ಲಾಕ್​ಡೌನ್​ನಲ್ಲೂ ಮನೆಯಿಂದ ಹೊರಬಂದ ಸಲ್ಮಾನ್​ ಖಾನ್;​ ಆದ್ರೂ ಇದು ಮೆಚ್ಚುವ ಕೆಲಸ

Salman Khan Viral Video: ಕಳೆದ ವರ್ಷ ಕಠಿಣ ಲಾಕ್​ಡೌನ್​ ಜಾರಿ ಆಗಿದ್ದಾಗ ಸಲ್ಮಾನ್​ ಖಾನ್​ ಮುಂಬೈ ಹೊರವಲಯದಲ್ಲಿ ಇರುವ ತಮ್ಮ ಫಾರ್ಮ್​ಹೌಸ್​ ಸೇರಿಕೊಂಡಿದ್ದರು. ಹಾಗಾದರೆ ಈ ಬಾರಿ ಏನು ಮಾಡುತ್ತಿದ್ದಾರೆ?

ಲಾಕ್​ಡೌನ್​ನಲ್ಲೂ ಮನೆಯಿಂದ ಹೊರಬಂದ ಸಲ್ಮಾನ್​ ಖಾನ್;​ ಆದ್ರೂ ಇದು ಮೆಚ್ಚುವ ಕೆಲಸ
ಸಲ್ಮಾನ್ ಖಾನ್
Follow us
ಮದನ್​ ಕುಮಾರ್​
| Updated By: Digi Tech Desk

Updated on:Apr 26, 2021 | 11:42 AM

ನಟ ಸಲ್ಮಾನ್​ ಖಾನ್​ ಪ್ರತಿದಿನ ಒಂದಿಲ್ಲೊಂದು ಕಾರಣಗಳಿಂದಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲವೇ ದಿನಗಳ ಹಿಂದೆ ಅವರ ‘ರಾಧೆ: ಯುವರ್​ ಮೋಸ್ಟ್​ ವಾಟೆಂಡ್​ ಭಾಯ್​’ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಸದ್ದು ಮಾಡಿತ್ತು. ಜನರಿಂದ ಅದಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅದೇನೇ ಇರಲಿ, ಈಗ ಸಿನಿಮಾ ಹೊರದಾತ ಕಾರಣದಿಂದ ಸಲ್ಲು ಮತ್ತೆ ಸುದ್ದಿ ಆಗುತ್ತಿದ್ದಾರೆ. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಮನೆಬಿಟ್ಟು ಹೊರಗೆ ಬಂದಿದ್ದಾರೆ.

ಮುಂಬೈನಲ್ಲಿ ಕೊರೊನಾ ವೈರಸ್​ ಹಾವಳಿ ಮಿತಿ ಮೀರಿದೆ. ಹಾಗಾಗಿ ಸದ್ಯ ಅಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಬೇರೆ ಸ್ಟಾರ್​ ನಟರು ಮನೆಯೊಳಗೆ ಕೂತಿರುವಾಗ ಸಲ್ಮಾನ್​ ಖಾನ್​​ ಮಾತ್ರ ಮುಂಬೈ ನಗರವನ್ನು ಸುತ್ತುತ್ತಿದ್ದಾರೆ. ಈ ಸಂದರ್ಭದ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲೊ ವೈರಲ್​ ಆಗುತ್ತಿವೆ. ಸಲ್ಲು ಮುಂಬೈ ಸುತ್ತುತ್ತಿದ್ದಾರೆ ಎಂದರೆ ಅವರು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದರ್ಥವಲ್ಲ. ಲಾಕ್​ಡೌನ್​ನಲ್ಲಿ ಒಂದೊಳ್ಳೆಯ ಕಾರಣಕ್ಕಾಗಿ ಅವರು ಮನೆಯಿಂದ ಆಚೆ ಬಂದಿದ್ದಾರೆ.

