‘ಅವರು ಪರ್ಫೆಕ್ಷನಿಸ್ಟ್​’; ಅಲ್ಲು ಅರ್ಜುನ್​ ಬಗ್ಗೆ ಡಾಲಿ ಧನಂಜಯ ಮನಸ್ಸಿನ ಮಾತು

‘ಇದು ಪ್ಯಾನ್​ ಇಂಡಿಯಾ ಸಿನಿಮಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದಲ್ಲ. ಒಳ್ಳೆಯ ಪ್ರಾಜೆಕ್ಟ್​ನ ಭಾಗವಾಗುವುದು ನನ್ನ ಉದ್ದೇಶ’ ಎಂದು ‘ಪುಷ್ಪ’ ಚಿತ್ರದ ಬಗ್ಗೆ ಡಾಲಿ ಧನಂಜಯ ಮಾತನಾಡಿದ್ದಾರೆ.

‘ಅವರು ಪರ್ಫೆಕ್ಷನಿಸ್ಟ್​’; ಅಲ್ಲು ಅರ್ಜುನ್​ ಬಗ್ಗೆ ಡಾಲಿ ಧನಂಜಯ ಮನಸ್ಸಿನ ಮಾತು
| Updated By: ಮದನ್​ ಕುಮಾರ್​

Updated on: Jul 23, 2021 | 5:08 PM

ಕನ್ನಡದಲ್ಲಿ ಡಾಲಿ ಆಗಿ ಮಿಂಚಿದ ನಟ ಧನಂಜಯ್​ (Daali Dhananjay) ಅವರಿಗೆ ಪರಭಾಷೆಯಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ (Pushpa) ಸಿನಿಮಾದ ಮೂಲಕ ಅವರು ಟಾಲಿವುಡ್​ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ. ಆ ಸಿನಿಮಾದ ಬಿಡುಗಡೆಗಾಗಿ ಧನಂಜಯ ಅಭಿಮಾನಿಗಳು ಕಾದಿದ್ದಾರೆ. ನಿರ್ದೇಶಕ ಸುಕುಮಾರ್​ ಮತ್ತು ಅಲ್ಲು ಅರ್ಜುನ್​ (Allu Arjun) ಅವರಂತಹ ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದು ಧನಂಜಯ ಅವರಿಗೆ ಒಳ್ಳೆಯ ಅನುಭವ ನೀಡಿದೆ. ಅಲ್ಲು ಅರ್ಜುನ್​ ಅವರನ್ನು ಪರ್ಫೆಕ್ಷನಿಸ್ಟ್​ ಎಂದು ಧನಂಜಯ ಕರೆದಿದ್ದಾರೆ. 

‘ಇದು ಪ್ಯಾನ್​ ಇಂಡಿಯಾ ಸಿನಿಮಾ ಎಂಬ ಕಾರಣಕ್ಕೆ ನಾನು ಒಪ್ಪಿಕೊಂಡಿದ್ದಲ್ಲ. ಒಳ್ಳೆಯ ಪ್ರಾಜೆಕ್ಟ್​ನ ಭಾಗವಾಗುವುದು ನನ್ನ ಉದ್ದೇಶ. ಅಲ್ಲು ಅರ್ಜುನ್​ ಮತ್ತು ಸುಕುಮಾರ್​​ ಜೊತೆ ಕೆಲಸ ಮಾಡುವುದರಿಂದ ತುಂಬ ವಿಷಯ ಕಲಿಯಬಹುದು. ಅದನ್ನು ಗಮನದಲ್ಲಿ ಇಟ್ಟುಕೊಂಡು ನಾನು ಅಲ್ಲಿಗೆ ಹೋದೆ. ಒಂದು ಹೊಸ ರೀತಿಯ ಅನುಭವ ಸಿಕ್ಕಿತು. ಕನ್ನಡದ ಜೊತೆಗೆ ತಮಿಳು ಮತ್ತು ತೆಲುಗಿಗೆ ನಾನೇ ಡಬ್​ ಮಾಡಬೇಕು ಎಂದುಕೊಂಡಿದ್ದೇನೆ. ಡಾಲಿ ಪಾತ್ರದ ರೀತಿಯೇ ಈ ಸಿನಿಮಾದಲ್ಲಿನ ನನ್ನ ಪಾತ್ರವನ್ನು ಜನರು ಎಂಜಾಯ್​ ಮಾಡುತ್ತಾರೆ’ ಎಂದಿದ್ದಾರೆ ಧನಂಜಯ.

ಇದನ್ನೂ ಓದಿ:

ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಪುಷ್ಪ, ಕೆಜಿಎಫ್​ 2; ಯಶ್​-ಅಲ್ಲು ಅರ್ಜುನ್​ ನಡುವೆ​ ಭಾರಿ ಪೈಪೋಟಿ

‘ಪುಷ್ಪ ಸಿನಿಮಾ 10 ಕೆಜಿಎಫ್​ಗೆ ಸಮ’; ಅಲ್ಲು ಅರ್ಜುನ್​ ಚಿತ್ರಕ್ಕೆ ಸಿಕ್ತು ಹೊಸ ಮೆಚ್ಚುಗೆ

Follow us