ಹಾಡು ನೋಡಿ ಅಲ್ಲು ಅರ್ಜುನ್​ ಪ್ರತಿಭೆಗೆ ಸಲಾಂ ಎಂದ ಸಲ್ಮಾನ್​ ಖಾನ್​

‘ಸೀಟಿಮಾರ್​’ ಹಾಡನ್ನು ಕಾಪಿ ಮಾಡಿದ್ದು ಸರಿಯಲ್ಲ ಎಂದು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಆಗುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಸಲ್ಮಾನ್​ ಖಾನ್​ ಅವರು ಅಲ್ಲು ಅರ್ಜುನ್​ಗೆ ಮೆಚ್ಚುಗೆ ಸೂಚಿಸುವ ಮೂಲಕ ಇಡೀ ಚರ್ಚೆ ಬೇರೆ ಕಡೆಗೆ ತಿರುಗುವಂತೆ ಮಾಡಿದ್ದಾರೆ.

ಒಂದೇ ಒಂದು ಹಾಡು ನೋಡಿ ಅಲ್ಲು ಅರ್ಜುನ್​ ಪ್ರತಿಭೆಗೆ ಸಲಾಂ ಎಂದ ಸಲ್ಮಾನ್​ ಖಾನ್​
ಸಲ್ಮಾನ್​ ಖಾನ್​ - ಅಲ್ಲು ಅರ್ಜುನ್​
ಮದನ್​ ಕುಮಾರ್​
| Edited By: |

Updated on: Apr 26, 2021 | 4:07 PM

Share

ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತದ ಹಿಟ್​ ಸಿನಿಮಾಗಳನ್ನು ರಿಮೇಕ್​ ಮಾಡಿದ ಬಳಿಕ ಮತ್ತೆ ಹಳೇ ಚಾರ್ಮ್​ ಪಡೆದುಕೊಂಡವರು ನಟ ಸಲ್ಮಾನ್ ಖಾನ್. ಇನ್ನು, ದಕ್ಷಿಣ ಭಾರತದ ಕೆಲವು ಸೂಪರ್​ ಹಿಟ್​ ಗೀತೆಗಳ ಮೇಲೂ ಬಾಲಿವುಡ್​ ಮಂದಿ ಕಣ್ಣಿಟ್ಟಿರುತ್ತಾರೆ. ಈಗ ಸಲ್ಮಾನ್​ ಖಾನ್​ ನಟಿಸಿರುವ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್’​ ಸಿನಿಮಾದಲ್ಲಿ ಕೂಡ ಅಂಥ ಒಂದು ಹಾಡು ಬಳಕೆ ಆಗಿದೆ. ಅದರ ಬಗ್ಗೆ ಈಗಾಗಲೇ ಹಲವು ಬಗೆಯ ಚರ್ಚೆ ಶುರುವಾಗಿದೆ.

2017ರಲ್ಲಿ ಅಲ್ಲು ಅರ್ಜುನ್​ ನಟಿಸಿದ್ದ ದುವ್ವಡ ಜಗನ್ನಾಥಂ ಸಿನಿಮಾದಲ್ಲಿ ‘ಸೀಟಿಮಾರ್​ ಸೀಟಿಮಾರ್​..’ ಹಾಡು ತುಂಬ ಜನಪ್ರಿಯವಾಗಿತ್ತು. ಅದರಲ್ಲಿ ಅಲ್ಲು ಅರ್ಜುನ್​ ಮತ್ತು ನಟಿ ಪೂಜಾ ಹೆಗ್ಡೆ ಭರ್ಜರಿಯಾಗಿ ಸ್ಟೆಪ್​ ಹಾಕಿದ್ದರು. ಅದೇ ಹಾಡನ್ನು ಯಥಾವತ್ತಾಗಿ ಈಗ ‘ರಾಧೆ’ ಸಿನಿಮಾದಲ್ಲಿ ಬಳಕೆ ಮಾಡಲಾಗಿದೆ. ಅದರ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂದಿದೆ. ಸಲ್ಲು ಹೀಗೆ ಕಾಪಿ ಮಾಡಿದ್ದು ಸರಿಯಲ್ಲ ಎಂದು ಕೆಲವರು ಸೋಶಿಯಲ್​ ಮೀಡಿಯಾದಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಲ್ಮಾನ್​ ಖಾನ್​ ಅವರು ಅಲ್ಲು ಅರ್ಜುನ್​ಗೆ ಮೆಚ್ಚುಗೆ ಸೂಚಿಸುವ ಮೂಲಕ ಇಡೀ ಚರ್ಚೆ ಬೇರೆ ಕಡೆಗೆ ತಿರುಗುವಂತೆ ಮಾಡಿದ್ದಾರೆ.

