ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ

ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ
ಬಿಗ್​ ಬಾಸ್​ ಫಿನಾಲೆಯಲ್ಲಿ ಸುದೀಪ್​ ಅಕ್ಕ-ಪಕ್ಕ ನಿಲ್ಲುವ ಸ್ಪರ್ಧಿಗಳು ಇವರೇನಾ? ಸಿಕ್ತು ಮತ್ತೊಂದು ಸಾಕ್ಷಿ

Bigg Boss Finale: ಬಿಗ್​ ಬಾಸ್​​ನಲ್ಲಿ ಇದು ಕೊನೆಯ ವಾರವಾಗಿದ್ದರೂ ಕೂಡ ಸ್ಪರ್ಧಿಗಳಿಗೆ ಒಂದು ಕಠಿಣ ಟಾಸ್ಕ್​ ನೀಡಲಾಗಿದೆ. ಇದರಲ್ಲೂ ಮಂಜು ಪಾವಗಡ ಮತ್ತು ಅರವಿಂದ್​ ಕೆಪಿ ನಡುವೆ ತೀವ್ರ ಜಿದ್ದಾಜಿದ್ದಿ ನಡೆದಿದೆ.

TV9kannada Web Team

| Edited By: Madan Kumar

Aug 03, 2021 | 1:27 PM

ಬಿಗ್​ ಬಾಸ್​ ಕನ್ನಡ (BBK8) ಸೀಸನ್​ 8ರ ಫಿನಾಲೆಗೆ ದಿನಗಣನೆ ಆರಂಭ ಆಗಿದೆ. ಮೊದಲ ದಿನದಿಂದಲೂ ಪರಸ್ಪರ ಪೈಪೋಟಿ ನೀಡಿಕೊಂಡು ಬಂದಿದ್ದ ಸ್ಪರ್ಧಿಗಳಿಗೆ ಈಗ ಟೆನ್ಷನ್​ ಹೆಚ್ಚಿದೆ. ಆರಂಭದಲ್ಲಿ 17 ಜನರಿಂದ ತುಂಬಿಕೊಂಡಿದ್ದ ಮನೆಯಲ್ಲಿ ಈಗ ಕೇವಲ 6 ಜನ ಇದ್ದಾರೆ. ಫಿನಾಲೆ (Bigg Boss Finale) ಬರುವುದರೊಳಗೆ ಇನ್ನೊಬ್ಬರು ಎಲಿಮಿನೇಟ್​ ಆಗುತ್ತಾರೆ. ಫಿನಾಲೆ ಎಪಿಸೋಡ್​ನಲ್ಲಿ 5 ಜನರ ನಡುವೆ ಹಣಾಹಣೆ ಇರುತ್ತದೆ. ಅಂತಿಮವಾಗಿ ಕಿಚ್ಚ ಸುದೀಪ್​ ಎಡ-ಬಲದಲ್ಲಿ ನಿಲ್ಲಿಸಿಕೊಳ್ಳುವುದು ಇಬ್ಬರನ್ನು ಮಾತ್ರ. ಆ ಇಬ್ಬರು ಯಾರ ಎಂಬ ಪ್ರಶ್ನೆಗೆ ವೀಕ್ಷಕರ ಮನದಲ್ಲಿ ಒಂದಷ್ಟು ಉತ್ತರಗಳಿವೆ. ಅದರಲ್ಲೂ ಮಂಜು ಪಾವಗಡ (Manju Pavagada) ಮತ್ತು ಅರವಿಂದ್​ ಕೆಪಿ (Aravind KP) ಹೆಸರುಗಳು ಬಲವಾಗಿ ಕೇಳಿಬರುತ್ತಿವೆ.

ಟಾಸ್ಕ್​ ವಿಚಾರದಲ್ಲಿ ಅರವಿಂದ್​ ಕೆಪಿ ಮತ್ತು ಮಂಜು ಪಾವಗಡ ನಡುವೆ ಮೊದಲಿನಿಂದಲೂ ಟಫ್​ ಸ್ಪರ್ಧೆ ಇದೆ. ಅದರಲ್ಲಿ ಇಬ್ಬರದ್ದೂ ಸಮಬಲ ಇದೆ ಎನ್ನಬಹುದು. ಆದರೆ ಮನರಂಜನೆ ವಿಚಾರದಲ್ಲಿ ಅರವಿಂದ್​ಗಿಂತಲೂ ಮಂಚು ಹೆಚ್ಚು ಅಂಕ ಗಿಟ್ಟಿಸುತ್ತಾರೆ. ಇಬ್ಬರಿಗೂ ನಾಯಕತ್ವದ ಗುಣ ಇದೆ. ಬಿಗ್​ ಬಾಸ್​ ಫಿನಾಲೆ ದಿನ ಇವರಿಬ್ಬರ ನಡುವೆ ಅಂತಿಮ ಹಣಾಹಣಿ ನಡೆಯಲಿದೆ ಎಂಬ ಅಭಿಪ್ರಾಯ ಬಹುತೇಕರಿಗೆ ಇದೆ. ಆ ಅಭಿಪ್ರಾಯವನ್ನು ಪುಷ್ಠಿಗೊಳಿಸುವಂತಹ ಘಟನೆಗಳು ಬಿಗ್​ ಬಾಸ್​ ಮನೆಯಲ್ಲಿ ನಡೆಯುತ್ತಲೇ ಇವೆ.

