ಪೋಷಕರೇ ಹುಷಾರ್​! ಬೆತ್ತಲಾಗ್ತಾರೆ ಬಿಗ್​ ಬಾಸ್​ ಸ್ಪರ್ಧಿಗಳು; ವೀಕ್ಷಕರೇ ಶಿಕ್ಷೆ ಕೊಡಬಹುದು

ಪೋಷಕರೇ ಹುಷಾರ್​! ಬೆತ್ತಲಾಗ್ತಾರೆ ಬಿಗ್​ ಬಾಸ್​ ಸ್ಪರ್ಧಿಗಳು; ವೀಕ್ಷಕರೇ ಶಿಕ್ಷೆ ಕೊಡಬಹುದು
ಪೋಷಕರೇ ಹುಷಾರ್​! ಬೆತ್ತಲಾಗ್ತಾರೆ ಬಿಗ್​ ಬಾಸ್​ ಸ್ಪರ್ಧಿಗಳು; ವೀಕ್ಷಕರೇ ಶಿಕ್ಷೆ ಕೊಡಬಹುದು

Bigg Boss OTT: ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಯಾರಿಗೆ ಟ್ರೋಫಿ ಸಿಗಲಿದೆ ಎಂಬುದಕ್ಕೆ ಆ.8ರಂದು ಉತ್ತರ ಸಿಗಲಿದೆ. ಅದೇ ದಿನ ಹಿಂದಿಯಲ್ಲಿ ‘ಬಿಗ್​ ಬಾಸ್​ ಓಟಿಟಿ’ ಶುರುವಾಗಲಿದೆ.

TV9kannada Web Team

| Edited By: Madan Kumar

Aug 04, 2021 | 7:57 AM

ಬಿಗ್​ ಬಾಸ್​ (Bigg Boss) ರಿಯಾಲಿಟಿ ಶೋಗೆ ದೊಡ್ಡ ಪ್ರೇಕ್ಷಕವರ್ಗ ಇದೆ. ಮನೆಮಂದಿಯೆಲ್ಲ ಕುಳಿತು ಈ ಕಾರ್ಯಕ್ರಮವನ್ನು ನೋಡುತ್ತಾರೆ. ಮಕ್ಕಳು ಕೂಡ ಬಿಗ್​ ಬಾಸ್​ಗೆ ಫಿದಾ ಆಗಿದ್ದಾರೆ. ಆದರೆ ಇನ್ಮುಂದೆ ಬಿಗ್​ ಬಾಸ್​ ಎಂದರೆ ಸ್ವಲ್ಪ ಎಚ್ಚರಿಕೆಯಿಂದ ನೋಡಬೇಕಾದ ಸಂದರ್ಭ ಎದುರಾಗುತ್ತಿದೆ. ಈಗಾಗಲೇ ತಿಳಿದಿರುವಂತೆ ಕನ್ನಡ (BBK), ತೆಲುಗು, ಮಲಯಾಳಂ ಭಾಷೆಗಳ ಬಿಗ್​ ಬಾಸ್​ಗೆ ಹೋಲಿಸಿದರೆ ಹಿಂದಿ ಬಿಗ್​ ಬಾಸ್​ ಕೊಂಚ ಬೋಲ್ಡ್​ ಆಗಿರುತ್ತದೆ. ಈಗ ಅದನ್ನೂ ಮೀರಿ, ‘ಬಿಗ್​ ಬಾಸ್​ ಓಟಿಟಿ’ (Bigg Boss OTT) ಎಂಬ ಹೊಸ ಶೈಲಿಯನ್ನು ಪರಿಚಯಿಸಲಾಗುತ್ತಿದೆ. ಇಲ್ಲಿ ಸ್ಪರ್ಧಿಗಳು ಬೆತ್ತಲಾದರೂ ಅಚ್ಚರಿ ಏನಿಲ್ಲ!

ಆ.8ರಿಂದ ‘ಬಿಗ್​ ಬಾಸ್​ ಓಟಿಟಿ’ ಪ್ರಸಾರ ಆಗಲಿದೆ. ವೂಟ್​ ಓಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಇದು ಪ್ರಸಾರ ಆಗಲಿದ್ದು, ಖ್ಯಾತ ನಿರ್ಮಾಪಕ/ನಿರ್ದೇಶಕ ಕರಣ್​ ಜೋಹರ್​ ಅವರು ಇದಕ್ಕೆ ನಿರೂಪಣೆ ಮಾಡಲಿದ್ದಾರೆ. ಇಲ್ಲಿನ ನಿಯಮಗಳೇ ಬೇರೆ. ಅದರ ಝಲಕ್​ ತೋರಿಸುವ ಸಲುವಾಗಿ ಒಂದು ಪ್ರೋಮೋ ಬಿಡುಗಡೆ ಮಾಡಲಾಗಿದೆ. ಅದನ್ನು ನೋಡಿದರೆ ಫ್ಯಾಮಿಲಿ ಆಡಿಯನ್ಸ್​ಗೆ ಶಾಕ್​ ಆಗುವುದು ಗ್ಯಾರಂಟಿ.