ಮೂಲ ಸೀಟಿಮಾರ್​ ಸಾಂಗ್​ನಲ್ಲಿ ಅಲ್ಲು ಅರ್ಜುನ್​ ಡ್ಯಾನ್ಸ್​ ಮಾಡಿರುವುದನ್ನು ಕಂಡು ಸಲ್ಮಾನ್​ ಖಾನ್​ ಮೆಚ್ಚುಗೆ ಸೂಚಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದಾರೆ. ‘ಸೀಟಿಮಾರ್​ ಹಾಡು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು. ಅದರಲ್ಲಿ ನಿಮ್ಮ ಪರ್ಫಾಮೆನ್ಸ್​​ ನೋಡಿ ಇಷ್ಟಪಟ್ಟೆ. ನಿಮ್ಮ ಡ್ಯಾನ್ಸ್​, ನಿಮ್ಮ ಸ್ಟೈಲ್​ ಎಲ್ಲವೂ ಫೆಂಟಾಸ್ಟಿಕ್​. ಕಾಳಜಿ ವಹಿಸಿ. ಸುರಕ್ಷಿತವಾಗಿರಿ. ಲವ್​ ಯು ಬ್ರದರ್​’ ಎಂದು ಸಲ್ಮಾನ್​ ಮಾಡಿರುವ ಟ್ವೀಟ್​ ವೈರಲ್​ ಆಗಿದೆ.

ಸಲ್ಮಾನ್​ ಹೇಳಿರುವ ಈ ಪ್ರೀತಿ ಪೂರ್ವಕ ಮಾತುಗಳಿಂದ ಅಲ್ಲು ಅರ್ಜುನ್​ ಖುಷಿ ಆಗಿದ್ದಾರೆ. ‘ಧನ್ಯವಾದಗಳು ಸಲ್ಮಾನ್​ ಅವರೇ. ನಿಮ್ಮಿಂದ ಮೆಚ್ಚುಗೆ ಸ್ವೀಕರಿಸುವುದಕ್ಕೆ ಖುಷಿ ಎನಿಸುತ್ತದೆ. ಬೆಳ್ಳಿಪರದೆ ಮೇಲೆ ರಾಧೆ ಸಿನಿಮಾಗೆ ಅಭಿಮಾನಿಗಳು ಸೀಟಿಮಾರ್​ ಎನ್ನಲಿ. ನಿಮ್ಮ ಪ್ರೀತಿಗೆ ಧನ್ಯವಾದಗಳು’ ಎಂದು ಅಲ್ಲು ಅರ್ಜುನ್​ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ನಲ್ಲೂ ಮನೆಯಿಂದ ಹೊರಬಂದ ಸಲ್ಮಾನ್​ ಖಾನ್;​ ಆದ್ರೂ ಇದು ಮೆಚ್ಚುವ ಕೆಲಸ

Salman Khan: ಸಲ್ಮಾನ್​ ಖಾನ್​ ವಿರುದ್ಧ ತಿರುಗಿ ಬಿದ್ದ ಸುಶಾಂತ್ ಫ್ಯಾನ್ಸ್​; ‘ರಾಧೆ’ ಬಹಿಷ್ಕಾರ ಮಾಡಲು ಶಪಥ

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಸಚಿವ ಸ್ಥಾನಕ್ಕೆ ರಾಜೀನಾಮೆ ಸುದ್ದಿ: ಈ ಬಗ್ಗೆ ಕೆಜೆ ಜಾರ್ಜ್ ಹೇಳಿದ್ದೇನು?
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ
ಅಜಿತ್ ಪವಾರ್ ಅಂತ್ಯಕ್ರಿಯೆ; ಮಕ್ಕಳಿಂದ ಅಪ್ಪನ ಚಿತೆಗೆ ಅಗ್ನಿಸ್ಪರ್ಶ