ಸಿನಿಮಾದ ಜೊತೆಜೊತೆಗೆ ಕೆಲವು ಸಮಾಜಮುಖಿ ಕಾರ್ಯಗಳಿಂದಲೂ ಸಲ್ಮಾನ್​ ಖಾನ್​ ಗುರುತಿಸಿಕೊಂಡಿದ್ದಾರೆ. ಭಾನುವಾರ (ಏ.25) ಅವರು ಕೋವಿಡ್​ ವಾರಿಯರ್​ಗಳಿಗಾಗಿ ಶ್ರಮಿಸಿದ್ದಾರೆ. ಕೊರೊನಾ ವೈರಸ್​ ಎರಡನೇ ಅಲೆ ತೀವ್ರ ಕಾಟ ಕೊಡುತ್ತಿರುವ ಈ ಸಂದರ್ಭದಲ್ಲಿ ಮುಂಬೈ ನಗರದಲ್ಲಿ ಕೆಲಸ ಮಾಡುತ್ತಿರುವ ಫ್ರಂಟ್​ಲೈನ್​ ವರ್ಕರ್​ಗಳಿಗೆ ಅವರು ಫುಡ್​ ಕಿಟ್​ಗಳನ್ನು ವಿತರಿಸಿದ್ದಾರೆ.

ಮುಂಬೈ ಪೊಲೀಸರು, ಬೃಹನ್​ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗೆ 5 ಸಾವಿರ ಆಹಾರದ ಪ್ಯಾಕೆಟ್​ ಮತ್ತು ನೀರಿನ ಬಾಟಲಿಗಳನ್ನು ಸಲ್ಮಾನ್​ ಖಾನ್​ ನೇತೃತ್ವದಲ್ಲಿ ವಿತರಣೆ ಮಾಡಲಾಗಿದೆ. ಈ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರ ಅಭಿಮಾನಿಗಳು ಸಲ್ಲು ಕೆಲಸಕ್ಕೆ ಭಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಳೆದ ವರ್ಷ ಕಠಿಣ ಲಾಕ್​ಡೌನ್​ ಜಾರಿ ಆಗಿದ್ದಾಗ ಸಲ್ಮಾನ್​ ಖಾನ್​ ಅವರು ಮುಂಬೈ ಹೊರವಲಯದಲ್ಲಿ ಇರುವ ತಮ್ಮ ಫಾರ್ಮ್​ಹೌಸ್​ ಸೇರಿಕೊಂಡಿದ್ದರು. ಅಲ್ಲಿಂದಲೇ ಜನರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಲು ನಟನೆಯ ‘ರಾಧೆ: ಯುವರ್​ ಮೋಸ್ಟ್​ ವಾಂಟೆಡ್​ ಭಾಯ್​’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಅನುಮತಿ ಇರುವ ಚಿತ್ರಮಂದಿರಗಳು ಮತ್ತು ಕೆಲವು ಓಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ಮೇ 13ರಂದು  ಈ ಸಿನಿಮಾ ರಿಲೀಸ್​ ಆಗಲಿದೆ. ಚಿತ್ರವನ್ನು ಬಹಿಷ್ಕಾರ ಮಾಡಬೇಕು ಎಂದು ಸುಶಾಂತ್​ ಸಿಂಗ್ ರಜಪೂತ್​ ಅಭಿಮಾನಿಗಳು ಪಟ್ಟು ಹಿಡಿದು ಕೂತಿದ್ದಾರೆ. ಅದರ ನಡುವೆ ‘ರಾಧೆ’ ಸಿನಿಮಾ ಹಣೆಬರಹ ಏನಾಗಲಿದೆ ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Salman Khan: ಸಲ್ಮಾನ್​ ಖಾನ್​ ವಿರುದ್ಧ ತಿರುಗಿ ಬಿದ್ದ ಸುಶಾಂತ್ ಫ್ಯಾನ್ಸ್​; ‘ರಾಧೆ’ ಬಹಿಷ್ಕಾರ ಮಾಡಲು ಶಪಥ

Radhe Trailer: ರಾಧೆ ಟ್ರೇಲರ್ ಮೂಲಕ ಧೂಳೆಬ್ಬಿಸಿದ ಸಲ್ಮಾನ್ ಖಾನ್; ಹೇಗಿದ್ದಾನೆ ಮೋಸ್ಟ್ ವಾಂಟೆಡ್ ಭಾಯ್?

Published On - 11:29 am, Mon, 26 April 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