‘ಸಲ್ಮಾನ್​ ಖಾನ್​ ಅವರು ಟಿವಿಯಲ್ಲಿ ಸೂಟು​ ಬೂಟು ಧರಿಸಿ ನಿರೂಪಣೆ ಮಾಡುತ್ತಾರೆ. ನಾನು ವೂಟ್​ನಲ್ಲಿ ಬಿಗ್​ ಬಾಸ್​ ನಿರೂಪಣೆ ಮಾಡುತ್ತೇನೆ. ಇಲ್ಲಿ ಇಂಥ ಬಟ್ಟೆಯನ್ನು (ನಗ್ನ) ಸ್ಪರ್ಧಿಗಳು ಧರಿಸಬೇಕು. ಕಿಸ್​​ ಮಾಡುವಂತಹ ಬೋಲ್ಡ್​ ಟಾಸ್ಕ್​ಗಳು ಇರುತ್ತವೆ. ಸ್ಪರ್ಧಿಗಳಿಗೆ ವೀಕ್ಷಕರೇ ಶಿಕ್ಷೆ ಕೊಡಬಹುದು’ ಎಂದು ಪ್ರೋಮೋದಲ್ಲಿ ಕರಣ್​ ಜೋಹರ್​ ಹೇಳಿದ್ದಾರೆ. ಇದು ಮಕ್ಕಳು ಜೊತೆ ಕುಳಿತು ನೋಡುವಂತಹ ಶೋ ಅಲ್ಲವೇ ಅಲ್ಲ ಎಂಬುದಕ್ಕೆ ಈ ಪ್ರೋಮೋ ಸಾಕ್ಷಿ ನೀಡುತ್ತಿದೆ.

View this post on Instagram

A post shared by Karan Johar (@karanjohar)

ಇನ್ನು, ಕನ್ನಡ ಬಿಗ್​ ಬಾಸ್​ ಫಿನಾಲೆಗೆ ದಿನಗಣನೆ ಆರಂಭ ಆಗಿದೆ. ಆ.8ರಂದು ಅದ್ದೂರಿಯಾಗಿ ಫಿನಾಲೆ ನಡೆಯಲಿದೆ. ಸದ್ಯ ಮನೆಯಲ್ಲಿ ವೈಷ್ಣವಿ ಗೌಡ, ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಪ್ರಶಾಂತ್​ ಸಂಬರಗಿ, ಅರವಿಂದ್​ ಕೆಪಿ, ಮಂಜು ಪಾವಗಡ ನಡುವೆ ಸ್ಪರ್ಧೆ ಮುಂದುವರಿದಿದೆ. ಅಂತಿಮವಾಗಿ ಯಾರಿಗೆ ಟ್ರೋಫಿ ಸಿಗಲಿದೆ ಎಂಬುದಕ್ಕೆ ಆ.8ರಂದು ಉತ್ತರ ಸಿಗಲಿದೆ. ಅದೇ ದಿನ ಹಿಂದಿಯಲ್ಲಿ ‘ಬಿಗ್​ ಬಾಸ್​ ಓಟಿಟಿ’ ಶುರುವಾಗಲಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಲ್ಲಿ ಬೆತ್ತಲೆ ಯೋಗ; ದಿನಕ್ಕೆ 50 ಲಕ್ಷ ಸಂಭಾವನೆ ಕೇಳಿದ ಸ್ಪರ್ಧಿ

ಬಿಗ್​ ಬಾಸ್​ನಲ್ಲಿ ‘ಕಣ್ಣೇ ಅದಿರಿಂದಿ’ ಗಾಯಕಿ ಮಂಗ್ಲಿ? ಹೆಚ್ಚಿತು ವೀಕ್ಷಕರ ನಿರೀಕ್ಷೆ

Follow us on

Related Stories

Most Read Stories

Click on your DTH Provider to Add TV9 Kannada