ಇದು ಕೊನೆಯ ವಾರವಾಗಿದ್ದರೂ ಕೂಡ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದು ಕಠಿಣ ಟಾಸ್ಕ್​ ನೀಡಿದ್ದಾರೆ. ಒಂದು ವೃತ್ತದೊಳಗೆ ಎಲ್ಲ ಸ್ಪರ್ಧಿಗಳನ್ನು ನಿಲ್ಲಿಸಲಾಗಿದೆ. ಎಲ್ಲರಿಗೂ ಒಂದೊಂದು ಗುರಾಣಿಯನ್ನು ನೀಡಲಾಗಿದೆ. ಆ ಗುರಾಣಿಯ ಸಹಾಯದಿಂದ ಇನ್ನುಳಿದ ಸದಸ್ಯರನ್ನು ವೃತ್ತದಿಂದ ಹೊರಗೆ ತಳ್ಳಬೇಕು. ಕೊನೆಯವರೆಗೂ ವೃತ್ತದೊಳಗೆ ಉಳಿಯುವ ಒಬ್ಬ ಸ್ಪರ್ಧಿಯು ಟಾಸ್ಕ್​ ಗೆಲ್ಲುತ್ತಾರೆ.

ಈ ಟಾಸ್ಕ್​ಗೆ ಸಂಬಂಧಿಸಿದ ಪ್ರೋವೋವನ್ನು ಕಲರ್ಸ್​ ಕನ್ನಡ ವಾಹಿನಿ ತನ್ನ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಮಂಜು ಪಾವಗಡ ಹಾಗೂ ಅರವಿಂದ್​ ಕೆಪಿ ನಡುವೆ ಈ ಟಾಸ್ಕ್​ ಶುರುವಾಗಿದೆ. ಅಂತಿಮವಾಗಿ ವೃತ್ತದೊಳಗೆ ಉಳಿದುಕೊಂಡಿರುವುದು ಅರವಿಂದ್​ ಕೆಪಿ ಮತ್ತು ಮಂಜು ಪಾವಗಡ ಎಂಬುದು ಪ್ರೋಮೋದಿಂದಲೇ ತಿಳಿದುಬಂದಿದೆ. ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಆ.3ರ ಎಪಿಸೋಡ್​ನಲ್ಲಿ ಗೊತ್ತಾಗಲಿದೆ.

ಕೊನೇ ವಾರದ ಈ ಟಾಸ್ಕ್​ನಲ್ಲಿಯೂ ಅರವಿಂದ್​ ಮತ್ತು ಮಂಜು ನಡುವೆ ಅಂತಿಮ ಹಣಾಹಣಿ ಏರ್ಪಟ್ಟಿದ್ದರಿಂದ ಫಿನಾಲೆ ದಿನವೂ ಅವರೇ ವಿನ್ನರ್​ ಮತ್ತು ರನ್ನರ್​ ಅಪ್​ ಸ್ಥಾನಕ್ಕೆ ಪೈಪೋಟಿ ನಡೆಸುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಎಲ್ಲ ಕೌತುಕಕ್ಕೆ ಆ.8ರಂದು ತೆರೆಬೀಳಲಿದೆ.

ಇದನ್ನೂ ಓದಿ:

‘ಅರವಿಂದ್ ಬೈಕ್​ ಮಿಸ್​ ಹೊಡೆಯುತ್ತಿದೆ, ಫಿನಾಲೆ ಗೆಲ್ಲೋದು ಮಂಜು ಪಾವಗಡ’

ಅರವಿಂದ್​ಗೆ ಗೆಲುವಿನ ಮಾಲೆ, ಮಂಜು ರನ್ನರ್​ ಅಪ್​; ಇದು ಬಿಗ್​ ಬಾಸ್​ ಮನೆ ಭವಿಷ್ಯ

Follow us on

Related Stories

Most Read Stories

Click on your DTH Provider to Add TV9 Kannada